ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ – Kannada News | Severe Drought Forces Migration in Raichur: Over 40,000 People Leave Lingsugur, Says BJP MLA

ರಾಯಚೂರು, ಜುಲೈ 28: ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ಕಾರಣ, ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಒಣಗಿ ಹೋಗಿವೆ. ಮಳೆಯ ಕೊರತೆಯ ಜೊತೆಗೆ ಕಾಲುವೆಗಳಲ್ಲಿ ನೀರಿನ ಲಭ್ಯತೆಯೂ ಇಲ್ಲದಿರುವುದು ರೈತರ ಬದುಕನ್ನು ಮತ್ತಷ್ಟು ದುಸ್ತರವಾಗಿಸಿದೆ. ಲಿಂಗಸೂರು ತಾಲ್ಲೂಕಿನ ಚತ್ತರ ಗ್ರಾಮದಂತಹ ಹಲವೆಡೆಗಳಲ್ಲಿ ಹೊಲಗಳು ಸಂಪೂರ್ಣವಾಗಿ ಬರಡಾಗಿವೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವಂತೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಪ್ರಕಾರ, ಪ್ರತಿ ವರ್ಷ ರಾಯಚೂರು ಜಿಲ್ಲೆಯಿಂದ 60-65 ಸಾವಿರ ಜನರು ಗುಳೆ ಹೋಗುತ್ತಿದ್ದು, ಲಿಂಗಸೂರು ತಾಲ್ಲೂಕಿನಿಂದಲೇ ಈ ವರ್ಷ 40 ಸಾವಿರಕ್ಕೂ ಅಧಿಕ ಜನ ವಲಸೆ ಹೋಗುತ್ತಿದ್ದಾರೆ. ಈ ವರ್ಷದ ಬರಗಾಲವು ಕಳೆದ 10-15 ವರ್ಷಗಳಲ್ಲಿ ಕಂಡುಬರದಷ್ಟು ತೀವ್ರವಾಗಿದೆ. ಹಿಗಾಗಿ, ಗುಳೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಕೂಡಲೇ ಬರಗಾಲ ಘೋಷಣೆ, ಸಾಲಮನ್ನಾ, ಕೂಲಿ ಕೆಲಸ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Attract Wealth: ಸಾಲ ಬಾಧೆಯಿಂದ ಮುಕ್ತಿ ಪಡೆಯಲು ಮಂಗಳವಾರ ಬೆಲ್ಲದ ಈ ಸರಳ ಪರಿಹಾರ ಮಾಡಿ – Kannada News | Tuesday Jaggery Remedies for Hanuman: Effective Astrology Tips to Remove Debt and Attract Wealth

ಹನುಮಂತನಿಗೆ ಬೆಲ್ಲದ ವಿಶೇಷ ಪರಿಹಾರImage Credit source: Getty Images

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರವನ್ನು ಧೈರ್ಯ, ಶಕ್ತಿ ಮತ್ತು ಶೌರ್ಯದ ಕಾರಕನಾದ ಮಂಗಳ ಗ್ರಹಕ್ಕೆ (Mars) ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ, ಈ ದಿನವನ್ನು ಶ್ರೀ ರಾಮಭಕ್ತ ಹನುಮಂತನ ಆರಾಧನೆಗೆ ಅತ್ಯಂತ ಶುಭವೆಂದು ನಂಬಲಾಗಿದೆ. ಮಂಗಳವಾರದಂದು ಮಾರುತಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಜೀವನದ ಸಕಲ ಅಡೆತಡೆಗಳು ನಿವಾರಣೆಯಾಗಿ, ಆರ್ಥಿಕ ತೊಂದರೆಗಳು ಹಾಗೂ ಸಾಲದ ಹೊರೆ ಕಡಿಮೆಯಾಗುತ್ತದೆ. ವಿಶೇಷವಾಗಿ, ಮಂಗಳವಾರದಂದು ಬೆಲ್ಲವನ್ನು ಬಳಸಿ ಕೆಲವು ಸರಳ ಜ್ಯೋತಿಷ್ಯ ಪರಿಹಾರಗಳನ್ನು (Jaggery Remedies) ಮಾಡುವುದರಿಂದ ಮಂಗಳ ದೋಷ ಶಮನವಾಗಿ, ಹನುಮಂತನ ಅಪಾರ ಆಶೀರ್ವಾದದೊಂದಿಗೆ ಧನಾತ್ಮಕ ಫಲಿತಾಂಶಗಳು ಸಿಗುತ್ತವೆ.

ಮಂಗಳವಾರ ಮತ್ತು ಬೆಲ್ಲಕ್ಕಿರುವ ಜ್ಯೋತಿಷ್ಯ ಸಂಬಂಧವೇನು?

ಜ್ಯೋತಿಷ್ಯದಲ್ಲಿ ಬೆಲ್ಲವನ್ನು ಮಂಗಳ ಗ್ರಹಕ್ಕೆ ಸಂಬಂಧಿಸಿದ ಮುಖ್ಯ ವಸ್ತುವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ಮಂಗಳನ ದಿನ ಹಾಗೂ ಹನುಮಂತನನ್ನು ಈ ಗ್ರಹದ ಅಧಿಪತಿ ಎಂದು ಆರಾಧಿಸುವುದರಿಂದ, ಈ ದಿನ ಹನುಮನಿಗೆ ಬೆಲ್ಲವನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠ. ಯಾರಿಗೂ ತಿಳಿಯದಂತೆ (ರಹಸ್ಯವಾಗಿ) ಅಥವಾ ಬೆಲ್ಲವನ್ನು ದಾನ ಮಾಡುವುದರ ಮೂಲಕ ಹನುಮಂತನನ್ನು ಪ್ರಾರ್ಥಿಸಿದರೆ, ಜಾತಕದಲ್ಲಿ ಮಂಗಳ ಬಲಗೊಂಡು ವ್ಯಕ್ತಿಯಲ್ಲಿ ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಸಾಲದ ಸಂಕಷ್ಟದಿಂದ ಮುಕ್ತಿ ಪಡೆಯಲು ಬೆಲ್ಲದ ಪರಿಹಾರ:

ದೀರ್ಘಕಾಲದಿಂದ ತೀರದ ಸಾಲದ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಳಗಿನ ಪರಿಹಾರವನ್ನು ಅನುಸರಿಸಬಹುದು:

  • ಅಗತ್ಯ ಸಾಮಗ್ರಿಗಳು: 1.25 ಕೆಜಿ ಬೆಲ್ಲ ಮತ್ತು 1.25 ಕೆಜಿ ಹುರಿದ ಕಡಲೆ.
  • ವಿಧಾನ: ಮಂಗಳವಾರದಂದು ಹನುಮಾನ್ ದೇವಾಲಯಕ್ಕೆ ತೆರಳಿ ಈ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸಿ.
  • ಅರ್ಪಿಸಿದ ನೈವೇದ್ಯದ ಒಂದು ಸಣ್ಣ ಭಾಗವನ್ನು ಪ್ರಸಾದವಾಗಿ ನೀವು ಸ್ವೀಕರಿಸಿ, ಉಳಿದ ಭಾಗವನ್ನು ನಿರ್ಗತಿಕರಿಗೆ ಅಥವಾ ಬಡವರಿಗೆ ದಾನ ಮಾಡಿ.
  • ಈ ಪ್ರಕ್ರಿಯೆಯನ್ನು ಅತ್ಯಂತ ಭಕ್ತಿಯಿಂದ ಮತ್ತು ರಹಸ್ಯವಾಗಿ ಸತತ 11 ಮಂಗಳವಾರಗಳ ಕಾಲ ಮಾಡಿದರೆ, ಸಾಲದ ಹೊರೆ ಬೇಗನೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಆರ್ಥಿಕ ಪ್ರಗತಿ ಮತ್ತು ಧನ ಲಾಭಕ್ಕಾಗಿ ಪರಿಹಾರ:

ನಿರಂತರ ಆರ್ಥಿಕ ಅಡಚಣೆಗಳನ್ನು ಎದುರಿಸುತ್ತಿರುವವರು ಒಂದು ಸಣ್ಣ ಕೆಂಪು ಬಟ್ಟೆಯನ್ನು ತೆಗೆದುಕೊಂಡು, ಅದರಲ್ಲಿ ಸ್ವಲ್ಪ ಬೆಲ್ಲ ಮತ್ತು ಒಂದು ತಾಮ್ರದ ನಾಣ್ಯವನ್ನು ಇಟ್ಟು ಗಂಟು ಕಟ್ಟಿ. ಈ ಗಂಟನ್ನು ಹನುಮಂತನ ಪಾದಗಳ ಬಳಿ ಇಟ್ಟು, ಭಕ್ತಿಯಿಂದ ಹನುಮಾನ್ ಚಾಲೀಸಾ ಪಠಿಸಿ. ಮರುದಿನ, ಆ ಗಂಟನ್ನು ತಂದು ನಿಮ್ಮ ಮನೆಯ ಸೇಫ್ (ಬೀರು) ಅಥವಾ ಹಣ ಇಡುವ ಸ್ಥಳದಲ್ಲಿ ಭದ್ರವಾಗಿಡಿ. ಈ ಪರಿಹಾರವು ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ತಂದು, ಹೊಸ ಧನಾತ್ಮಕ ಅವಕಾಶಗಳನ್ನು ಸೃಷ್ಟಿಸುತ್ತದೆ.

ಕುಟುಂಬದಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚಿಸಲು:

ಮನೆಯಲ್ಲಿ ಆಗಾಗ ಕೌಟುಂಬಿಕ ಕಲಹಗಳು ಅಥವಾ ಮಾನಸಿಕ ಅಶಾಂತಿ ಉಂಟಾಗುತ್ತಿದ್ದರೆ ಮಂಗಳವಾರ ಸಂಜೆಯ ಸಮಯದಲ್ಲಿ ಹನುಮಂತನಿಗೆ ಬೆಲ್ಲ ಮತ್ತು ಕೊತ್ತಂಬರಿ ಸೊಪ್ಪನ್ನು ಅರ್ಪಿಸಿ. ಈ ಸರಳ ಆಚರಣೆಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ವಾತಾವರಣವನ್ನು ತರುತ್ತದೆ ಹಾಗೂ ಕುಟುಂಬ ಸದಸ್ಯರಲ್ಲಿ ಪ್ರೀತಿ-ವಾತ್ಸಲ್ಯವನ್ನು ಹೆಚ್ಚಿಸುತ್ತದೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಂಪ್ರದಾಯಿಕ ಜ್ಯೋತಿಷ್ಯ ನಂಬಿಕೆಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಆಧರಿಸಿದೆ. ಯಾವುದೇ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ವಿಷಯ ತಜ್ಞರು ಅಥವಾ ಜ್ಯೋತಿಷಿಗಳನ್ನು ಸಂಪರ್ಕಿಸುವುದು ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್‌, ದೆಹಲಿಯಲ್ಲಿ ಕೈ ನಾಯಕರ ಬಿರುಸಿನ ಸಭೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 28 July 2026 Parliament Monsoon Session, Pralhad Joshi DK Shivakumar, Weather, Rain Latest Updates Online

Breaking News Today Live Updates in Kannada: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ಏರಿದ್ದು, 20 ಖಾಲಿ ಸಚಿವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಜತೆ ಅಂತಿಮ ಚರ್ಚೆ ನಡೆಸಲು ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ನಡುವೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸಿಜೆಪಿ ನೀಡಿದ್ದ ಎಚ್ಚರಿಕೆಗೆ ಮಣಿದ ಬಿಹಾರ ಸರ್ಕಾರ, ಬಂಧಿತರ ಬಿಡುಗಡೆ ಹಾಗೂ ಎಫ್‌ಐಆರ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ – Kannada News | Assam Follows Bihar, Announces Withdrawal of Cases Against NEET Protesters

ಗುವಾಹಟಿ, ಜುಲೈ 28: ನೀಟ್(NEET) ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಹಾಗೂ ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಅಸ್ಸಾಂ ಸರ್ಕಾರ ಅಧಿಕೃತವಾಗಿ ಹೇಳಿದೆ. ಅಸ್ಸಾಂ ಗೃಹ ಮತ್ತು ರಾಜಕೀಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿಭಟನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ದಾಖಲಾಗಿದ್ದ 5 ಪ್ರಕರಣಗಳು ಹಾಗೂ ಬಂಧಿಸಲಾಗಿದ್ದ 13 ಜನರನ್ನು ಕಾನೂನು ಪ್ರಕ್ರಿಯೆಗೊಳಪಟ್ಟು ಬಿಡುಗಡೆ ಮಾಡಲಾಗುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರತಿಕೂಲ ಅಥವಾ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಕರಣಗಳು ರದ್ದು: ಜುಲೈ 26 ರ ಸಂಜೆ 6 ಗಂಟೆಗೆ ಮುಂಚಿತವಾಗಿ ದಾಖಲಾದ ಎಲ್ಲಾ ಎಫ್‌ಐಆರ್ (FIR) ಹಾಗೂ ಕಾನೂನು ಕ್ರಮಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತವಾಗಿ ಪ್ರಾರಂಭಿಸಲಾಗುತ್ತದೆ.  ಈಗಾಗಲೇ ಬಂಧನಕ್ಕೊಳಗಾಗಿರುವ ಪ್ರತಿಭಟನಾಕಾರರ ಪ್ರಕರಣಗಳನ್ನು ಮರುಪರಿಶೀಲಿಸಿ ಅವರನ್ನು ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಿಹಾರ ಸರ್ಕಾರದ ಹಾದಿಯಲ್ಲಿ ಅಸ್ಸಾಂ: ಈ ಮುಂಚೆಯಷ್ಟೇ ಬಿಹಾರ ಸರ್ಕಾರವು ಜುಲೈ 25 ರಂದು ಬಂಧಿಸಲಾಗಿದ್ದ 694 ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿ, ಎಲ್ಲಾ ಪ್ರಕರಣಗಳಿಗೆ ‘ಸಂಪೂರ್ಣ ಕ್ಷಮಾದಾನ’ ಘೋಷಿಸಿತ್ತು. ಈಗ ಅಸ್ಸಾಂ ಕೂಡ ಅದೇ ಹಾದಿ ತುಳಿದಿದೆ.

ಮತ್ತಷ್ಟು ಓದಿ: ನೀಟ್ ಮರುಪರೀಕ್ಷೆಯಲ್ಲಿ ಹಾವೇರಿ ವಿದ್ಯಾರ್ಥಿಗೆ ಅನ್ಯಾಯ: ಕಾನೂನು ಹೋರಾಟಕ್ಕಿಳಿದ ಪೋಷಕರು, ಆಗಿದ್ದೇನು?

ಸಿಜೆಪಿ (CJP) ನಾಯಕರ ಪ್ರತಿಕ್ರಿಯೆ ಮತ್ತು ಸರ್ಕಾರದ ಮಾತುಕತೆ: ಕಾಕ್ರೋಚ್ ಜನತಾ ಪಾರ್ಟಿ (CJP) ಮುಖ್ಯ ವಕ್ತಾರ ಸೌರವ್ ದಾಸ್ ಅವರು ಅಸ್ಸಾಂ ಸರ್ಕಾರದ ಆದೇಶದ ಪ್ರತಿಯನ್ನು ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜಸ್ಥಾನ ಮತ್ತು ಇತರ ರಾಜ್ಯಗಳ ಅಭಯ: ಬಿಹಾರ ಮತ್ತು ಅಸ್ಸಾಂ ಅಧಿಸೂಚನೆಗಳ ಬೆನ್ನಲ್ಲೇ ರಾಜಸ್ಥಾನದಲ್ಲೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಪ್ರತಿಕೂಲ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಲಾಗಿದೆ.

ಸರ್ಕಾರದ ಪ್ರತಿನಿಧಿಗಳ ಜೊತೆ ಸಭೆ: ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ದೆಹಲಿ ಪೊಲೀಸರ ಮಧ್ಯಸ್ಥಿಕೆದಾರರು ಸಿಜೆಪಿ ನಾಯಕರೊಂದಿಗೆ 2-3 ಗಂಟೆಗಳ ಕಾಲ ವಿಸ್ತೃತ ಸಭೆ ನಡೆಸಿದ್ದಾರೆ. ಈ ವೇಳೆ ಅಸ್ಸಾಂ ಮತ್ತು ಬಿಹಾರದ ಅಧಿಸೂಚನೆಗಳ ಪ್ರತಿಗಳನ್ನು ಹಂಚಿಕೊಳ್ಳಲಾಗಿದೆ.

ಕೇಂದ್ರದ ಭರವಸೆ: ಇತರ ಬಿಜೆಪಿ, ಎನ್‌ಡಿಎ ಆಡಳಿತದ ರಾಜ್ಯಗಳಲ್ಲೂ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಕೇಂದ್ರ ಸರ್ಕಾರವು ಲಿಖಿತ ಗ್ಯಾರಂಟಿ-ಅಧಿಸೂಚನೆ ಹೊರಡಿಸುವ ಭರವಸೆ ನೀಡಿದೆ.
ಆಗಸ್ಟ್ ಪರೀಕ್ಷಾ ಸುಧಾರಣೆ ಕಾಯ್ದೆ ತರುವುದು, ಪೊಲೀಸರ ಬೆದರಿಕೆ ತಡೆಯುವುದು ಮತ್ತು ಪ್ರಕರಣಗಳನ್ನು ರದ್ದುಗೊಳಿಸುವ ಕುರಿತು ಕೇಂದ್ರ ಸರ್ಕಾರವು ಸಿಜೆಪಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

10 ಸಾವಿರ ಶೋ ಪಡೆದರೂ ‘ಜನ ನಾಯಗನ್’ ಚಿತ್ರಕ್ಕೆ 10 ಕೋಟಿ ರೂ. ಕಲೆಕ್ಷನ್ – Kannada News |  Jana Nayagan Box Office Collection: Film Crosses 230 Crore Mark Worldwide on Day 5

‘ಜನ ನಾಯಗನ್’ ಸಿನಿಮಾಗೆ (Jana Nayagan) ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಆದಾಗ್ಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಐದು ದಿನಗಳಲ್ಲಿ ಜಾಗತಿಕವಾಗಿ ಒಳ್ಳೆಯಕಮಾಯಿ ಮಾಡಿದೆ. ಸೋಮವಾರದ ಪರೀಕ್ಷೆಯಲ್ಲೂ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದೆ. ಈ ಸಿನಿಮಾ ಒಟ್ಟಾರೆಯಾಗಿ 500 ಕೋಟಿ ರೂಪಾಯಿ ಗಳಿಕೆ ಮಾಡೋದು ಅನುಮಾನ ಎನ್ನಲಾಗುತ್ತಿದೆ.

ಐದನೇ ದಿನವಾದ ಸೋಮವಾರ ‘ಜನ ನಾಯಗನ್’ ಸಿನಿಮಾ ದೇಶಾದ್ಯಂತ ಒಟ್ಟು 10,436 ಶೋಗಳನ್ನು ಪ್ರದರ್ಶನ ಕಂಡಿದೆ. ಅಂದು 10.15 ಕೋಟಿ ರೂಪಾಯಿ ನೆಟ್​ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಒಟ್ಟು ಗಳಿಕೆ 157.74 ಕೋಟಿ ರೂಪಾಯಿಗೆ ತಲುಪಿದೆ. ದೇಶದ ಒಟ್ಟು ನೆಟ್ ಕಲೆಕ್ಷನ್ 134.90 ಕೋಟಿ ರೂಪಾಯಿ ಆಗಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅತಿ ಹೆಚ್ಚು ಅಂದರೆ 42.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಬಳಿಕ ಈ ಗಳಿಕೆ ಹತ್ತಿರ ಸುಳಿಯಲೂ ಸಿನಿಮಾ ಬಳಿ ಸಾಧ್ಯವಾಗಿಲ್ಲ.

ವಿದೇಶಗಳಲ್ಲೂ ಈ ಸಿನಿಮಾಗೆ ಸಾಧಾರಣ ಬೇಡಿಕೆ ಸೃಷ್ಟಿಯಾಗಿದೆ. ಐದನೇ ದಿನ ವಿದೇಶಗಳಲ್ಲಿ ಸಿನಿಮಾ 4.00 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಇದರಿಂದ ವಿದೇಶದ ಒಟ್ಟು ಗ್ರಾಸ್ ಕಲೆಕ್ಷನ್ 75.50 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭಾರತ ಮತ್ತು ವಿದೇಶದ ಗಳಿಕೆ ಸೇರಿ ಸಿನಿಮಾ ಜಾಗತಿಕವಾಗಿ ಸಾಧಾರಣ ಪ್ರದರ್ಶನ ಕಾಣುತ್ತಿದೆ. ‘ಜನ ನಾಯಗನ್’ ಚಿತ್ರದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 233.24 ಕೋಟಿ ರೂಪಾಯಿ ತಲುಪಿದೆ. ಈ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಿನಿಮಾ 500 ಕೋಟಿ ರೂಪಾಯಿ ಗಳಿಕೆ ಮಾಡೋದು ಅನುಮಾನವೇ.

ಇದನ್ನೂ ಓದಿ: ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್

‘ಜನ ನಾಯಗನ್’ ಸಿನಿಮಾ ವಿಜಯ್ ಅವರ ಕೊನೆಯ ಚಿತ್ರವಾಗಲಿದೆ. ಎಚ್​​. ವಿನೋದ್ ಈ ಚಿತ್ರ ನಿರ್ದೇಶಿಸಿದ್ದಾರೆ. ಭಗವಂತ ಕೇಸರಿ ಚಿತ್ರದ ರಿಮೇಕ್ ಇದಾಗಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾಗೆ ಕಾಡಿದ ‘ಕ್ಯಾಚ್’ ಕಂಟಕ!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅದು ಸಹ ಝಿಂಬಾಬ್ವೆ ತಂಡದ ವಿರುದ್ಧ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಆ ಚಿಂತೆಯೇ ಕಳಪೆ ಫೀಲ್ಡಿಂಗ್.

ಟೀಮ್ ಇಂಡಿಯಾ ಫೀಲ್ಡರ್​ಗಳು ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೈ ಬಿಟ್ಟಿರುವ ಒಟ್ಟು ಕ್ಯಾಚ್​ಗಳ ಸಂಖ್ಯೆ ಬರೋಬ್ಬರಿ 10 ಎಂದರೆ ನಂಬಲೇಬೇಕು. ಈ ಕಳಪೆ ಫೀಲ್ಡಿಂಗ್ ಕಾರಣ ಟೀಮ್ ಇಂಡಿಯಾದ ಕ್ಯಾಚಿಂಗ್ ದಕ್ಷತೆ ಮತ್ತಷ್ಟು ಕುಸಿದಿದೆ.

  • ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಕ್ಯಾಚಿಂಗ್ ದಕ್ಷತೆ ಕೇವಲ 64.2% ನಲ್ಲಿತ್ತು.
  • ಝಿಂಬಾಬ್ವೆ ತಂಡವು ಈ ಸರಣಿಯಲ್ಲಿ 92.3% ನಷ್ಟು ಅತ್ಯುತ್ತಮ ಕ್ಯಾಚಿಂಗ್ ದಕ್ಷತೆಯನ್ನು ಪ್ರದರ್ಶಿಸಿದೆ.

ಅಂದರೆ ಮೂರು ಮ್ಯಾಚ್​ಗಳಲ್ಲಿ ಝಿಂಬಾಬ್ವೆ ತಂಡ ಕೈ ಬಿಟ್ಟಿರುವುದು ಕೇವಲ 1 ಕ್ಯಾಚ್ ಮಾತ್ರ. ಆದರೆ ಇತ್ತ ಭಾರತೀಯ ಫೀಲ್ಡರ್​ಗಳು ಬರೋಬ್ಬರಿ 10 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ.

ಕೈ ಜಾರಿದ 5 ಕ್ಯಾಚ್‌ಗಳು!

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು 35 ರನ್‌ಗಳ ಜಯ ಸಾಧಿಸಿತು. ಆದರೆ, ಈ ಒಂದೇ ಪಂದ್ಯದಲ್ಲಿ ಭಾರತೀಯ ಫೀಲ್ಡರ್‌ಗಳು 5 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅದರಲ್ಲೂ ಟೀಮ್ ಇಂಡಿಯಾ ವೇಗಿ ಯಶ್ ಠಾಕೂರ್ ಎಸೆದ ಓವರ್‌ಗಳಲ್ಲೇ 3 ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇದಲ್ಲದೆ, ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ರನ್-ಔಟ್ ಮಿಸ್ ಮಾಡುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೀಮ್ ಇಂಡಿಯಾಗೆ ಫೀಲ್ಡಿಂಗ್ ಕೋಚ್ ಇದ್ದರೂ, ಇಷ್ಟೊಂದು ಕಳಪೆ ಮಟ್ಟದ ಕ್ಷೇತ್ರರಕ್ಷಣೆ ಪ್ರದರ್ಶಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಝಿಂಬಾಬ್ವೆ ವಿರುದ್ಧದ ಈ ಸರಣಿ ಜಯ ಯುವ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ನಿಜ. ಆದರೆ, ಕ್ರಿಕೆಟ್‌ನಲ್ಲಿ “ಕ್ಯಾಚ್‌ಗಳನ್ನು ಗೆದ್ದರೆ ಮ್ಯಾಚ್​ಗಳನ್ನು ಗೆಲ್ಲಬಹುದು”  ಎಂಬ ಹಳೆಯ ನಾಣ್ಣುಡಿ ಎಂದಿಗೂ ಸುಳ್ಳಾಗುವುದಿಲ್ಲ.

ಇದನ್ನೂ ಓದಿ: 5 ಓವರ್, 5 ಮೇಡನ್, 5 ವಿಕೆಟ್​: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಗ್ರೀವ್ಸ್

ಮುಂಬರುವ ದೊಡ್ಡ ಸರಣಿಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಇಂತಹ ಕಳಪೆ ಫೀಲ್ಡಿಂಗ್ ಮುಂದುವರಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ. ಹಾಗಾಗಿ, ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚಿಂಗ್ ಸಿಬ್ಬಂದಿ ಈ ‘ಕೈ ಚೆಲ್ಲುವ’ ಸಮಸ್ಯೆಗೆ ತಕ್ಷಣವೇ ಪರಿಹಾರ ಹುಡುಕಬೇಕಿದೆ.

Source link

Bengaluru Air Quality: ಮೈಸೂರು ಸೇರಿದಂತೆ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಪರ್! – Kannada News | Bangalore and Karnataka AQI Today : Air Quality Report and City Updates

ಮೈಸೂರು ಸೇರಿದಂತೆ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಪರ್!

ಬೆಂಗಳೂರು, ಜುಲೈ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟವು (AQI) ಮುಖ್ಯವಾಗಿ ಉತ್ತಮ ಮಟ್ಟದಲ್ಲಿ ದಾಖಲಾಗಿದೆ. ಮುಂಗಾರು ಮಳೆಯ ವಾತಾವರಣ ಹಾಗೂ ತಂಪಾದ ತೇವಾಂಶಪೂರಿತ ಗಾಳಿಯ ಕಾರಣದಿಂದಾಗಿ ರಾಜ್ಯಾದ್ಯಂತ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಹದಗೆಡದೆ, ನಿಯಂತ್ರಣದಲ್ಲಿದೆ. ಬೆಂಗಳೂರು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಾಂಕವು 52 ರಿಂದ 58ರ ಆಸುಪಾಸಿನಲ್ಲಿದ್ದು, ‘ಸಾಧಾರಣ’ ವರ್ಗಕ್ಕೆ ಸೇರಿದೆ. ನಗರದ ವಾತಾವರಣದಲ್ಲಿ PM2.5 ಮತ್ತು PM10 ಸೂಕ್ಷ್ಮ ಕಣಗಳೇ ಮುಖ್ಯ ಮಾಲಿನ್ಯಕಾರಕಗಳಾಗಿವೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ವಾಯು ಗುಣಮಟ್ಟದ ಸ್ಥಿತಿ

  • ಬಿಟಿಎಂ ಲೇಔಟ್ ಮತ್ತು ಬಸವನಗುಡಿ: ಈ ಪ್ರದೇಶಗಳಲ್ಲಿ AQI ಮಟ್ಟ 50 ರಿಂದ 56ರಷ್ಟಿದ್ದು, ಸಾಧಾರಣ ವಾತಾವರಣವಿದೆ.
  • ಬಾಣಸವಾಡಿ: ಇಲ್ಲಿ AQI 46 ದಾಖಲಾಗಿದ್ದು, ಗಾಳಿಯ ಗುಣಮಟ್ಟ ‘ಉತ್ತಮ’ ಸ್ಥಿತಿಯಲ್ಲಿದೆ.
  • ಪ್ರಮುಖ ಟ್ರಾಫಿಕ್ ವಲಯಗಳು: ಹೆಚ್ಚಿನ ವಾಹನ ದಟ್ಟಣೆ ಇರುವ ಕೆಲವು ಭಾಗಗಳಲ್ಲಿ AQI 100 ದಾಟಿದೆ.

ಸಾಮಾನ್ಯವಾಗಿ ಮುಂಗಾರು ಮಳೆಯ ಪರಿಣಾಮವಾಗಿ ಧೂಳಿನ ಕಣಗಳು ಕಡಿಮೆಯಾಗಿರುವುದರಿಂದ ನಗರವಾಸಿಗಳು ನಿರಾಳವಾಗಿದ್ದಾರೆ.

ರಾಜ್ಯದ ಇತರ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ

  • ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನ AQI 35 ರಿಂದ 45ರಷ್ಟಿದ್ದು, ಅತ್ಯಂತ ಸ್ವಚ್ಛ ಹಾಗೂ ‘ಉತ್ತಮ’ ಗಾಳಿ ದಾಖಲಾಗಿದೆ.
  • ಮಂಗಳೂರು: ಕರಾವಳಿ ಭಾಗದಲ್ಲಿ ಮಳೆಯ ಪ್ರಭಾವದಿಂದಾಗಿ AQI 30 ರಿಂದ 40ರ ಆಸುಪಾಸಿನಲ್ಲಿದ್ದು, ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದೆ.
  • ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ: ಉತ್ತರ ಕರ್ನಾಟಕದ ಈ ಭಾಗಗಳಲ್ಲಿ AQI 45 ರಿಂದ 60ರಷ್ಟಿದ್ದು, ‘ಸಾಧಾರಣ’ ಸ್ಥಿತಿ ನಿರ್ಮಾಣವಾಗಿದೆ.
  • ಕಲಬುರಗಿ ಮತ್ತು ಬಳ್ಳಾರಿ: ಗಣಿಗಾರಿಕೆ ಹಾಗೂ ಕೈಗಾರಿಕಾ ಚಟುವಟಿಕೆಗಳ ನಡುವೆಯೂ AQI 55 ರಿಂದ 70ರ ವ್ಯಾಪ್ತಿಯಲ್ಲಿದೆ.

ಒಟ್ಟಾರೆಯಾಗಿ, ಜುಲೈ 28 ರಂದು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ವಾಯು ಮಾಲಿನ್ಯವು ಸುಸ್ಥಿತಿಯಲ್ಲಿದ್ದು, ನಾಗರಿಕರು ಹೊರಾಂಗಣ ಚಟುವಟಿಕೆಗಳನ್ನು ಸಾಗಿಸಲು ಸೂಕ್ತ ವಾತಾವರಣವಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ರಾಮಮೂರ್ತಿ ನಗರದಲ್ಲಿ ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ – Kannada News | Bengaluru Woman Alleges Harassment While Waiting for Cab in Ramamurthy Nagar

ಬೆಂಗಳೂರು, ಜುಲೈ 28: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸೋಮವಾರ ರಾತ್ರಿ ವೇಳೆ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ಯುವತಿಯ ಬಳಿ ಹೋಗಿ, ‘ನಿನ್ನ ರೇಟ್ ಎಷ್ಟು? ಹತ್ತು ಸಾವಿರ ಕೊಡುತ್ತೇನೆ, ಬರುತ್ತೀಯಾ?’ ಎಂದು ಪ್ರಶ್ನಿಸಿದ್ದಾನೆ. ಯುವತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ದೂರು ನೀಡುವುದಾಗಿ ಹೇಳಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿ ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ಓವರ್, 5 ಮೇಡನ್, 5 ವಿಕೆಟ್​: ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಗ್ರೀವ್ಸ್

Source link

August Horoscope 2026: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ! – Kannada News | August Horoscope 2026: 4 Zodiac Signs to Gain New House and Huge Wealth

ಜುಲೈ ತಿಂಗಳು ಮುಗಿದು ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಹಲವು ಪ್ರಮುಖ ಗ್ರಹಗಳ ಸಂಚಾರ (Transits) ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಈ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ಅಧ್ಯಾಯವನ್ನು ಪ್ರಾರಂಭಿಸಲಿದೆ. ಮುಖ್ಯವಾಗಿ 4 ರಾಶಿಯ ಜನರಿಗೆ ಅನಿರೀಕ್ಷಿತ ಲಾಭಗಳು ದೊರೆಯಲಿದ್ದು, ಅವರ ಬಹುದಿನಗಳ ‘ಸ್ವಂತ ಮನೆ’ ಕಟ್ಟುವ ಕನಸು ಈ ಸಮಯದಲ್ಲಿ ನನಸಾಗುವ ಸಾಧ್ಯತೆಯಿದೆ.

ಆ ಅದೃಷ್ಟದ 4 ರಾಶಿಗಳು ಯಾವುವು ಮತ್ತು ಅವರಿಗೆ ಸಿಗುವ ಯೋಗಗಳೇನು ಎಂಬುದರ ವಿವರ ಇಲ್ಲಿದೆ:

ವೃಷಭ ರಾಶಿಯವರ ಸ್ವಂತ ಮನೆಯ ಕನಸು ನನಸು:

ವೃಷಭ ರಾಶಿಯ ಜನರಿಗೆ ಆಗಸ್ಟ್ ತಿಂಗಳು ಅತ್ಯಂತ ಅದೃಷ್ಟದಾಯಕವಾಗಿರಲಿದೆ. ಬಹಳ ದಿನಗಳಿಂದ ತಮಗೊಂದು ಸ್ವಂತ ಮನೆ ಇರಬೇಕು ಎಂದು ಶ್ರಮಿಸುತ್ತಿದ್ದವರಿಗೆ ಇದು ಸೂಕ್ತ ಸಮಯ. ಗ್ರಹಗಳ ಶುಭ ದೃಷ್ಟಿಯಿಂದಾಗಿ ಮನೆ ನಿರ್ಮಾಣ ಅಥವಾ ಹೊಸ ಆಸ್ತಿ ಖರೀದಿ ಪ್ರಕ್ರಿಯೆಗಳು ತಡೆರಹಿತವಾಗಿ ಸಾಗಲಿವೆ. ಒಟ್ಟಾರೆಯಾಗಿ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷದ ವಾತಾವರಣ ನೆಲೆಸಲಿದೆ.

ಸಿಂಹ ರಾಶಿಗೆ ಆರ್ಥಿಕ ಸಂಕಷ್ಟಕ್ಕೆ ಮುಕ್ತಿ, ಹೆಚ್ಚಾಗಲಿದೆ ಆತ್ಮವಿಶ್ವಾಸ:

ಸಿಂಹ ರಾಶಿಯವರಿಗೆ ಈ ತಿಂಗಳು ಅದ್ಭುತವಾದ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಪ್ರಮುಖವಾಗಿ ಇವರ ಆದಾಯದಲ್ಲಿ ಅಗಾಧ ಪ್ರಮಾಣದ ಏರಿಕೆಯನ್ನು ಕಾಣಬಹುದು. ಹಳೆಯ ಸಾಲ ಹಾಗೂ ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಆರ್ಥಿಕ ಭದ್ರತೆ ಸಿಗುತ್ತಿದ್ದಂತೆ ಇವರ ಆತ್ಮವಿಶ್ವಾಸ ದ್ವಿಗುಣಗೊಳ್ಳಲಿದ್ದು, ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸಕಾರಾತ್ಮಕ ವಾತಾವರಣ ಇರಲಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ತುಲಾ ರಾಶಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಅನಿರೀಕ್ಷಿತ ಧನಲಾಭ:

ತುಲಾ ರಾಶಿಯ ಜನರಿಗೆ ಆಗಸ್ಟ್ ತಿಂಗಳಲ್ಲಿ ಅನಿರೀಕ್ಷಿತ ಮೂಲಗಳಿಂದ ಲಾಭ ಹರಿದು ಬರಲಿದೆ. ಉದ್ಯೋಗಿಗಳಿಗೆ ಬಡ್ತಿ (Promotion) ಮತ್ತು ಸಂಬಳ ಏರಿಕೆಯಾಗುವ ಬಲವಾದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಮನೆಯ ಒಳಗೂ ಮತ್ತು ಹೊರಗೂ ನಿರೀಕ್ಷೆಗೂ ಮೀರಿದ ಸಂತಸದ ವಾತಾವರಣ ಇರಲಿದೆ.

ಮಕರ ರಾಶಿಗೆ ಶುಭ ಕಾರ್ಯಗಳ ಸುವರ್ಣ ಕಾಲ:

ಮಕರ ರಾಶಿಯವರಿಗೆ ಈ ಗ್ರಹ ಸಂಚಾರವು ಆದಾಯವನ್ನು ದ್ವಿಗುಣಗೊಳಿಸಲಿದೆ. ಉದ್ಯೋಗಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯವಾಗಿದ್ದು, ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ನೀವು ಯೋಜಿಸಿದ ಪ್ರತಿಯೊಂದು ಕೆಲಸವೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ. ಜೊತೆಗೆ, ಕುಟುಂಬದಲ್ಲಿ ಮದುವೆ ಅಥವಾ ಸೀಮಂತದಂತಹ ಶುಭ ಸಮಾರಂಭಗಳನ್ನು ಆಯೋಜಿಸುವ ಯೋಗವಿದೆ.

ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version