ಸಪ್ತಧಾರಾ; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಘೋಷಿಸಿದ ‘ವಿಕಸಿತ ಭಾರತ’ದ 7 ಸುಧಾರಣೆಗಳಿವು – Kannada News | PM Independence Day Speech What is Narendra Modis Saptadhara plan 7 Viksit reforms

ನವದೆಹಲಿ, ಆಗಸ್ಟ್ 15: ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ (Independence Day 2026) ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ‘ಸಪ್ತಧಾರಾ’ ಸುಧಾರಣೆಗಳನ್ನು ಘೋಷಿಸಿದ್ದಾರೆ. ಉತ್ಪಾದನೆ, ಕೃಷಿ, ತಂತ್ರಜ್ಞಾನ, ಗತಿ ಶಕ್ತಿ, ರಕ್ಷಣೆ, ಹಸಿರು ಇಂಧನ ಮತ್ತು ಸಾಫ್ಟ್ ಪವರ್‌ಗಳನ್ನು ಭಾರತದ ಭವಿಷ್ಯವನ್ನು ರೂಪಿಸುವ 7 ಶಕ್ತಿಯ ಧಾರೆಗಳೆಂದು ಪ್ರಧಾನಿ ಗುರುತಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಚೀನ ಕಾಲದ ‘ಸಪ್ತ ಸಿಂಧು’ (7 ನದಿಗಳು) ಪರಿಕಲ್ಪನೆಯನ್ನು ಉಲ್ಲೇಖಿಸುತ್ತಾ, ಭಾರತದ ಅಭಿವೃದ್ಧಿಯ ಪಯಣವನ್ನು ಮುನ್ನಡೆಸಲು ಹೊಸ ಶಕ್ತಿಯ ಧಾರೆಗಳ ಅಗತ್ಯವಿದೆ ಎಂದು ಹೇಳಿದರು.

ಉತ್ಪಾದನೆ (Manufacturing):

ಉತ್ಪಾದನಾ ಕ್ಷೇತ್ರವನ್ನು ಭಾರತದ ಮುಂದಿನ ಪ್ರಗತಿಯ ಪಯಣದ ಅಡಿಪಾಯ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ವಲಯದ ಬೃಹತ್ ವಿಸ್ತರಣೆಗೆ ಕರೆ ನೀಡಿದರು. ಭಾರತವು ಕೇವಲ ಬಿಡಿಭಾಗಗಳನ್ನು ತಯಾರಿಸುವುದಕ್ಕೆ ಸೀಮಿತವಾಗದೆ, ಸಂಪೂರ್ಣ ಸಿದ್ಧ ಉತ್ಪನ್ನಗಳನ್ನು (ತಯಾರಿಸುವುದರತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ಜಾಗತಿಕ ಪೂರೈಕೆ ಸರಣಿಯಲ್ಲಿ ಭಾರತವನ್ನು ಪ್ರಮುಖ ಆಟಗಾರನನ್ನಾಗಿ ಮಾಡಬೇಕಾದ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ವೆಚ್ಚ, ಗುಣಮಟ್ಟ ಮತ್ತು ಪ್ರಮಾಣ ಎಂಬ ಮೂರು ನಿರ್ಣಾಯಕ ಅಂಶಗಳತ್ತ ಗಮನ ಹರಿಸುವಂತೆ ಉತ್ಪಾದಕರಿಗೆ ಮನವಿ ಮಾಡಿದರು.

ಕೃಷಿ ಮತ್ತು ಆಹಾರ ಭದ್ರತೆ (Agriculture and Food Security):

ಸಪ್ತಧಾರಾದ ಎರಡನೇ ಸ್ತಂಭ ಕೃಷಿ ಮತ್ತು ಆಹಾರ ಉತ್ಪಾದನೆಯಾಗಿದೆ. ಭಾರತದ ಅಭಿವೃದ್ಧಿಯ ಪಯಣದಲ್ಲಿ ಕೃಷಿ ವಲಯದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಮೋದಿ, ಆಹಾರ ಮತ್ತು ಕೃಷಿಯು ದೇಶದ ಆರ್ಥಿಕ ಪ್ರಗತಿಯ ಕೇಂದ್ರಬಿಂದುವಾಗಿ ಮುಂದುವರಿಯಲಿದೆ ಎಂದರು. ದೀರ್ಘಕಾಲದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೃಷಿ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ: Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?

ತಂತ್ರಜ್ಞಾನ ಮತ್ತು ನಾವೀನ್ಯತೆ (Technology and Innovation):

ತಂತ್ರಜ್ಞಾನ ಮತ್ತು ನಾವೀನ್ಯತೆಯು ಭಾರತದ ಪ್ರಗತಿಯ ತಂತ್ರಜ್ಞಾನ ಆಧಾರಿತ ಮೂರನೇ ಧಾರೆಯಾಗಿದೆ. ಪ್ರಪಂಚವು ಡಾಟಾ ಸೆಂಟರ್‌ಗಳು, ರೊಬೊಟಿಕ್ಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಯುಗವನ್ನು ಪ್ರವೇಶಿಸುತ್ತಿದ್ದು, ಭಾರತವು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ತನ್ನನ್ನು ತಾನು ರೂಪಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಇದೇ ವೇಳೆ ಯುಪಿಐ (UPI) ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತವು ಈಗಾಗಲೇ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಈಗ ಮತ್ತಷ್ಟು ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಎಂದರು. ಮುಂದಿನ ಪೀಳಿಗೆಯ ದೂರಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯನ್ನು ವೇಗಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಭಾರತದಲ್ಲೇ ತಯಾರಾಗುವ ‘ಮೇಡ್ ಇನ್ ಇಂಡಿಯಾ’ 6ಜಿ (6G) ತಂತ್ರಜ್ಞಾನವು ದೇಶದ ಪ್ರತಿಯೊಂದು ಮೂಲೆಗೂ ತಲುಪಬೇಕು ಎಂದು ಕರೆ ನೀಡಿದರು.

ಗತಿ ಶಕ್ತಿ (Gati Shakti):

ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯು ಸಪ್ತಧಾರಾದ ನಾಲ್ಕನೇ ಧಾರೆಯಾಗಿದೆ. ವ್ಯಾಪಾರವನ್ನು ಉತ್ತೇಜಿಸಲು, ಲಾಜಿಸ್ಟಿಕ್ಸ್ ಸುಧಾರಿಸಲು ಮತ್ತು ಉದ್ದಿಮೆಗಳನ್ನು ಬಲಪಡಿಸಲು ರಸ್ತೆಗಳು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಮುಂದುವರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಅತಿವೇಗದ ಸಂಪರ್ಕವು ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಭಾರತದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ರಕ್ಷಾ ಶಕ್ತಿ (Raksha Shakti):

ಐದನೇ ಸ್ತಂಭವು ರಕ್ಷಣೆ ಮತ್ತು ಮಿಲಿಟರಿ ಸ್ವಾವಲಂಬನೆಯ ಮೇಲೆ ಗಮನ ಹರಿಸುತ್ತದೆ. ಭಾರತವು ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಬೇಕು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ಮೋದಿ ಹೇಳಿದರು. ಡ್ರೋನ್ ಮತ್ತು ಕೌಂಟರ್-ಡ್ರೋನ್ ವ್ಯವಸ್ಥೆಗಳು ಸೇರಿದಂತೆ ಉದಯೋನ್ಮುಖ ಮಿಲಿಟರಿ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡಿದರು. ಪ್ರಧಾನಿಯವರ ಪ್ರಕಾರ, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ‘ಆತ್ಮನಿರ್ಭರ ರಕ್ಷಣಾ ವಲಯ’ ಅತ್ಯಂತ ಅತ್ಯಗತ್ಯವಾಗಿದೆ.

ಇದನ್ನೂ ಓದಿ: 80ನೇ ಸ್ವಾತಂತ್ರ್ಯ ದಿನಾಚರಣೆ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಥಮ ಬಾರಿಗೆ ಮೊಳಗಿದ ‘ವಂದೇ ಮಾತರಂ’

ಹಸಿರು ಇಂಧನ (Green Energy and Blue Economy):

ಹಸಿರು ಇಂಧನವನ್ನು ಭಾರತದ ಪ್ರಗತಿಯ ಮಾದರಿಯ ಆರನೇ ಧಾರೆಯನ್ನಾಗಿ ಗುರುತಿಸಲಾಗಿದೆ. ಪರಿಸರ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸ್ವಚ್ಛ ಇಂಧನ ತಂತ್ರಜ್ಞಾನಗಳಲ್ಲಿ ನಾವೀನ್ಯತೆ (ಇನೋವೇಶನ್) ಅಗತ್ಯ ಎಂದು ಮೋದಿ ಹೇಳಿದರು. ನವೀಕರಿಸಬಹುದಾದ ಇಂಧನ ವಲಯವನ್ನು ವಿಸ್ತರಿಸಲು ಮತ್ತು ಸ್ವಚ್ಛ ಇಂಧನ ಮೂಲಗಳತ್ತ ವೇಗವಾಗಿ ಸಾಗಲು ಹೆಚ್ಚಿನ ಶ್ರಮ ವಹಿಸುವಂತೆ ಅವರು ಕರೆ ನೀಡಿದರು.

“ಭಾರತವು ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹಣೆಯಲ್ಲಿ ಜಾಗತಿಕ ನಾಯಕತ್ವವನ್ನು ಸಾಧಿಸಬೇಕು.” ಇದೇ ವೇಳೆ ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ ಮತ್ತು ಸಾಗರ ತಂತ್ರಜ್ಞಾನದಲ್ಲಿ ಅತ್ಯಂತ ಹೆಚ್ಚಿನ ಅವಕಾಶಗಳನ್ನು ನೀಡುವ ‘ಬ್ಲೂ ಎಕಾನಮಿ’ (ಸಾಗರ ಆರ್ಥಿಕತೆ) ಭಾರತದ ಪ್ರಗತಿಗೆ ಹೊಸ ಹಾದಿಗಳನ್ನು ತೆರೆಯುತ್ತದೆ ಎಂದರು.

ಸಾಫ್ಟ್ ಪವರ್ (Soft Power):

ಸಪ್ತಧಾರಾದ ಅಂತಿಮ ಸ್ತಂಭ ಭಾರತದ ಸಾಫ್ಟ್ ಪವರ್ ಆಗಿದೆ. ಭಾರತದ ಸಾಂಸ್ಕೃತಿಕ ಪ್ರಭಾವವು ಅದರ ಗಡಿಗಳನ್ನು ಮೀರಿ ವಿಸ್ತರಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಯೋಗ, ಕರಕುಶಲ ವಸ್ತುಗಳು, ಚಲನಚಿತ್ರಗಳು, ಅನಿಮೇಷನ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ಮತ್ತು ಸೃಜನಶೀಲ ರಂಗವನ್ನು ದೇಶದ ಸಾಫ್ಟ್ ಪವರ್‌ನ ಪ್ರಮುಖ ಭಾಗಗಳೆಂದು ಉಲ್ಲೇಖಿಸಿದರು. ಭಾರತದ ಬೃಹತ್ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬೆಟ್ಟು ಮಾಡಿದ ಅವರು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ದೇಶವು ಇನ್ನಷ್ಟು ಕೆಲಸ ಮಾಡಬೇಕಾಗಿದೆ ಎಂದರು.

ಪ್ರಧಾನಮಂತ್ರಿ ಮೋದಿ ಪ್ರಕಾರ, ಈ 7 ಧಾರೆಗಳು ಭಾರತದ ಆರ್ಥಿಕತೆಯನ್ನು ಬಲಪಡಿಸುವುದು ಮಾತ್ರವಲ್ಲದೆ, 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. “ಕಳೆದ 5 ರಿಂದ 7 ದಶಕಗಳಲ್ಲಿ ಸಾಧಿಸಲು ಸಾಧ್ಯವಾಗದಿದ್ದನ್ನು, ಮುಂಬರುವ 5ರಿಂದ 7 ವರ್ಷಗಳಲ್ಲಿ ಈ ಸಪ್ತಧಾರಾದ ಶಕ್ತಿ ಮತ್ತು ಪರಾಕ್ರಮದ ಮೂಲಕ ಸಾಧಿಸಲಿದ್ದೇವೆ. ನಾವು ದೇಶಕ್ಕೆ ಹೊಸ ಎತ್ತರ, ಹೊಸ ವೇಗ ಮತ್ತು ಹೊಸ ಗುರಿಗಳನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ನೀಡಲಿದ್ದೇವೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುವಜನತೆಗೆ ಎಐ ಶಿಕ್ಷಣದ ಕೊಡುಗೆ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ – Kannada News | CM DKS Bengaluru Independence Day Address: Progress, Drought, Youth and AI Initiatives

ಬೆಂಗಳೂರು, ಆ.15: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಮಸ್ತ ರಾಜ್ಯದ ಜನತೆಯನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ, ಆರ್ಥಿಕ ಪ್ರಗತಿ, ಬರ ನಿರ್ವಹಣೆ ಹಾಗೂ ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ದೇಶದ ಮುಂದೆ ತೆರೆದಿಟ್ಟರು.

“ಕಳೆದ 2 ತಿಂಗಳಲ್ಲಿ ಜನಸ್ನೇಹಿತ ಆಡಳಿತ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಶಾಸಕರು ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲುಗಳನ್ನು ಆಲಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಸ್ಥಿತಿ ಪರಿಶೀಲನೆಗೆ ಪ್ರತಿಯೊಬ್ಬ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಕೆರೆ-ಕಟ್ಟೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಬೆಂಗಳೂರು ನಗರದ ಕುಡಿಯುವ ನೀರಿನ ಅಭಾವ ತಪ್ಪಿಸಲು ಹಾಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

“ರಾಜ್ಯದ ತಲಾದಾಯ ಪ್ರಸ್ತುತ 4.33 ಲಕ್ಷ ರೂ. ತಲುಪಿದ್ದು, ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಸ್ಮರಿಸಿದ ಅವರು, ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ ತಲುಪಿಸುವ ಬೃಹತ್ ನೀಲನಕ್ಷೆ ಸಿದ್ಧಪಡಿಸಲಾಗಿದೆ,” ಎಂದರು. 5 ಗ್ಯಾರಂಟಿ ಯೋಜನೆಗಳಿಗೆ 3 ವರ್ಷಗಳಲ್ಲಿ 15,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2,000 ರೂ. ಧನಸಹಾಯ ಹಾಗೂ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಿವಾಹಿತ ಮಹಿಳೆಯರು ಎದುರಿಸುತ್ತಿದ್ದ ದೌರ್ಜನ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಬಸವಣ್ಣನವರ ತತ್ವಾದರ್ಶಗಳಂತೆ ಸರ್ಕಾರ ನಡೆಯುತ್ತಿದ್ದು, ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಅವರ ಹೋರಾಟವನ್ನು ಸ್ಮರಿಸಿದರು. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರದ ಬೆಳೆವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು. ಯುವಜನತೆಯ ಭವಿಷ್ಯವನ್ನು ಉಜ್ವಲಗೊಳಿಸಲು ಹಾಗೂ ತಾಂತ್ರಿಕವಾಗಿ ಸಜ್ಜುಗೊಳಿಸಲು ಹಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಸದಾಶಿವನಗರ ನಿವಾಸದಲ್ಲಿ ಸಿಎಂ ಡಿಕೆಶಿ ಧ್ವಜಾರೋಹಣ: ರಾಗ-ದ್ವೇಷವಿಲ್ಲದೆ ಜನರ ಸೇವೆಗೆ ಬದ್ಧ ಎಂದು ಮುಖ್ಯಮಂತ್ರಿ

ಅಧಿಕಾರಕ್ಕೆ ಬಂದ ಕ್ಷಣದಿಂದಲೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಸಿಎಂ, ಯುವ ಸಮೂಹದ ಸಶಕ್ತೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ರಾಜ್ಯದ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸಲು ಶಿಕ್ಷಣ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಶಿಕ್ಷಣವನ್ನು ಪರಿಚಯಿಸುವ ನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಯುವಜನರಲ್ಲಿ ದೇಶಭಕ್ತಿ, ಸಮಾನತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ತಂಡಗಳನ್ನು ನಿರೂಪಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಯುವಶಕ್ತಿಯೇ ನವ ಭಾರತದ ತಡಿಪಾಯವಾಗಿದ್ದು, ಅವರ ಅಭಿವೃದ್ಧಿಗೆ ಅಗತ್ಯವಿರುವ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ಕಾರ್ಯಕ್ರಮಗಳನ್ನು ಸರ್ಕಾರ ಆದ್ಯತೆಯ ಮೇಲೆ ಜಾರಿಗೆ ತರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Happy Independence Day 2026: ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶಗಳು – Kannada News | Happy Independence Day 2026: Here are the best Independence Day messages, Quotes

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳುImage Credit source: magnific

ಆಗಸ್ಟ್ 15 ಭಾರತೀಯರ ಪಾಲಿಗೆ ವಿಶೇಷ ದಿನವಾಗಿದೆ.  1947 ರ ಈ ದಿನದಂದು, ಭಾರತವು ದೀರ್ಘ ಹೋರಾಟದ ನಂತರ ಬ್ರಿಟೀಷರನ್ನು ದೇಶ ಬಿಟ್ಟು ತೊಳಗಿಸಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ವೀರರನ್ನು ನಮಿಸಲು ಪ್ರತಿವರ್ಷ ದೇಶಾದ್ಯಂತ ಬಹಳ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲಾಗುತ್ತದೆ. ಬಾನೆತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. 80 ನೇ ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಸ್ವಾತಂತ್ರ್ಯೋತ್ಸವದ ಈ ಅರ್ಥಪೂರ್ಣ ಶುಭಾಶಯಗಳನ್ನು ಕಳುಹಿಸುವ ಮೂಲಕ ದೇಶಭಕ್ತಿಯ ಸಂದೇಶವನ್ನು ಹರಡಿ.

ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶಗಳು:

  • ನಾವು ಪಾಲಿಸುವ ಸ್ವಾತಂತ್ರ್ಯವನ್ನು ಮತ್ತು ಅದನ್ನು ಸಾಧ್ಯವಾಗಿಸಿದ ವೀರರನ್ನು ಗೌರವಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
  • ಬಾನೆತ್ತರಲ್ಲಿ ಹಾರುತ್ತಿರುವ ತಿರಂಗ ಧ್ವಜವು ಸಾರುತಿದೆ ಇಂದು ಸ್ವಾತಂತ್ರ್ಯೋತ್ಸವವೆಂದು ಪ್ರತಿಯೊಬ್ಬ ಭಾರತೀಯನ ಮನೆಮನಗಳಲ್ಲಿ ಸಂಭ್ರಮಿಸುವ ದಿನವಿಂದು. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
  • ದೇಶದ ಹಿತಕ್ಕಾಗಿ ದುಡಿಯೋಣ, ದೇಶದ ರಕ್ಷಣೆಗಾಗಿ ಮಡಿಯೋಣ, ದೇಶವನ್ನು ಹೆಮ್ಮೆ ಪಡುವಂತೆ ಮಾಡೋಣ, ಸ್ವಾತಂತ್ರ್ಯ ವೀರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
  • ಹೆತ್ತ ತಾಯಿ ಹೊತ್ತ ಭೂಮಿ ನಮ್ಮ ಪಾಲಿನ ನಿಜವಾದ ದೇವರು. ಸ್ವಾತಂತ್ರ್ಯ ಹೋರಾಟಗಾರರಂತೆ ಭೂಮಿ ತಾಯಿಯ ರಕ್ಷಣೆಗಾಗಿ ಸದಾ ಸಿದ್ಧರಿರೋಣ. ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
  • ಪ್ರತಿ ದಿನವೂ ನಮ್ಮ ರಾಷ್ಟ್ರವನ್ನು ಉತ್ತಮ ದೇಶವನ್ನಾಗಿ ಮಾಡಲು ಶ್ರಮಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
  • ಈ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಮ್ಮ ಶ್ರೇಷ್ಠ ಭಾರತದ ಶಾಂತಿ ಮತ್ತು ಏಕತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
  • ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗಗಳನ್ನು ನೆನಪಿಸಿಕೊಳ್ಳೋಣ ಮತ್ತು ಅವರಂತೆಯೇ ದೇಶ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗೋಣ. ನನ್ನೆಲ್ಲಾ ಮಿತ್ರರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
  • ಸ್ವಾತಂತ್ರ್ಯ ಹೋರಾಟಗಾರರಂತೆ ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಗೆಳೆಯರೇ.
  • ಇಂದು ನಾವು ಮಾತಾಡುವ ಮತ್ತು ಕೇಳುವ ಹಕ್ಕನ್ನು ಹೊಂದಿದ್ದೇವೆ ಎಂದರೆ, ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಪರಿಶ್ರಮ. ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ, ದೇಶ ರಕ್ಷಣೆಗಾಗಿ ಅವರ ಮಾರ್ಗದಲ್ಲಿಯೇ ಸಾಗೋಣ. 80 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
  • ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಎಲ್ಲಾ ವೀರರಿಗೂ ನಮನಗಳನ್ನು ಸಲ್ಲಿಸೋಣ, ದೇಶದ ರಕ್ಷಣೆಗಾಗಿ ಅವರ ಹಾದಿಯಲ್ಲಿಯೇ ಸಾಗೋಣ. ನನ್ನೆಲ್ಲಾ ಸ್ನೇಹಿತರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
  • ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಭಾರತ ನಮ್ಮ ಗುರುತು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
  • ಹುತಾತ್ಮರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ತ್ಯಾಗಕ್ಕೆ ನಮಸ್ಕರಿಸುತ್ತಾ, ಸ್ವಾತಂತ್ರ್ಯ ದಿನದಂದು ನಾನು ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
  • ಜಾತಿ ತಾರತಮ್ಯ ಅಥವಾ ಧರ್ಮದ ಅಡೆತಡೆಗಳಿಲ್ಲದೆ, ನಮ್ಮ ಭಾರತವು ಏಕತೆ ಮತ್ತು ಸಹೋದರತ್ವದಿಂದ ಬಲಗೊಳ್ಳಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
  • ದೇಶದ ಸ್ವಾತಂತ್ರ್ಯಕ್ಕಾಗಿ ತಮಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರರಿಗೆ ನಮನಗಳು. ಜೈ ಹಿಂದ್‌, ಜೈ ಭಾರತ.
  • ಸ್ವಾತಂತ್ರ್ಯ ಕೇವಲ ಮೂರಕ್ಷರದ ಪದವಲ್ಲ, ಅದು ಅಸಂಖ್ಯಾತ ವೀರರ ತ್ಯಾಗದ ಕಥೆ. ಈ ಸ್ವಾತಂತ್ರ್ಯ ದಿನದಂದು, ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಪ್ರತಿಜ್ಞೆ ಮಾಡೋಣ. ಜೈ ಹಿಂದ್.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದಾಶಿವನಗರ ನಿವಾಸದಲ್ಲಿ ಸಿಎಂ ಡಿಕೆಶಿ ಧ್ವಜಾರೋಹಣ: ರಾಗ-ದ್ವೇಷವಿಲ್ಲದೆ ಜನರ ಸೇವೆಗೆ ಬದ್ಧ ಎಂದು ಮುಖ್ಯಮಂತ್ರಿ – Kannada News | Karnataka CM DK Shivakumars 77th I Day Celebration: Tributes and Flag Hoisting

ಬೆಂಗಳೂರು, ಆ.15: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಮ್ಮ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅದ್ದೂರಿಯಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಿದರು. ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ ಮನೆ ಮಾಡಿದ್ದ ಈ ದಿನದಂದು, ಡಿಸಿಎಂ ಅವರು ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು. ಈ ಮಹತ್ವದ ಸಂದರ್ಭದಲ್ಲಿ, ಅವರ ಪತ್ನಿ ಶ್ರೀಮತಿ ಉಷಾ ಶಿವಕುಮಾರ್ ಅವರು ಅವರ ಜೊತೆಯಲ್ಲಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಈ ಸಮಾರಂಭದಲ್ಲಿ, ಸಿಎಂ ಡಿ.ಕೆ. ಶಿವಕುಮಾರ್ ಅವರು ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಮಹಾನ್ ನಾಯಕರಿಗೆ ಗೌರವ ನಮನ ಸಲ್ಲಿಸಿದರು. ಅವರ ತ್ಯಾಗ ಮತ್ತು ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ಧ್ವಜಾರೋಹಣದ ನಂತರ, ದೇಶಭಕ್ತಿ ಗೀತೆಯಾದ ವಂದೇ ಮಾತರಂ ಅನ್ನು ಭಕ್ತಿಯಿಂದ ಪಠಿಸಲಾಯಿತು, ಇದು ಸಮಾರಂಭದಲ್ಲಿ ನೆರೆದಿದ್ದವರಲ್ಲಿ ದೇಶಪ್ರೇಮದ ಭಾವನೆಗಳನ್ನು ಇನ್ನಷ್ಟು ಹೆಚ್ಚಿಸಿತು. ಬಳಿಕ, ಉಪ ಮುಖ್ಯಮಂತ್ರಿಗಳು ಅಲ್ಲಿದ್ದವರಿಗೆ ಸಿಹಿ ವಿತರಿಸಿ, ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಈ ಸರಳವಾದ ಆದರೆ ಅರ್ಥಪೂರ್ಣವಾದ ಕಾರ್ಯಕ್ರಮವು ದೇಶಭಕ್ತಿಯ ಪ್ರತೀಕವಾಗಿತ್ತು. ಸಮಾರಂಭದ ಭಾಗವಾಗಿ ಗೌರವ ರಕ್ಷೆ (ಗಾರ್ಡ್ ಆಫ್ ಆನರ್) ಕೂಡ ಆಯೋಜಿಸಲಾಗಿತ್ತು, ಇದು ಸಮಾರಂಭಕ್ಕೆ ಔಪಚಾರಿಕತೆಯನ್ನು ತಂದಿತು. ಡಿ.ಕೆ. ಶಿವಕುಮಾರ್ ಅವರ ಈ ಕಾರ್ಯಕ್ರಮವು ದೇಶದ ಸ್ವಾತಂತ್ರ್ಯದ ಮಹತ್ವವನ್ನು ಮತ್ತು ದೇಶಭಕ್ತಿಯ ಸಂದೇಶವನ್ನು ಸಾರಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CM DK Shivakumar Independence Day Speech Live: ಧ್ವಜಾರೋಹಣ ಮಾಡಿ ಸಿಎಂ ಡಿ.ಕೆ. ಶಿವಕುಮಾರ್ ಭಾಷಣ – Kannada News | Karnataka CM D.K. Shivakumar Greets Nation on 80th Independence Day; Honors Legends

ಬೆಂಗಳೂರು, ಆ.15: 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಡಿನ ಹಾಗೂ ದೇಶದ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ. ದೇಶದ ಐಕ್ಯತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಎಲ್ಲಾ ಮಹನೀಯರಿಗೆ ಗೌರವ ನಮನ ಸಲ್ಲಿಸಿದರು. ಇದೀಗ ಸಿಎಂ ಡಿಕೆ ಶಿವಕುಮಾರ್​​ ಅವರು ಭಾಷಣ ಮಾಡುತ್ತಿದ್ದಾರೆ, ಇಲ್ಲಿದೆ ನೋಡಿ ಲೈವ್ ವಿಡಿಯೋ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್ – Kannada News | Yash Becomes First Kannada Actor on Aap Ki Adalat; Reveals Why He Plays Ravana in Ramayana

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ವೇಳೆ ಅವರು ದೇಶದ ಅತ್ಯಂತ ಜನಪ್ರಿಯ ಟಿವಿ ಶೋ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಶೋಗೆ ಬಂದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಿದ ಯಶ್ (Yash) , ಶ್ರೀರಾಮನ ಪಾತ್ರ ಮಾಡುವ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಕುತೂಹಲಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ನೀವು ನಿರ್ಮಾಪಕರಾಗಿದ್ದೀರಿ. ರಾಮನ ಪಾತ್ರವನ್ನೆ ನೀವು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ’ ಎಂದು ರಜತ್ ಶರ್ಮ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸದ ಅವರು, ‘ಶ್ರೀರಾಮನ ಒಳ್ಳೆಯತನ ಮತ್ತು ಮಹತ್ವವನ್ನು ಎತ್ತಿ ತೋರಿಸಬೇಕಾದರೆ ರಾವಣನ ಶಕ್ತಿ ಹಾಗೂ ಕೆಟ್ಟತನವೂ ಅಷ್ಟೇ ಪ್ರಬಲವಾಗಿರಬೇಕು’ ಎಂದು ಯಶ್ ವಿವರಿಸಿದ್ದಾರೆ.

‘ರಾಮಾಯಣದ ಕಥೆಯಲ್ಲಿ ರಾವಣನಿಗೆ ಸಾವು ಇಲ್ಲವೇ ಇಲ್ಲ, ಆತನ ಬಳಿ ಬ್ರಹ್ಮಾಂಡದ ವರಗಳ ಬಲವಿದೆ ಮತ್ತು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎನ್ನುವಂತಹ ಸನ್ನಿವೇಶ ಸೃಷ್ಟಿಯಾದಾಗ ಮಾತ್ರ, ಪ್ರಭು ಶ್ರೀರಾಮ ಆತನನ್ನು ಸಂಹರಿಸುವ ಕ್ಷಣಕ್ಕೆ ನಿಜವಾದ ಮಹತ್ವ ಮತ್ತು ರೋಮಾಂಚನ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ

ಈ ಸಿನಿಮಾದ ಸಹ-ನಿರ್ಮಾಪಕರೂ ಆಗಿರುವ ಯಶ್, ‘ಚಿತ್ರದಲ್ಲಿ ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ನಾವು ನಮ್ಮ ಅಹಂ ಪಕ್ಕಕ್ಕಿಟ್ಟು ಇಡೀ ಸಿನಿಮಾದ ಒಳ್ಳೆಯತನಕ್ಕಾಗಿ ಹಾಗೂ ಶ್ರೀರಾಮನ ಪಾತ್ರದ ಪ್ರಭಾವ ಹೆಚ್ಚಿಸಲು ಈ ನಿರ್ಧಾರ ತಳೆದಿದ್ದೇವೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಮಾಣು ಶಕ್ತಿಯಲ್ಲೂ ಭಾರತ ಸ್ವಾವಲಂಬಿಯಾಗಲಿದೆ; ಪ್ರಧಾನಿ ಮೋದಿ ಭರವಸೆ – Kannada News | Noted India moving towards greater self reliance in nuclear power PM Modi says in Independence Day Speech

ನವದೆಹಲಿ, ಆಗಸ್ಟ್ 15: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi Independence Day Speech) ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ಹೆಚ್ಚಿನ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಣುಶಕ್ತಿ, ಕಡಲಾಚೆಯ ತೈಲ ಅನ್ವೇಷಣೆ, ಪರ್ಯಾಯ ಇಂಧನಗಳು ಮತ್ತು ನಿರ್ಣಾಯಕ ಖನಿಜಗಳನ್ನು ಪ್ರಮುಖ ಸ್ತಂಭಗಳನ್ನಾಗಿ ಹೊಂದಿರುವ ವಿಸ್ತೃತ ಮಾರ್ಗಸೂಚಿಯನ್ನು ಅವರು ಅನಾವರಣಗೊಳಿಸಿದರು.

ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಎತ್ತಿಹಿಡಿದ ಪ್ರಧಾನಿಯವರು, ಭಾರತವು ಅಣುಶಕ್ತಿಯಲ್ಲಿ ಹೆಚ್ಚಿನ ಸ್ವಾವಲಂಬನೆಯತ್ತ ಸಾಗುತ್ತಿದೆ ಮತ್ತು ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ತಮ್ಮ ಸರ್ಕಾರವು ಸರಣಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಉಲ್ಲೇಖಿಸಿದರು.

“ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಮಾರ್ಗವೆಂದರೆ ಅಣುಶಕ್ತಿ. 2047ರ ವೇಳೆಗೆ ನಾವು 100 ಗಿಗಾವ್ಯಾಟ್ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದ್ದೇವೆ. ಈ ಗುರಿಯತ್ತ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಇದೇ ದಶಕದಲ್ಲಿ, ನಾವು 5 ಹೊಸ ಅಣು ರಿಯಾಕ್ಟರ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದೇವೆ. ಅವುಗಳನ್ನು ಕಾರ್ಯಗತಗೊಳಿಸಲು ನಾವು ಗುರಿಯನ್ನು ನಿಗದಿಪಡಿಸಿದ್ದೇವೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್ 15 ಅಲ್ಲ, 11ಕ್ಕೇ ಧ್ವಜಾರೋಹಣ; ಭಾರತದ ಈ 2 ಪ್ರಸಿದ್ಧ ದೇವಾಲಯಗಳಲ್ಲಿ ಮುಂಚಿತವಾಗಿಯೇ ಸ್ವಾತಂತ್ರ್ಯ ದಿನಾಚರಣೆ! – Kannada News | MP Temples Celebrate Independence Day Early: Hindu Calendar Tradition Revealed

ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಮಧ್ಯಪ್ರದೇಶದ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಮಾತ್ರ ಎರಡು ಮೂರು ದಿನ ಮುಂಚಿತವಾಗಿಯೇ ಆಚರಿಸಲಾಗಿದೆ. ಅಂದರೆ ಆಗಸ್ಟ್ 11ರಂದು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ. ಮಧ್ಯಪ್ರದೇಶದ ಮಂದಸೌರ್‌ನಲ್ಲಿರುವ ಪಶುಪತಿನಾಥ ದೇವಾಲಯ ಮತ್ತು ಉಜ್ಜಯಿನಿಯ ಬಡೇ ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜೆ, ತಿರಂಗಾ ಯಾತ್ರೆ ಹಾಗೂ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಅಪರೂಪದ ಸಂಪ್ರದಾಯವನ್ನು ಮುಂದುವರಿಸಲಾಗಿದೆ.

4 ದಿನ ಮುಂಚಿತವಾಗಿ ಆಚರಿಸಲು ಕಾರಣವೇನು?

ನಮಗೆಲ್ಲರಿಗೂ ತಿಳಿದಿರುವಂತೆ ಇಂಗ್ಲಿಷ್ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಅಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಾಗಿತ್ತು. ಈ ಎರಡೂ ದೇವಾಲಯಗಳಲ್ಲಿ ಗ್ರೆಗೋರಿಯನ್ ದಿನಾಂಕಕ್ಕಿಂತ ಹೆಚ್ಚಾಗಿ ಹಿಂದೂ ತಿಥಿ ಮತ್ತು ಕ್ಯಾಲೆಂಡರ್‌ಗೆ ಆದ್ಯತೆ ನೀಡಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ದಶಕಗಳ ಸಂಪ್ರದಾಯವಿದೆ. ಈ ವರ್ಷ ಶ್ರಾವಣ ಕೃಷ್ಣ ಚತುರ್ದಶಿಯು ಆಗಸ್ಟ್ 11ಕ್ಕೆ ಬಂದಿದ್ದರಿಂದ, ಅಂದೇ ಇಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಪಶುಪತಿನಾಥ ದೇವಾಲಯದಲ್ಲಿ ನಡೆದ ವಿಶೇಷ ಪೂಜೆ:

ಮಂದಸೌರ್‌ನ ಶಿವನಾ ನದಿ ದಡದಲ್ಲಿರುವ ಪ್ರಾಚೀನ ಪಶುಪತಿನಾಥ ದೇವಾಲಯದಲ್ಲಿ ಆಗಸ್ಟ್ 11 ರಂದು ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು. 1985 ರಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಂತೆ, ದೇವಾಲಯದ ಅಷ್ಟಮುಖಿ ಶಿವಲಿಂಗಕ್ಕೆ ದೂರ್ವಾ (ಗರಿಕೆ) ಹುಲ್ಲು ಬೆರೆಸಿದ ನೀರಿನಿಂದ ವಿಶೇಷ ಅಭಿಷೇಕ ಮಾಡಿ ವೇದಮಂತ್ರಗಳನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ 2047ರ ವೇಳೆಗೆ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಪ್ರಾರ್ಥಿಸಲಾಯಿತು. ಸುಮಾರು 250ಕ್ಕೂ ಹೆಚ್ಚು ಭಕ್ತರು ಈ ಸಂಭ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಬಡೇ ಗಣೇಶ ದೇವಸ್ಥಾನದಲ್ಲಿ ವಿಜೃಂಭಿಸಿದ ತಿರಂಗಾ ಯಾತ್ರೆ:

ಉಜ್ಜಯಿನಿಯ ಪ್ರಸಿದ್ಧ ಬಡೇ ಗಣೇಶ ದೇವಸ್ಥಾನದಲ್ಲಿ ಗಣೇಶನನ್ನು ‘ಗಣರಾಜ್ಯದ ದೇವರು’ ಎಂದು ಆರಾಧಿಸುವ ವಿಶೇಷ ಪದ್ಧತಿಯಿದೆ. ಆಗಸ್ಟ್ 11 ರಂದು ನಾಸಿಕ್‌ ಢೋಲ್, ವಾದ್ಯಮೇಳಗಳು ಹಾಗೂ ದೇಶಭಕ್ತಿಯ ಜಯಘೋಷಗಳ ನಡುವೆ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯ ತಿರಂಗಾ ಯಾತ್ರೆ ನಡೆಯಿತು. ನಂತರ ಗಣಪತಿಗೆ ರಾಷ್ಟ್ರಧ್ವಜವನ್ನು ಸಮರ್ಪಿಸಿ ಮಹಾ ಆರತಿ ಬೆಳಗಲಾಯಿತು. ಕೊನೆಯಲ್ಲಿ ದೇವಾಲಯದ ಮುಖ್ಯ ಶಿಖರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ, ಭಕ್ತರು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದರು.

ಸಂಪ್ರದಾಯ ಮತ್ತು ದೇಶಭಕ್ತಿಯ ಅನನ್ಯ ಸಂಗಮ:

ದೇಶಾದ್ಯಂತ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸುತ್ತಿದ್ದರೆ, ಧರ್ಮ ಮತ್ತು ದೇಶಭಕ್ತಿಯನ್ನು ಸಮ್ಮಿಳನಗೊಳಿಸಿ ತಿಥಿಯ ಪ್ರಕಾರ ಮುಂಚಿತವಾಗಿಯೇ ಆಚರಿಸುವ ಮಧ್ಯಪ್ರದೇಶದ ಈ ದೇವಾಲಯಗಳ ಸಂಪ್ರದಾಯವು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಉತ್ತಮ ನಿದರ್ಶನವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ನಿರ್ಧಾರ ನಮ್ಮದಲ್ಲ, FSSAI ಸೂಚನೆ: ಆಹಾರ ಇಲಾಖೆ ಸ್ಪಷ್ಟನೆ – Kannada News | FSSAI and Supreme Court Mandate Karnatakas Gutka and Pan Masala Prohibition

ಬೆಂಗಳೂರು, ಆ.15: ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದ ಕುರಿತು ನಡೆಯುತ್ತಿರುವ ಚರ್ಚೆಗಳ ಮಧ್ಯೆ, ಈ ನಿರ್ಧಾರವು ರಾಜ್ಯ ಆಹಾರ ಇಲಾಖೆಯದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಾಸ್ತವವಾಗಿ, ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳಿಗೆ ಈ ನಿಷೇಧವನ್ನು ಜಾರಿಗೊಳಿಸುವಂತೆ ಸೂಚಿಸಿದೆ. ಗುಟ್ಕಾ, ತಂಬಾಕು ಮತ್ತು ನಿಕೋಟಿನ್ ಅಂಶವಿರುವ ಪಾನ್ ಮಸಾಲಾ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ FSSAI ಆದೇಶ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್‌ನ 2016ರ ಸೆಪ್ಟೆಂಬರ್ 23ರ ಆದೇಶವನ್ನು ಆಧರಿಸಿದ್ದು, ಎಲ್ಲಾ ರಾಜ್ಯಗಳು ಇದನ್ನು ಪಾಲಿಸಬೇಕು. ಪ್ರತಿ ವರ್ಷ ಇಂತಹ ಅಧಿಸೂಚನೆಗಳನ್ನು ಹೊರಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುವ ಮೂಲಕ ಮಿಶ್ರಣ ಮಾಡಿಕೊಳ್ಳಲು ಅವಕಾಶ ನೀಡುವ ಪದ್ಧತಿಗೂ ಸಹ ನಿಷೇಧವಿದೆ. ಹೀಗೆ ಮಾಡಿದರೂ ಅಥವಾ ಎರಡನ್ನೂ ಒಟ್ಟಿಗೆ ಮಾರಾಟ ಮಾಡಿದರೂ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರದ ಈ ಸೂಚನೆಯಂತೆ ಕರ್ನಾಟಕದಲ್ಲೂ ಆದೇಶ ಜಾರಿಗೆ ತರಲಾಗಿದ್ದು, ರಾಜ್ಯ ಆಹಾರ ಸುರಕ್ಷತಾ ಆಯುಕ್ತರಿಗೆ FSSAI ನಿರ್ದೇಶನ ನೀಡಿದೆ. ಇದು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಕ್ರಮವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ನಟ ರಮೇಶ್ ಭಟ್ ಈಗ ಹೇಗಿದ್ದಾರೆ ನೋಡಿ – Kannada News | Senior Kannada Actor Ramesh Bhat Spotted at Jog Falls; Viral Video Wins Fans Hearts

ರಮೇಶ್ ಭಟ್ ಅವರು ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಂಕರ್ ನಾಗ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ. ಈಗ ಅವರು ಅಪರೂಪಕ್ಕೆ ಕಾಣಿಸಿಕೊಂಡಿದ್ದಾರೆ. ಮೈಸೂರು ಜೋಗ ಜಲಪಾತ ವೀಕ್ಷಣೆಗೆ ತೆರಳಿದ್ದರು. ರಾಜ, ರಾಣಿ, ರೋರರ್, ರಾಕೆಟ್ ವೀಕ್ಷಿಸಿ ಅವರು ಖುಷಿಪಟ್ಟರು. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ವಿಡಿಯೋ ಮೇಲಿದೆ ವೀಕ್ಷಿಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version