ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ; ಜೀವದ ಹಂಗು ತೊರೆದು ಫುಟ್‌ಬೋರ್ಡ್ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು – Kannada News | Belagavi Bus Safety Crisis: KSRTC Neglect Endangers Student Commute

ಬೆಳಗಾವಿ, ಜು.18: ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಪ್ರಯಾಣವು ಪ್ರತಿನಿತ್ಯ ಯಮಲೋಕದ ದರ್ಶನ ಮಾಡಿಸುವಂತಾಗಿದೆ. ನಗರದಲ್ಲಿ ಸೂಕ್ತ ಬಸ್ ಸೌಕರ್ಯ ಇಲ್ಲದ ಕಾರಣ, ನಿತ್ಯ ನೂರಾರು ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್‌ನ ಫುಟ್‌ಬೋರ್ಡ್ (Footboard) ಮೇಲೆ ನೇತಾಡಿಕೊಂಡೇ ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಈ ಭಯಾನಕ ದೃಶ್ಯಗಳು ಪ್ರತಿದಿನ ಕಂಡುಬರುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ಬೆಳಗಾವಿ ನಗರದ ಪ್ರಮುಖ ಮಾರ್ಗಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ತೀರಾ ವಿರಳವಾಗಿದೆ. ಹೀಗಾಗಿ, ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆಯೇ ಸೀಟು ಹಿಡಿಯಲು ವಿದ್ಯಾರ್ಥಿಗಳು ಒಮ್ಮೆಗೇ ಮುಗಿಬೀಳುತ್ತಿದ್ದಾರೆ. ಬಸ್‌ನ ಒಳಭಾಗ ಸಂಪೂರ್ಣ ಭರ್ತಿಯಾದ ಮೇಲೆಯೂ ಜಾಗವಿಲ್ಲದೆ, ಬಸ್ ನಿಲ್ದಾಣದಿಂದ ಹೊರಡುವಾಗಲೇ ವಿದ್ಯಾರ್ಥಿಗಳು ಬಾಗಿಲಿನ ಮೆಟ್ಟಿಲುಗಳ ಮೇಲೆ ನಿಂತು ಸಾಗುತ್ತಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಇಷ್ಟೆಲ್ಲಾ ಜೀವವಿರೋಧಿ ದೃಶ್ಯಗಳು ಕಣ್ಣೆದುರೇ ನಡೆಯುತ್ತಿದ್ದರೂ, ಅಲ್ಲಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ತಡೆಯುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಸ್‌ಗಳ ಸಂಖ್ಯೆ ಹೆಚ್ಚಿಸದ ಅಧಿಕಾರಿಗಳ ಬೇಜವಾಬ್ದಾರಿತನವೇ ಮಕ್ಕಳ ಈ ಅಪಾಯಕಾರಿ ಪ್ರಯಾಣಕ್ಕೆ ನೇರ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್ – Kannada News | Amitabh Bachchan coming back to tv with KBC season 18

ಕೆಬಿಸಿ ಅಥವಾ ಕೌನ್ ಬನೇಗಾ ಕರೋಡ್​​ಪತಿ (Kaun Banega crorepati) ಭಾರತದ ಅತ್ಯಂತ ಹಳೆಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದು. 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್​​ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್​​ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್​ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್​​ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಕೌನ್ ಬನೇಗಾ ಕರೋಡ್​​ಪತಿಯ 18ನೇ ಸೀಸನ್​​ನ ಪ್ರಸಾರ ದಿನಾಂಕವನ್ನು ಘೋಷಣೆ ಮಾಡುವ ಜೊತೆಗೆ ಈ ಬಾರಿಯ ಸೀಸನ್​​ನಲ್ಲಿ ಮಾಡಲಾಗಿರುವ ಕೆಲ ಬಲಾವಣೆಗಳ ಮಾಹಿತಿಯನ್ನು ಸಹ ಪ್ರೋಮೊನಲ್ಲಿ ಹಂಚಿಕೊಳ್ಳಲಾಗಿದೆ. 18ನೇ ಸೀಸನ್​​ನಲ್ಲಿ ಕೆಲವು ತಾಜಾ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪ್ರೋಮೊನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವಂತೆ, ಈ ಬಾರಿ ಕೇವಲ ಪ್ರಶ್ನೋತ್ತರ ಮಾತ್ರ ಇರುವುದಿಲ್ಲ. ಕೇಳುವ ಪ್ರಶ್ನೆಗೆ ಸ್ಪರ್ಧಿ ಉತ್ತರ ಕೊಟ್ಟರೆ ಮಾತ್ರವೇ ಸಾಕಾಗುವುದಿಲ್ಲ, ಅದಕ್ಕಾಗಿ ಆ ಸ್ಪರ್ಧಿ ಯೋಚನೆಯನ್ನೂ ಮಾಡಬೇಕಿರುತ್ತದೆ’ ಎಂದು ಬಚ್ಚನ್ ಅವರು ಪ್ರೋಮೊನಲ್ಲಿ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್​​ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್​​ಮೆಂಟ್​​ನಲ್ಲಿ ಶೋ ಪ್ರಸಾರ ಆಗಲಿದೆ. ಸೋನಿ ಲಿವ್ ಒಟಿಟಿಯಲ್ಲಿಯೂ ಸಹ ಶೋ ಅನ್ನು ಲೈವ್ ಆಗಿ ಹಾಗೂ ರೆಕಾರ್ಡೆಡ್ ಶೋಗಳನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

2000 ರಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್​​ಪತಿ ಸತತ ಈಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಇಂಗ್ಲೀಷ್​​ನ ‘ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್’ ಶೋನಿಂದ ಸ್ಪೂರ್ತಿ ಪಡೆದು ಈ ಶೋ ಪ್ರಾರಂಭ ಮಾಡಲಾಗಿತ್ತು. ಈ ವರೆಗೆ ಕೇವಲ ಒಮ್ಮೆ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಬೇರೊಬ್ಬರು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ಒಂದು ಸೀಸನ್ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಶಾರುಖ್ ಖಾನ್ ಅವರು ಈ ಶೋ ಹೋಸ್ಟ್ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಕರನ ಜತೆ ಸೇರಿ ಪತಿಗೆ ಹಾವು ಕಚ್ಚಿಸಿ ಕೊಂದ ಪತ್ನಿ, ತನಿಖೆ ವೇಳೆ ಬಯಲಾಯ್ತು ನಾಲ್ಕು ತಿಂಗಳ ಸ್ಕೆಚ್ – Kannada News | Wife, Lover Conspire: Husband Killed by Snake Bite in Meerut Shocking Plot Uncovered

ಮೀರತ್, ಜುಲೈ 18: ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ (Murder)ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​ನ ಹಸ್ತಿನಾಪುರ ಪ್ರದೇಶದಲ್ಲಿ ನಡೆದಿದೆ. ಅತುಲ್ ಪವಾರ್ ಎಂಬ ಯುವಕನ ಸಾವಿನ ಹಿಂದೆ ಬೆಚ್ಚಿ ಬೀಳಿಸುವ ಪಿತೂರಿ ಕೂಡ ಇದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕೇವಲ ಹಾವಿನ ಕಡಿತದಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ನಡೆಸಿದ ತೀಕ್ಷ್ಣ ತನಿಖೆಯಲ್ಲಿ, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತಿಯನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಕೂಲ್ ವ್ಯಾನ್ ಡ್ರೈವರ್ ಜೊತೆ ಅಕ್ರಮ ಸಂಬಂಧ
ಪೊಲೀಸ್ ವಿಚಾರಣೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ಮೃತ ಅತುಲ್ ಪವಾರ್ ಅವರ ಪತ್ನಿ ದಾಮಿನಿ ಸುಮಾರು ಒಂದು ವರ್ಷದ ಹಿಂದೆ ತುಷಾರ್ (ನಿಕ್ಕಿ) ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ವಿಶೇಷವೆಂದರೆ, ಈ ಪ್ರಿಯಕರ ತುಷಾರ್ ಬೇರಾರೂ ಅಲ್ಲ, ಅತುಲ್ ನಡೆಸುತ್ತಿದ್ದ ಶಾಲಾ ವ್ಯಾನ್‌ನ ಚಾಲಕನಾಗಿದ್ದ. ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅತುಲ್ ಅಡ್ಡಿಯಾಗಿದ್ದರಿಂದ ಮತ್ತು ಆತನ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ಇಬ್ಬರೂ ಸೇರಿ ಅತುಲ್‌ನನ್ನು ಮುಗಿಸಲು ನಿರ್ಧರಿಸಿದ್ದರು.

4 ತಿಂಗಳಲ್ಲಿ 2 ಬಾರಿ ಫೇಲ್, 3ನೇ ಬಾರಿ ಹಾವಿನಿಂದ ಅಟ್ಯಾಕ್
ಕೊಲೆಯನ್ನು ಯಾರಿಗೂ ಅನುಮಾನ ಬಾರದಂತೆ ಸಹಜ ಸಾವಿನಂತೆ ತೋರಿಸಲು ಈ ಜೋಡಿ ಸ್ಕೆಚ್ ಹಾಕಿತ್ತು. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಪಿತೂರಿ ನಡೆದಿತ್ತು. ಅತುಲ್‌ನನ್ನು ಕೊಲ್ಲಲು ಆರೋಪಿಗಳು ಈ ಹಿಂದೆ ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅತುಲ್ ಎರಡೂ ಬಾರಿ ಬದುಕುಳಿದಿದ್ದ.

ಮತ್ತಷ್ಟು ಓದಿ: ಪತ್ನಿಯಿಂದಲೇ ವೈದ್ಯನ ಕೊಲೆ ಪ್ರಕರಣ: ಆರೋಪಿ ಡಾ. ಪ್ರಿಯಾಂಕಾ ಎರಡನೇ ಪತ್ನಿ!; ಬಗೆದಷ್ಟೂ ಬಯಲಾಗ್ತಿದೆ ಅಚ್ಚರಿಯ ಮಾಹಿತಿ

ಮೂರನೇ ಪ್ರಯತ್ನದಲ್ಲಿ ಆರೋಪಿಗಳು ಅತ್ಯಂತ ವಿಷಪೂರಿತವಾದ ಹಾವನ್ನು ತಂದು, ಅತುಲ್ ಮಲಗಿದ್ದಾಗ ಅದರಿಂದ ಕಚ್ಚಿಸಿದ್ದಾರೆ. ತೀವ್ರ ವಿಷದ ಪ್ರಭಾವದಿಂದ ಅತುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುಟುಂಬಸ್ಥರು ಆಘಾತ, ಎಸ್‌ಎಸ್‌ಪಿ ಖಡಕ್ ಭರವಸೆ
ಪತಿ ಸತ್ತ ತಕ್ಷಣವೇ ದಾಮಿನಿ ನಾಟಕವಾಡಿದ್ದಳಾದರೂ, ಅತುಲ್ ಕುಟುಂಬಸ್ಥರ ಅನುಮಾನದ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇಡೀ ಜಾಲ ಪತ್ತೆಯಾಗಿದೆ. ಸದ್ಯ ಅತುಲ್ ಕುಟುಂಬಸ್ಥರು ತೀವ್ರ ಆಘಾತದಲ್ಲಿದ್ದಾರೆ.

ಈ ಅಪರಾಧದ ಕುರಿತು ಮಾತನಾಡಿರುವ ಮೀರತ್ ಎಸ್‌ಎಸ್‌ಪಿ (SSP) ಅವಿನಾಶ್ ಪಾಂಡೆ, “ಪೊಲೀಸರ ತ್ವರಿತ ಮತ್ತು ಚಾಣಾಕ್ಷ ಕ್ರಮದಿಂದಾಗಿ ಈ ಇಡೀ ಪಿತೂರಿ ಬಯಲಾಗಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಕರಾರುವಕ್ಕಾಗಿ ಬಂಧಿಸಲಾಗಿದೆ. ಇಂತಹ ಕ್ರೂರ ಕೃತ್ಯ ಎಸಗಿದ ಯಾವುದೇ ಒಬ್ಬ ಆರೋಪಿಯನ್ನೂ ಸುಮ್ಮನೆ ಬಿಡುವುದಿಲ್ಲ, ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೆಲಮಂಗಲದಲ್ಲಿ ನೈತಿಕ ಪೊಲೀಸ್ ಗಿರಿ! ಹಿಂದೂ ಯುವಕನ ಮೇಲೆ ಹಲ್ಲೆ; ಆತ್ಮಹತ್ಯೆಗೆ ಯತ್ನಿಸಿದ ಮುಸ್ಲಿಂ ಯುವತಿ – Kannada News | Nelamangala Moral Policing: Hindu Youth Assaulted, Muslim Girl Attempts death

ನೆಲಮಂಗಲ, ಜುಲೈ 18: ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಯಶವಂತ್​​ ಹಲ್ಲೆಗೊಳಗಾದ ಯುವಕ.

ನಡೆದಿದ್ದೇನು?

ಯಶವಂತ್​ ಹಾಗೂ ಯುವತಿ ಕೌಸರ್ ಬಾನು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲಕ್ಕೂರು ಗ್ರಾಮದ ನಿವಾಸಿಗಳಾದ ತಹರೀಕ್ ಪಾಷಾ, ಸೋಹೇಲ್ ಪಾಷಾ ಮತ್ತು ಸಯ್ಯದ್ ಕರೀಂ ಎಂಬುವವರು ಯಶವಂತ್​ನನ್ನ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ 

ಆರೋಪಿಗಳು ಯಶವಂತ್‌ನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬಳಿಕ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾರೆ. ತಮಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಕಂಡು ತೀವ್ರ ಮನನೊಂದ ಕೌಸರ್ ಬಾನು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ಕೂಡ ನಡೆದಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ

ಸದ್ಯ ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿಯೇ ಖುದ್ದಾಗಿ ಹಲ್ಲೆ ಮಾಡಿದವರ ವಿರುದ್ಧ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಈ ನೈತಿಕ ಪೊಲೀಸ್‌ಗಿರಿ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ಯಾರಾ ಮೆಡಿಕಲ್​ ವಿದ್ಯಾರ್ಥಿ ಆತ್ಮಹತ್ಯೆ

ಪ್ಯಾರಾ ಮೆಡಿಕಲ್​ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಮಾರಪ್ಪನಪಾಳ್ಯದಲ್ಲಿ ನಡೆದಿದೆ. ಮನೆಯ ಮೇಲಿನ ಕೊಠಡಿಯಲ್ಲಿ ಉದಯ್​(20) ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣ: ಆರೋಪಿಯನ್ನು ಬಜರಂಗದಳ ಕಾರ್ಯಕರ್ತನೆಂದು ಬಿಂಬಿಸಿದವರ ವಿರುದ್ಧ ಕೇಸ್ ದಾಖಲು

ಸುರೇಶ್ ಹಾಗೂ ಪ್ರೇಮಲತಾ ದಂಪತಿಯ ಪುತ್ರ ಉದಯ್, ಆನ್​ಲೈನ್ ಗೇಮಿಂಗ್ ಚಟಕ್ಕೆ ಅಡಿಕ್ಟ್ ಆಗಿದ್ದ ಬಗ್ಗೆ ಮಾಹಿತಿ ಇದೆ. ಸದ್ಯ ಸ್ಥಳಕ್ಕೆ ಮಾದನಾಯಕಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:05 pm, Sat, 18 July 26

Source link

ದೋಸ್ತಿಯಲ್ಲಿ ಕುಸ್ತಿ: ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್ – Kannada News | JDS Announces 3 Days padayatra before BJP Against Bidadi township

ಬೆಂಗಳೂರು, (ಜುಲೈ 18): ಕರ್ನಾಟಕ ಬಿಜೆಪಿಯಲ್ಲಿ  (Karnataka BJP) ಬಣ ಬಡಿದಾಟ ಮತ್ತು ನಾಯಕತ್ವದ ಗೊಂದಲದ ಏರ್ಪಟ್ಟಿದೆ. ಇದರ ಮಧ್ಯೆ ಜೆಡಿಎಸ್  (JDS) ಹಾಗೂ ಬಿಜೆಪಿ (BJP) ದೋಸ್ತಿ ನಡುವೆ ಸಮನ್ವಯತೆ ಕೊರತೆ ಎದುರಾಗಿದೆ. ಹೌದು…ಮೈತ್ರಿ ಮಾಡಿಕೊಂಡಾಗಿನಿಂದಲೂ ಮಿತ್ರ ಪಕ್ಷಗಳ ನಾಯಕರ ನಡುವೆ ಯಾವುದೇ ಎಲ್ಲವೂ ಸರಿ ಇಲ್ಲ ಎನ್ನುವುದು ಈಗಾಗಲೇ ಅನೇಕ ಉದಾಹರಣೆಗಳು ಇವೆ. ಇದರ ನಡುವೆ ಇದೀಗ ಬಿಡದಿ ಪಾದಯಾತ್ರೆ ವಿಚಾರವಾಗಿ ದೋಸ್ತಿಗಳ ನಡುವೆಯೇ ಗೊಂದಲ ಏರ್ಪಟ್ಟಿದೆ. ಬಿಡದಿ ಟೌನ್‌ಶಿಪ್ (Bidadi Township) ವಿರೋಧಿಸಿ ಬಿಜೆಪಿಗೂ ಮೊದಲೇ ಜೆಡಿಎಸ್ (JDS) ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ. ‌ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್‌ಗಳ 3 ದಿನಗಳ ಪಾದಯಾತ್ರೆಯನ್ನ ಜೆಡಿಎಸ್ ಘೋಷಣೆ ಮಾಡಿದೆ. ಇದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಮತ್ತೆ ಸಮನ್ವಯದ ಕೊರತೆ ಇದೆ ಎಂಬುವುದು ಸಾಬೀತಾದಂತಾಗಿದೆ.

ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್

ಬಿಡದಿ ಟೌನ್ ಶಿಪ್ ಪಾದಯಾತ್ರೆ ಮಾಡುವ ಬಗ್ಗೆ ಬಿಜೆಪಿ ಘೋಷಣೆ ಮಾಡಿತ್ತು. ಜೆಡಿಎಸ್ ನಾಯಕರ ಜೊತೆ ಚರ್ಚಿಸಿ ಪಾದಯಾತ್ರೆ ದಿನಾಂಕವನ್ನು ಫಿಕ್ಸ್ ಮಾಡುವುದಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಈ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕರನ್ನು ಸಂಪರ್ಕಿಸಲು ಬಿಜೆಪಿ ನಾಯಕರು ಯತ್ನಿಸಿದ್ದರು. ಆದ್ರೆ, ಸಾಧ್ಯವಾಗಿಲ್ಲ. ಇದರ ನಡುವೆಯೇ ಇಂದು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಿಸಿದೆ. ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಣೆ ಮಾಡುವ ಮೂಲಕ ಮಿತ್ರ ಪಕ್ಷಗಳ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಇದನ್ನೂ ನೋಡಿ: ವಿವಾದದ ನಡುವೆಯೇ ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ

ಜೆಡಿಎಸ್ ಪಾದಯಾತ್ರೆ ರೂಟ್ ಮ್ಯಾಪ್

  • ಜುಲೈ 30 ಬೆಳಗ್ಗೆ-ಬೈರಮಂಗಲ ವೃತ್ತದಿಂದ ಬಿಡದಿ ವೃತ್ತ 8km
    ಮಧ್ಯಾಹ-ಬಿಡದಿ ವೃತ್ತದಿಂದ ಕ್ರೈಸ್ಟ್ ವಿವಿ- 7 km
    ಒಟ್ಟು 15 km.
  • ಜುಲೈ 31 ಬೆಳಗ್ಗೆ- ಕ್ರೈಸ್ಟ್ ವಿವಿ ಗೇಟ್‌ನಿಂದ ಜೆಕೆ ಗ್ರ್ಯಾಂಡ್ ಅರೆನಾ (ನೈಸ್ ಜಂಕ್ಷನ್) 6km ಮಧ್ಯಾಹ್ನ- ನೈಸ್ ಜಂಕ್ಷನ್‌ನಿಂದ ಆರ್.ಆರ್. ನಗರ ಕಮಾನು 10km ಒಟ್ಟು – 16km
  • ಆಗಸ್ಟ್ 1 ಬೆಳಗ್ಗೆ- ಆರ್.ಆರ್. ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ 7 km ಮಧ್ಯಾಹ್ನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ.

ಬಿಜೆಪಿ ಎಂಎಲ್​​ಸಿ ಹೇಳಿದ್ದೇನು?

ಇನ್ನು ಈ ಬಗ್ಗೆ ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ ಪ್ರತಿಕ್ರಿಯಿಸಿದ್ದು, ಬಿಡದಿ ಟೌನ್​​​ಶಿಪ್ ಯೋಜನೆ ವಿರೋಧಿಸಿ ಪಾದಯಾತ್ರೆ ಮಾಡುವುದಾಗಿ ಹೇಳಿದ್ದೆವು. ಈಗ ಜೆಡಿಎಸ್ ನಾಯಕರು ಪಾದಯಾತ್ರೆ ದಿನಾಂಕ ಘೋಷಿಸಿದ್ದಾರೆ. ಪಾದಯಾತ್ರೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ಟೌನ್​ಶಿಪ್​ ಯೋಜನೆ ವಿಚಾರದಲ್ಲಿ ಇಬ್ಬರದ್ದೂ ಒಂದೇ ನಿಲುವು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ. ಹೋರಾಟದ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆಮಾಡ್ತಾರೆ. ಒಂದೇ ಪಾದಯಾತ್ರೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಉಭಯ ನಾಯಕರು ಚರ್ಚಿಸಿ ಶೀಘ್ರ ದಿನಾಂಕ ಘೋಷಣೆ ಮಾಡ್ತೇವೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ಮುಂದುವರಿದಿರುವ ಆಂತರಿಕ ಭಿನ್ನಾಭಿಪ್ರಾಯ, ಬಣ ರಾಜಕೀಯ ಹಾಗೂ ನಾಯಕತ್ವದ ಗೊಂದಲದ ನಡುವೆ ಇತ್ತ ಜೆಡಿಎಸ್, ಕುಮಾರಸ್ವಾಮಿಯವರನ್ನು ಮೈತ್ರಿಕೂಟದ ಪ್ರಮುಖ ಮುಖವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇದರ ಮಧ್ಯೆ ಜೆಡಿಎಸ್​​​​​​​​​​​​, ಬಿಡದಿ ಟೌನ್​​ಶಿಪ್ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿ ನಾಯಕ ಅಭಿಪ್ರಾಯ ಕೇಳದೇ ಏಕಾಂಗಿಯಾ ಪಾದಯಾತ್ರೆ ಘೋಷಣೆ ಮಾಡಿರುವುದು ಉಭಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿದೆ.​​ ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ! – Kannada News | Drought vs Determination: Elderly Bidar Couple Inspires by Re sowing Crop Despite Failure

ಬೀದರ್, ಜುಲೈ 18: ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹಳ್ಳಿಕೇಡ್ ಗ್ರಾಮದಲ್ಲಿ ವೃದ್ಧ ದಂಪತಿಗಳಾದ ತಿಪ್ಪಣ್ಣ ಮತ್ತು ಗಂಗಮ್ಮ ಅವರು ತೀವ್ರ ಬರಗಾಲದ ನಡುವೆಯೂ ತಮ್ಮ ಹೊಲದಲ್ಲಿ ಮರುಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ದಂಪತಿಗಳು ತಮ್ಮ ಹೊಟ್ಟೆಪಾಡಿಗಾಗಿ ಸಣ್ಣ ತುಂಡುಭೂಮಿಯನ್ನೇ ನಂಬಿಕೊಂಡಿದ್ದಾರೆ. ದೊಡ್ಡ ಜಮೀನು ಇಲ್ಲದ ಇವರು, ಪ್ರಸ್ತುತ ಮಳೆ ಕೊರತೆ ಮತ್ತು ಬೆಳೆ ವೈಫಲ್ಯದ ಹೊರತಾಗಿಯೂ ಮತ್ತೆ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಗಂಗಮ್ಮ ಅವರು ತಮ್ಮ ಪತಿ ತಿಪ್ಪಣ್ಣ ಅವರಿಗೆ ಹೆಗಲು ಕೊಟ್ಟು ಜಮೀನಿನಲ್ಲಿ ಉಳುಮೆ ಮಾಡುತ್ತಿರುವುದು ಅವರ ಆರ್ಥಿಕ ಸಂಕಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ತೊಗರಿ ಬೆಳೆ ಹಾಕಿ ಅದು ವಿಫಲವಾದ ನಂತರವೂ, ಬದುಕು ಸಾಗಿಸಲು ಅನಿವಾರ್ಯವಾಗಿ ಮತ್ತೊಮ್ಮೆ ಬಿತ್ತನೆಗೆ ಮುಂದಾಗಿದ್ದಾರೆ. ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಈ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ತಲೆದೋರಿರುವ ಮಳೆ ಅಭಾವ ಮತ್ತು ಬರಗಾಲದ ಸಂಕಷ್ಟಕ್ಕೆ ಈ ದಂಪತಿಯ ಹೋರಾಟ ಒಂದು ಜೀವಂತ ಉದಾಹರಣೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BMRCL Recruitment 2026: ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ; ಆ. 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | Namma Metro DGM Job: Apply Online for Operation Safety Post by Aug 10

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದ ಸಂಸ್ಥೆಯಾದ ನಮ್ಮ ಮೆಟ್ರೋ, ನಿಯೋಜನೆ ಅಥವಾ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.

ಯಾವ ಹುದ್ದೆಗೆ ನೇಮಕಾತಿ?

ಮೆಟ್ರೋ ರೈಲು ನಿಗಮದ ಯೋಜನಾ ವಿಭಾಗದಲ್ಲಿ ಉಪ ಪ್ರಧಾನ ವ್ಯವಸ್ಥಾಪಕರು (Operation Safety – Deputy General Manager) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಈ ವಿಭಾಗದಲ್ಲಿ 01 ಹುದ್ದೆ ಖಾಲಿ ಇದ್ದು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಅರ್ಹ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಸಮಯ:

ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್​ 10. ಇದಲ್ಲದೇ ಸಹಿ ಮಾಡಿದ ಭೌತಿಕ ಅರ್ಜಿ (Hard Copy) ತಲುಪಿಸಲು ಆಗಸ್ಟ್​ 13 ಸಂಜೆ 4:00 ಗಂಟೆಯ ವರೆಗೆ ಸಮಯವಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಬೇಕು. ತದನಂತರ ಡೌನ್‌ಲೋಡ್ ಮಾಡಿದ ಮತ್ತು ಸಹಿ ಮಾಡಿದ ಅರ್ಜಿಯ ಪ್ರತಿಯನ್ನು ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳೊಂದಿಗೆ (Documents) ಬಿಎಂಆರ್‌ಸಿಎಲ್ ಕಚೇರಿಗೆ ನಿಗದಿತ ಸಮಯದೊಳಗೆ ತಲುಪಿಸಬೇಕಾಗುತ್ತದೆ. ಈ ಹುದ್ದೆಗೆ ಬೇಕಾಗುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್ ಆದ www.bmrc.co.in/Career Section ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ತಡರಾತ್ರಿ ಬೆಂಗಳೂರಿನ 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ರೈಡ್ – Kannada News | DCP Saidulla Leads Massive Whitefield Operation Against Rowdies in Bengaluru

ಬೆಂಗಳೂರು, ಜು.18: ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ (DCP) ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಏಕಕಾಲಕ್ಕೆ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ.

ನಗರದ ವೈಟ್‌ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್. ಪುರಂ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ತಡರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಪೊಲೀಸರು ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಈ ಮೆಗಾ ರೈಡ್‌ಗಾಗಿ ಒಟ್ಟು 28 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 140ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಏಕಕಾಲಕ್ಕೆ ರೌಡಿಗಳ ಮನೆಗಳಿಗೆ ನುಗ್ಗಿದ್ದಾರೆ.

ಪೊಲೀಸ್ ತಂಡಗಳು ರೌಡಿಶೀಟರ್‌ಗಳ ಮನೆ, ಪ್ರಸ್ತುತ ವಿಳಾಸ ಹಾಗೂ ಅವರ ಪೂರ್ವಾಪರಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಕೆಲವು ರೌಡಿಗಳನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸರಿಯಾದ ದಾಖಲೆ ಪತ್ರಗಳಿಲ್ಲದ ಒಟ್ಟು 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ

ದಾಳಿ ವೇಳೆ ರೌಡಿಶೀಟರ್‌ಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಅಥವಾ ಅಕ್ರಮ ವಸ್ತುಗಳು ಇವೆಯೇ ಎಂದು ತಪಾಸಣೆ ನಡೆಸಿದ ಪೊಲೀಸರು, ಎಲ್ಲರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವುದು, ಹಫ್ತಾ ವಸೂಲಿ ಅಥವಾ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಜೈಲಿಗಟ್ಟಲಾಗುವುದು ಎಂದು ಖಾಕಿ ಪಡೆ ಖಡಕ್ ವಾರ್ನಿಂಗ್ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿ: ಸ್ಕೈರೂಟ್ ತಂಡದೊಂದಿಗೆ ಮಾತನಾಡಿ, ಅಭಿನಂದಿಸಿದ ಪ್ರಧಾನಿ ಮೋದಿ – Kannada News | Vikram 1 Rocket Launch: India’s Private Space Triumph and Skyroot’s Historic Feat

ಶ್ರೀಹರಿಕೋಟ, ಜುಲೈ 18: ಭಾರತದ ಪ್ರಪ್ರಥಮ ಖಾಸಗಿ ರಾಕೆಟ್ ‘ವಿಕ್ರಮ್-1’ (Vikram-1)ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ದೊಡ್ಡ ಸಾಧನೆಯ ಬೆನ್ನಲ್ಲೇ ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ಅತ್ಯಂತ ನಿರ್ಣಾಯಕ ಕ್ಷಣವಾಗಿದೆ. ನಮ್ಮ ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಮಹಾನ್ ಸಾಧನೆಯು ದೇಶದ ಲಕ್ಷಾಂತರ ಯುವಕರು ದೊಡ್ಡದಾಗಿ ಕನಸು ಕಾಣಲು ಮತ್ತು ನಿರ್ಭಯವಾಗಿ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಈ ಮಿಷನ್ ಏಕೆ ಇಷ್ಟೊಂದು ವಿಶೇಷ?
ಇಸ್ರೋ ಮಾಜಿ ವಿಜ್ಞಾನಿಗಳ ಕನಸು: ಹೈದರಾಬಾದ್ ಮೂಲದ ಸ್ಕೈರೂಟ್ ಸಂಸ್ಥೆಯನ್ನು ಇಸ್ರೋದ (ISRO) ಮಾಜಿ ವಿಜ್ಞಾನಿಗಳಾದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಸ್ಥಾಪಿಸಿದ್ದರು. ಇಂದು ಅವರ ಪರಿಶ್ರಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಸಿಕ್ಕಿದೆ.

ಮತ್ತಷ್ಟು ಓದಿ:ಜುಲೈ 18ರಂದು ನಭಕ್ಕೆ ಹಾರಲಿದೆ ಐತಿಹಾಸಿಕ ವಿಕ್ರಮ್-1 ರಾಕೆಟ್; ಜೊತೆಯಲ್ಲಿ ಮೋದಿ ಹಸ್ತಾಕ್ಷರದ ವಂದೇ ಮಾತರಂ ಮೆಸೇಜ್

ಗಣ್ಯರ ಗುಂಪಿಗೆ ಭಾರತಕ್ಕೆ ಎಂಟ್ರಿ: ಈ ಯಶಸ್ಸಿನೊಂದಿಗೆ ಭಾರತವು ಅಮೆರಿಕ, ಚೀನಾ ಮತ್ತು ಜಪಾನ್ ದೇಶಗಳ ನಂತರ ಖಾಸಗಿ ರಾಕೆಟ್ ಅನ್ನು ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ ವಿಶ್ವದ ಆಯ್ದ ಹೈಟೆಕ್ ದೇಶಗಳ ಗಣ್ಯರ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಮೋದಿ ಪೋಸ್ಟ್​

ಕಡಿಮೆ ವೆಚ್ಚದ ತಂತ್ರಜ್ಞಾನ: ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸ್ಥಳೀಯವಾಗಿ ತಯಾರಾದ ಈ ರಾಕೆಟ್, ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಜಾಗತಿಕ ವಾಣಿಜ್ಯ ಉಪಗ್ರಹ ಮಾರುಕಟ್ಟೆಯಲ್ಲಿ ಭಾರತದ ದರ್ಬಾರ್ ಹೆಚ್ಚಿಸಲಿದೆ.

ಸ್ಕೈರೂಟ್ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಪವನ್ ಕುಮಾರ್ ಚಂದ್ನಾ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, “ನೀವು ಇಡೀ ಭಾರತ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ತಂಡವು ಭಾರತದ ಆಕಾಂಕ್ಷೆಗಳನ್ನು ಬಾಹ್ಯಾಕಾಶದಲ್ಲಿ ನೆಟ್ಟಿದೆ ಮತ್ತು ದೇಶದ ಕೋಟ್ಯಂತರ ಯುವಕರ ಕನಸುಗಳಿಗೆ ಗಟ್ಟಿ ಬೇರುಗಳನ್ನು ಹಾಕಿದೆ” ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ವಿಡಿಯೋ:

ಮಾತುಕತೆಯ ವೇಳೆ ಸಿಇಒ ಪವನ್ ಚಂದ್ನಾ ಅವರು, “ನಮ್ಮ ತಂಡದ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷಗಳು” ಎಂದು ಹೆಮ್ಮೆಯಿಂದ ತಿಳಿಸಿದಾಗ ಪ್ರಧಾನಿಯವರು ಮತ್ತಷ್ಟು ಸಂತಸಪಟ್ಟರು. “ಭಾರತದ ಯುವಶಕ್ತಿಯ ಮೇಲಿನ ನನ್ನ ನಂಬಿಕೆಯನ್ನು ನಿಮ್ಮ ತಂಡ ನಿಜ ಮಾಡಿ ತೋರಿಸಿದೆ. ಒಮ್ಮೆ ನಮ್ಮ ಬಾಹ್ಯಾಕಾಶ ಕನಸುಗಳನ್ನು ಜಗತ್ತು ಅನುಮಾನಿಸಿತ್ತು. ಆದರೆ ಭಾರತೀಯ ಯುವಕರು ಮನಸ್ಸು ಮಾಡಿದರೆ ಅದ್ಭುತಗಳನ್ನೇ ಸೃಷ್ಟಿಸಬಹುದು ಎಂಬುದನ್ನು ನೀವು ಜಗತ್ತಿಗೆ ಸಾಬೀತುಪಡಿಸಿದ್ದೀರಿ” ಎಂದು ಪ್ರಧಾನಿ ಹೇಳಿದರು.

ಈ ಒಂಬತ್ತು ನಿಮಿಷಗಳ ಸುದೀರ್ಘ ಕರೆಯಲ್ಲಿ ಅತ್ಯಂತ ಭಾವುಕ ಕ್ಷಣವೊಂದು ಎದುರಾಯಿತು. ಉಡಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಸ್ವಹಸ್ತದಿಂದ ಕೈಬರಹದಲ್ಲಿ ಬರೆದುಕೊಟ್ಟಿದ್ದ “ವಂದೇ ಮಾತರಂ” ಎಂಬ ವಿಶೇಷ ಶುಭ ಹಾರೈಕೆಯ ಪತ್ರವನ್ನು ವಿಕ್ರಮ್-1 ರಾಕೆಟ್‌ನೊಳಗೆ ಇಟ್ಟು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

ಈ ಐತಿಹಾಸಿಕ ಕಾರ್ಯಾಚರಣೆಗೆ ‘ಆಗಮನ್’ (Aagaman) ಎಂದು ಹೆಸರಿಡಲಾಗಿದ್ದು, ಪ್ರಧಾನಿಯವರು ಈ ಹೆಸರನ್ನು ಉಲ್ಲೇಖಿಸಿ ಮಾತನಾಡಿದರು. “ಭಾರತೀಯ ಬಾಹ್ಯಾಕಾಶ ಕಥೆಯನ್ನು ನೀವು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಸ್ಕೈರೂಟ್ ಸಂಸ್ಥೆಯ ಸುದೀರ್ಘ ಪಯಣಕ್ಕೆ ಇದು ಕೇವಲ ಆರಂಭವಷ್ಟೇ. ಈ ಅದ್ಭುತ ಪ್ರತಿಭಾವಂತ ತಂಡಕ್ಕಾಗಿ ಭವಿಷ್ಯದಲ್ಲಿ ಇನ್ನೂ ಇಂತಹ ನೂರಾರು ಮೈಲಿಗಲ್ಲುಗಳು ಕಾಯುತ್ತಿವೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:35 pm, Sat, 18 July 26

Source link

ಎಸ್‌ಐಆರ್ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳು-ಪೋಷಕರ ಪ್ರತಿಭಟನೆ – Kannada News | SIR Duty Deployment of Teachers Disrupts Classes in Bengaluru School, Students and Parents Protest

ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ನಿಯೋಜಿಸಿರುವ ಪರಿಣಾಮ ಶಾಲಾ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಗುರುಕುಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ಶಿಕ್ಷಕರ ಪೈಕಿ 6 ಮಂದಿಯನ್ನು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ 8, 9 ಮತ್ತು 10ನೇ ತರಗತಿಗಳಿಗೆ ಒಬ್ಬ ಶಿಕ್ಷಕರೇ ಎಲ್ಲಾ ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 1ರಿಂದ 7ನೇ ತರಗತಿಗಳಿಗೂ ಸೀಮಿತ ಶಿಕ್ಷಕರಿಂದಲೇ ಪಾಠ ನಡೆಯುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಶಾಲೆಯ ಎದುರು ಪ್ರತಿಭಟನೆ ನಡೆಸಿದ ಅವರು, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version