Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು – Kannada News | Independence Day 2026: Follow these rules while flying the national flag at home

ಭಾರತದಾದ್ಯಂತ ನಾಗರಿಕರು ಆಗಸ್ಟ್‌ 15 ನೇ ತಾರಿಕಿನಂದು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲು ಸಜ್ಜಾಗಿದ್ದಾರೆ. ಎಂದಿನಂತೆ ಈ ದಿನ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣವನ್ನು ನಡೆಸಲಾಗುತ್ತದೆ. ಅಲ್ಲದೆ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶಾದ್ಯಂತ ಹರ್‌ ಘರ್‌ ತಿರಂಗಾ 2026 ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಪೋಸ್ಟ್‌ ಮಾಡುವ ಮೂಲಕ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೇಶದ ನಾಗರಿಕರಿಗೆ ಕರೆಯನ್ನು ನೀಡಿದ್ದಾರೆ. ಈ ಅಭಿಯಾನದಡಿಯಲ್ಲಿ ನೀವು ನಿಮ್ಮ ಮನೆಯಲ್ಲಿ ಹೆಮ್ಮೆಯ ರಾಷ್ಟ್ರ ಧ್ವಜವನ್ನು ಹಾರಿಸುತ್ತಿದ್ದರೆ, ತ್ರಿವರ್ಣ ಧ್ವಜ ಹಾರಿಸುವ ಮುನ್ನ ಪಾಲಿಸಬೇಕಾದ ಈ ಕಡ್ಡಾಯ ನಿಮಯಗಳನ್ನು ತಿಳಿದುಕೊಳ್ಳಿ ಮತ್ತು ರಾಷ್ಟ್ರ ಧ್ವಜಕ್ಕೆ ಅವಮಾನವಾಗದಂತೆ ನಡೆದುಕೊಳ್ಳಿ.

ಏನಿದು ‘ಹರ್ ಘರ್ ತಿರಂಗ’ ಅಭಿಯಾನ?

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ 2022 ರಲ್ಲಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳುವ ಮೂಲಕ ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ದೇಶಭಕ್ತಿಯ ಮನೋಭಾವವನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಅಭಿಯಾನವನ್ನು ಪ್ರಾರಂಭಿಸಿತು. ಈಗಾಗಲೇ ದೇಶಾದ್ಯಂತ ಹರ್‌ ಘರ್‌ ತಿರಂಗಾ 2026 ಅಭಿಯಾನಕ್ಕೂ ಚಾಲನೆ ನೀಡಲಾಗಿದ್ದು, ಆಗಸ್ಟ್‌ 9 ರಿಂದ ಆರಂಭವಾದ ಈ ಅಭಿಯಾನ ಆಗಸ್ಟ್‌ 17 ರ ವರೆಗೆ ನಡೆಯಲಿದೆ.

ಧ್ವಜಾರೋಹಣ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು?

  • ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ಬಳಿಕ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
  • ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಬಾರದು.  ಕೇಸರಿ ಯಾವಾಗಲೂ ಮೇಲ್ಭಾಗದಲ್ಲಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣದಲ್ಲಿರಬೇಕು. ಬಿಳಿ ಪಟ್ಟಿಯಲ್ಲಿ ಅಶೋಕ ಚಕ್ರ ಇರಬೇಕು, ಅದು 24 ಗೆರೆಗಳನ್ನು ಹೊಂದಿರಬೇಕು.
  • ತ್ರಿವರ್ಣ ಧ್ವಜವನ್ನು ಸ್ಪಷ್ಟವಾಗಿ ಗೋಚರಿಸುವ ಸ್ಥಳದಲ್ಲಿ ಹಾರಿಸಬೇಕು ಮತ್ತು ರಾಷ್ಟ್ರ ಧ್ವಜದ ಪಕ್ಕದಲ್ಲಿ ಬೇರೆ ಯಾವುದೇ ಧ್ವಜವನನ್ನು ಹಾರಿಸಬಾರದು.
  • ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು. ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
  • 2002 ರ ತಿದ್ದುಪಡಿ ಮಾಡಿದ ಧ್ವಜ ಸಂಹಿತೆಯ ಪ್ರಕಾರ, ಭಾನುವಾರ ಮತ್ತು ರಜಾದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಧ್ವಜವನ್ನು ಹಾರಿಸಬಹುದು.
  • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
  • ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಿರಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
  • ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
  • ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.
  • ಧ್ವಜವನ್ನು ಕೊಳಕು ಜಾಗದಲ್ಲಿ ಅಥವಾ ಹಾನಿ ಮಾಡುವ ರೀತಿಯಲ್ಲಿ ಸಂಗ್ರಹಿಸಬಾರದು.
  • ಅಭಿಯಾನ ಮುಗಿದ ನಂತರ ಧ್ವಜವನ್ನು ಗೌರವಯುತವಾಗಿ ಇಳಿಸಬೇಕು ಮತ್ತು ಜೋಪಾನವಾಗಿ ಸಂಗ್ರಹಿಸಿಡಬೇಕು.

ಇದನ್ನೂ ಓದಿ: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಒಂದು ವೇಳೆ ಧ್ವಜವನ್ನು ಅಗೌರವಿಸಿದರೆ ಅಥವಾ ಅದನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಧ್ವಜ ಹಾರಿಸುವಾಗ ಮತ್ತು ಇಳಿಸುವಾಗ ಸರಿಯಾದ ನಿಯಮ ಪಾಲಿಸದಿದ್ದರೆ, ರಾಷ್ಟ್ರ ಸಂಹಿತೆಯನ್ನು ಉಲ್ಲಂಘಿಸಿದರೆ  ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡವನ್ನು ವಿಧಿಸುವ ಸಾಧ್ಯತೆಯಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋರ್ಚುಗಲ್ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ನಾಯಕ! – Kannada News | Moises Henriques To Captain Portugal In T20 World Cup Qualifiers

ಪೋರ್ಚುಗಲ್ ತಂಡದ ನೂತನ ನಾಯಕನಾಗಿ ಮೊಯ್ಸೆಸ್ ಹೆನ್ರಿಕ್ಸ್ (Moises Henriques) ಆಯ್ಕೆಯಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಹೆನ್ರಿಕ್ಸ್ ಇತ್ತೀಚೆಗಷ್ಟೇ ಪೋರ್ಚುಗಲ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಮುಂಬರುವ 2028ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ಸಿ  ಟೂರ್ನಿಯಲ್ಲಿ ಅವರು ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಪೋರ್ಚುಗೀಸ್ ಮೂಲ:

ಮೊಯ್ಸೆಸ್ ಹೆನ್ರಿಕ್ಸ್ ಅವರು ಫೆಬ್ರವರಿ 1, 1987 ರಂದು ಪೋರ್ಚುಗಲ್‌ನ ಫಂಚಲ್‌ನಲ್ಲಿ ಜನಿಸಿದ್ದರು. ಆದರೆ ಅವರು ಚಿಕ್ಕ ಮಗುವಾಗಿದ್ದಾಗಲೇ ಅವರ ಕುಟುಂಬವು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿತ್ತು. ಹೀಗಾಗಿ ಅವರು ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು.

ಇತ್ತೀಚೆಗಷ್ಟೇ (ಜುಲೈ 2026) ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ 39 ವರ್ಷದ ಹೆನ್ರಿಕ್ಸ್, ಐಸಿಸಿ (ICC) ನಿಯಮಗಳ ಅಡಿಯಲ್ಲಿ ತಮಗಿರುವ ಅರ್ಹತೆಯನ್ನು ಬಳಸಿಕೊಂಡು ಪೋರ್ಚುಗಲ್ ಪರ ಆಡಲು ಸಜ್ಜಾಗಿದ್ದಾರೆ.

ಐಸಿಸಿ ನಿಯಮಾವಳಿಗಳ ಪ್ರಕಾರ, ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರದಿಂದ ಅಸೋಸಿಯೇಟ್ ಸದಸ್ಯ ರಾಷ್ಟ್ರಕ್ಕೆ ಬದಲಾಗಲು ಬೇಕಾದ ಕಡ್ಡಾಯ 3 ವರ್ಷಗಳ ‘ಸ್ಟ್ಯಾಂಡ್-ಡೌನ್’ ಅವಧಿಯನ್ನು ಹೆನ್ರಿಕ್ಸ್ ಈಗಾಗಲೇ ಪೂರೈಸಿದ್ದಾರೆ. ಈ ಕಾರಣದಿಂದಾಗಿ ಅವರು ತಮ್ಮ ಜನ್ಮ ನೀಡಿದ ದೇಶದ ಪರವಾಗಿ ಆಡಲು ಈಗ ಸಂಪೂರ್ಣ ಅರ್ಹರಾಗಿದ್ದಾರೆ.

ಇತ್ತ ಪೋರ್ಚುಗಲ್ ತಂಡಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ಗೆ ನಾಯಕತ್ವ ಕೂಡ ಲಭಿಸಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ಮೊಯ್ಸೆಸ್ ಹೆನ್ರಿಕ್ಸ್ ಮುಂದಾಳತ್ವದಲ್ಲಿ ಪೋರ್ಚುಗಲ್ ಪಡೆ ಕಣಕ್ಕಿಳಿಯಲಿದೆ.

ಪೋರ್ಚುಗಲ್ ತಂಡದ ವೇಳಾಪಟ್ಟಿ (ಗ್ರೂಪ್ ಬಿ):

ಐಸಿಸಿ ಟಿ20 ಶ್ರೇಯಾಂಕದಲ್ಲಿ 37ನೇ ಸ್ಥಾನದಲ್ಲಿರುವ ಪೋರ್ಚುಗಲ್ ತಂಡವು ಗ್ರೂಪ್ ‘ಬಿ’ ನಲ್ಲಿದ್ದು, ಈ ಕೆಳಗಿನ ದಿನಗಳಂದು ಟಿ20 ವಿಶ್ವಕಪ್​ನ ಅರ್ಹತಾ ಪಂದ್ಯಗಳನ್ನು ಆಡಲಿದೆ:

  • ಆಗಸ್ಟ್ 14: vs ಇಸ್ರೇಲ್
  • ಆಗಸ್ಟ್ 15: vs ಜರ್ಮನಿ
  • ಆಗಸ್ಟ್ 17: vs ಗ್ರೀಸ್ ವಿರುದ್ಧ
  • ಆಗಸ್ಟ್ 20: vs ಜೆಕಿಯಾ

ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಆಗಸ್ಟ್ 21 ರಂದು ನಡೆಯುವ ಸಬ್-ರೀಜನಲ್ ಫೈನಲ್‌ನಲ್ಲಿ ಗ್ರೂಪ್ ‘ಎ’ ವಿಜೇತರನ್ನು ಎದುರಿಸಲಿದೆ. ಅಲ್ಲಿ ಗೆದ್ದರೆ ಮಾತ್ರ ಮುಂದಿನ ಪ್ರಾದೇಶಿಕ ಫೈನಲ್ಸ್  ತಲುಪಲು ಸಾಧ್ಯವಾಗುತ್ತದೆ.

ಅನುಭವಿ ಆಟಗಾರರ ಬಲ:

ಮಾಜಿ ನಾಯಕ ಕಾರ್ಲೋಸ್ ನೂನ್ಸ್ ಅವರಿಂದ ನಾಯಕತ್ವದ ಜವಾಬ್ದಾರಿ ಪಡೆದಿರುವ ಮೊಯ್ಸೆಸ್ ಹೆನ್ರಿಕ್ಸ್ ಅವರಿಗೆ ಸಾಥ್ ನೀಡಲು ತಂಡದಲ್ಲಿ ಹಲವು ವಿದೇಶಿ ಲೀಗ್‌ಗಳ ಅನುಭವವಿರುವ ಆಟಗಾರರಿದ್ದಾರೆ. ಸಸೆಕ್ಸ್ ಕೌಂಟಿ ಪರ ಆಡಿದ್ದ ಕ್ರೇಗ್ ಕ್ಯಾಚೋಪಾ, ಸೌತ್ ಆಫ್ರಿಕಾ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಕ್ಯಾಮರೋನ್ ಶೆಕ್ಲೆಟನ್ ಮತ್ತು ಸೆಬಾಸ್ಟಿಯನ್ ಡಿ ಒಲಿವೇರಾ ಅವರಂತಹ ಬಲಿಷ್ಠ ಆಟಗಾರರು 14 ಸದಸ್ಯರ ಪೋರ್ಚುಗಲ್ ತಂಡದಲ್ಲಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!

ಆಸ್ಟ್ರೇಲಿಯಾ ಪರ 4 ಟೆಸ್ಟ್, 16 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿರುವ, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಹಲವು ತಂಡಗಳ ಪರ ಆಡಿರುವ ಮೊಯ್ಸೆಸ್ ಹೆನ್ರಿಕ್ಸ್ ಅವರ ಅಪಾರ ಅನುಭವ ಪೋರ್ಚುಗಲ್ ಕ್ರಿಕೆಟ್‌ನ ಇತಿಹಾಸವನ್ನೇ ಬದಲಾಯಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Source link

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – Kannada News | Delhi SpiceJet AC Failure: Passengers Demand Action After Averted Mid Air Crisis

ದೆಹಲಿ, ಆ.12: ದೆಹಲಿಯಿಂದ ಪುಣೆಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಇಂದು (ಆ.12) ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಜಾಗರೂಕತೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ವಿಮಾನದ ಕ್ಯಾಬಿನ್‌ನಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿ, ಉಸಿರಾಟದ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಮಾನ ಏರಿದ ತಕ್ಷಣ, ಕ್ಯಾಬಿನ್ ಒಳಗಿನ ಹವಾನಿಯಂತ್ರಣ (AC) ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡು ತಾಪಮಾನ ಅತಿಯಾಗಿ ಏರಿಕೆಯಾಯಿತು. ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ವಿಮಾನದೊಳಗೆ ಉಸಿರಾಡಲು ಕಷ್ಟಪಟ್ಟು ಆತಂಕಕ್ಕೊಳಗಾದರು. ವಿಮಾನದಲ್ಲಿದ್ದ ಪ್ರಯಾಣಿಕ ಲೇಶ್‌ಪಾಲ್ ಜಾವಲ್ಗೆ ಎಂಬುವವರು ಆರೋಪಿಸಿರುವಂತೆ, “ಪ್ರಯಾಣಿಕರು ಉಸಿರಾಟದ ಸಮಸ್ಯೆಯಿಂದ ಪರದಾಡುತ್ತಿದ್ದರೂ ಸಹ, ವಿಮಾನದ ಕ್ಯಾಪ್ಟನ್ (ಪೈಲಟ್) ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ತಕ್ಷಣವೇ ವಿಮಾನವನ್ನು ಟೇಕ್-ಆಫ್ ಮಾಡಲು ಧಾವಂತದಲ್ಲಿದ್ದಂತೆ ಕಂಡುಬಂದರು.” ಎಂದು ಹೇಳಿದರು. ವಿಮಾನದೊಳಗೆ ಭಾರಿ ಗದ್ದಲ ಮತ್ತು ಆಕ್ರೋಶ ವ್ಯಕ್ತವಾದ ಬಳಿಕ, ವಿಮಾನದಲ್ಲಿ ತಾಂತ್ರಿಕ ದೋಷ ಇರುವುದು ಖಚಿತವಾಯಿತು. ತಕ್ಷಣವೇ ಜಾಗರೂಕರಾದ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಿದರು. ಪ್ರಯಾಣಿಕರ ಜಾಗರೂಕತೆ ಮತ್ತು ಸಮಯಪ್ರಜ್ಞೆಯಿಂದಾಗಿ ಮುಂಗಡವಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದಂತಾಗಿದೆ. ಈ ಗಂಭೀರ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್​ಗಳಿಂದಾಗಿ ಇಂಧನ ದುಬಾರಿ – Kannada News | Himachal govt imposes Widow Orphan cess on Petrol and Diesel, as the state’s economy in crisis

ಶಿಮ್ಲಾ, ಆಗಸ್ಟ್ 12: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಲ್ಲಿನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೊಸದಾಗಿ ‘ವಿಧವೆ ಮತ್ತು ಅನಾಥರ ಕಲ್ಯಾಣ ಸೆಸ್’ ಅನ್ನು ವಿಧಿಸಿದೆ. ಇಂದಿನಿಂದಲೇ (ಆಗಸ್ಟ್ 12) ಜಾರಿಗೆ ಬಂದಿರುವ ಈ ನೂತನ ಸೆಸ್‌ನಿಂದಾಗಿ ಈ ರಾಜ್ಯದಲ್ಲಿ ಇಂಧನ ದರ ಪ್ರತಿ ಲೀಟರ್‌ಗೆ 60 ಪೈಸೆ ಏರಿಕೆಯಾಗಿದೆ. ಈಗಾಗಲೇ ವ್ಯಾಟ್ ಏರಿಕೆಯಿಂದ 14 ರೂಗೂ ಅಧಿಕ ದರ ಹೆಚ್ಚಳ ಕಂಡಿರುವ ಡೀಸಲ್ ಬಳಕೆದಾರರಿಗೆ ಇನ್ನೊಂದು ಆಘಾತ ಸಿಕ್ಕಂತಾಗಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಯೋಜನೆಗಳಿಗೆ ನಿರಂತರ ಧನಸಹಾಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಮೌಲ್ಯವರ್ಧಿತ ತೆರಿಗೆ (VAT) ಕಾಯ್ದೆಯಡಿ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ 60 ಪೈಸೆ ಸೆಸ್ ವಿಧಿಸಲಾಗಿದ್ದರೂ, ಕಾನೂನಿನ ಪ್ರಕಾರ ಲೀಟರ್‌ಗೆ ₹5 ರವರೆಗೆ ಸೆಸ್ ಹೆಚ್ಚಿಸಲು ಸರ್ಕಾರಕ್ಕೆ ಅಧಿಕಾರವಿದೆ.

ಡೀಸಲ್ ದರ ಗಮನಾರ್ಹ ಏರಿಕೆ: ಇತ್ತೀಚೆಗಷ್ಟೇ ಹಿಮಾಚಲದಲ್ಲಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಎರಡು ಹಂತಗಳಲ್ಲಿ ಒಟ್ಟು ₹6 ಹೆಚ್ಚಿಸಲಾಗಿತ್ತು. ಇದೀಗ ಹೊಸ ಸೆಸ್ ಸೇರಿ ಡೀಸೆಲ್ ದರ ಗಮನಾರ್ಹವಾಗಿ ಏರಿಕೆಯಾಗಿದೆ. ವ್ಯಾಟ್ ಮತ್ತು ಸೆಸ್ ಸೇರಿಸಿದರೆ ಹಿಮಾಚಲದಲ್ಲಿ ಡೀಸಲ್ ಬೆಲೆ 15 ರೂಗಳಷ್ಟು ಹೆಚ್ಚಳ ಆದಂತಾಗುತ್ತದೆ.

ಇದನ್ನೂ ಓದಿ: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?

ಈ ಸೆಸ್ ಅನಗತ್ಯ ಎಂದು ಇಂಧನ ಮಾರಾಟಗಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಇಂಧನ ದರ ಹೆಚ್ಚಳದಿಂದಾಗಿ ಗಡಿ ಪ್ರದೇಶದ ಜನರು ನೆರೆಯ ರಾಜ್ಯಗಳಿಗೆ ತೆರಳಿ ಪೆಟ್ರೋಲ್-ಡೀಸೆಲ್ ಖರೀದಿಸುವ ಸಾಧ್ಯತೆಯಿದ್ದು, ಇದರಿಂದ ರಾಜ್ಯಕ್ಕೆ ಬರುವ ಮೂಲ ಆದಾಯವೇ ಕಡಿಮೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲಪ್ರದೇಶ

  • ಬೃಹತ್ ಸಾಲ: ರಾಜ್ಯದ ಒಟ್ಟು ಸಾಲ ₹1.04 ಲಕ್ಷ ಕೋಟಿ ದಾಟಿದೆ.
  • ಸಾಲ ಮರುಪಾವತಿ ಕೊರತೆ: 2026-27 ಸಾಲಿನಲ್ಲಿ ₹13,000 ಕೋಟಿ ಸಾಲ ಮರುಪಾವತಿ ಮಾಡಬೇಕಿದ್ದು, ಸರ್ಕಾರ ಕೇವಲ ₹10,000 ಕೋಟಿ ಸಾಲ ಎತ್ತುವಳಿ ಮಾಡಲು ಯೋಜಿಸಿದೆ. ಅಂದರೆ, ಸಾಲ ಮರುಪಾವತಿಯಲ್ಲೇ ₹3,000 ಕೋಟಿ ಕೊರತೆ ಎದುರಾಗಿದೆ.
  • ಕೇಂದ್ರದ ಅನುದಾನ ಕಡಿತ ಭೀತಿ: 16ನೇ ಹಣಕಾಸು ಆಯೋಗವು ಕಂದಾಯ ಕೊರತೆ ಅನುದಾನಗಳನ್ನು (Revenue Deficit Grants) ಹಂತ ಹಂತವಾಗಿ ಬಂದ್ ಮಾಡಲು ಶಿಫಾರಸು ಮಾಡಿದ್ದು, ಮುಂದಿನ 5 ವರ್ಷಗಳಲ್ಲಿ ರಾಜ್ಯವು ₹35,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸುವ ಭೀತಿಯಲ್ಲಿದೆ.

ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…

ಯಾವುದಕ್ಕೆ ಬಳಕೆ ಈ ವಿಧವೆ, ಅನಾಥರ ಸೆಸ್?

ಆರ್ಥಿಕ ಸಂಕಷ್ಟದಲ್ಲೂ ಹಿಮಾಚಲಪ್ರದೇಶ ಸರ್ಕಾರವು ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಅನಾಥರು ಮತ್ತು ವಿಧವೆಯರ ಕಲ್ಯಾಣ ಕಾರ್ಯಕ್ರಮಗಳೂ ಇವೆ. ಇವುಗಳಿಗೆ ಫಂಡಿಂಗ್ ಹೊಂದಿಸಲು ಈ ಸೆಸ್ ಬಳಸಲಾಗುವುದು ಎನ್ನಲಾಗಿದೆ. ಆದರೆ, ಆ ರಾಜ್ಯದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳು ಎಷ್ಟು ಸಂಖ್ಯೆಯಲ್ಲಿದ್ದಾರೆ? ಅವರಿಗೆ ಸರ್ಕಾರ ಎಷ್ಟು ವ್ಯಯಿಸುತ್ತದೆ ಎನ್ನುವ ಪ್ರಶ್ನೆಯನ್ನು ಪೆಟ್ರೋಲಿಯಂ ಡೀಲರ್​ಗಳ ಸಂಸ್ಥೆ ಎತ್ತಿದೆ.

ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಗೆ ಸೆಸ್, ಹಿಮಾಚಲದಲ್ಲಿ ಮಾತ್ರ ಭಿನ್ನ

ಭಾರತದ ವಿವಿಧ ರಾಜ್ಯಗಳೂ ಕೂಡ ಪೆಟ್ರೋಲ್ ಮತ್ತು ಡೀಸಲ್​ಗೆ ಸೆಸ್ ಹಾಕುತ್ತವೆ. ಆದರೆ, ಅವೆಲ್ಲವೂ ಬಹುತೇಕ ಅಭಿವೃದ್ಧಿ ಯೋಜನೆಗಳಿಗೆ ಫಂಡಿಂಗ್ ಮಾಡುವ ಹೆಸರಲ್ಲಿ ವಿಧಿಸುವ ಸೆಸ್. ಆದರೆ, ಹಿಮಾಚಲಪ್ರದೇಶ ಮಾತ್ರವೇ ವಿಧವೆ ಮತ್ತು ಅನಾಥ ಮಕ್ಕಳ ಸೆಸ್ ವಿಧಿಸುತ್ತಿರುವ ಏಕೈಕ ರಾಜ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟ್ಯಾಟೂ ಪ್ರಿಯರಿಗೆ ಶಾಕ್: ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ – Kannada News | Dangerous Tattoos? India Proposes Strict Laws for Parlors and Inks to Protect Health

ಬೆಂಗಳೂರು, ಆ.12: ಯುವಜನತೆಯಲ್ಲಿ ಟ್ಯಾಟೂ (Tattoo) ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಅಸುರಕ್ಷಿತ ಹಾಗೂ ರಾಸಾಯನಿಕಯುಕ್ತ ಟ್ಯಾಟೂಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ. ಹೀಗಾಗಿ ರಾಜ್ಯದಲ್ಲಿ ಮತ್ತು ದೇಶಾದ್ಯಂತ ಟ್ಯಾಟೂ ಪಾರ್ಲರ್‌ಗಳು ಹಾಗೂ ಕೆಮಿಕಲ್‌ ಬಳಕೆಯ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹಾಗೂ ಡ್ರಗ್ ಕಂಟ್ರೋಲ್ ಬೋರ್ಡ್ ಹೊಸ ಕಾನೂನು ಮತ್ತು ಮಾರ್ಗಸೂಚಿ ತರಲು ಮುಂದಾಗಿದೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಅನುಸರಿಸುವ ಅಶುಚಿತ್ವ ಹಾಗೂ ಅಪಾಯಕಾರಿ ಕೆಮಿಕಲ್‌ಗಳ ಬಳಕೆಯಿಂದಾಗಿ ಹಲವು ಮಾರಣಾಂತಿಕ ರೋಗಗಳು ಹರಡುತ್ತಿರುವುದು ತಜ್ಞರ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಒಂದೇ ಸೂಜಿ ಅಥವಾ ಸರಿಪಡಿಸದ ಉಪಕರಣಗಳ ಬಳಕೆಯಿಂದ ಎಚ್‌ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಬ್ಯಾಕ್ಟೀರಿಯಾ ಸೋಂಕುಗಳು ಹರಡುತ್ತಿವೆ. ಟ್ಯಾಟೂ ಶಾಯಿಯಲ್ಲಿರುವ ಕನ್ಸ್ಟ್ರಕ್ಷನ್ ಕೆಮಿಕಲ್ಸ್ ಹಾಗೂ ಭಾರಲೋಹಗಳಿಂದ ಚರ್ಮದ ಕ್ಯಾನ್ಸರ್, ಅಲರ್ಜಿ ಹಾಗೂ ವಿವಿಧ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಔಷಧ ನಿಯಂತ್ರಣ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ನೀಡಿರುವ ಹೇಳಿಕೆ ಪ್ರಕಾರ “ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ಯಾಟೂ ಇಂಕ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅತಿಯಾದ ಕೆಮಿಕಲ್ಸ್ ಹಾಗೂ ಸೀಸ, ಕ್ರೋಮಿಯಂನಂತಹ ಅಪಾಯಕಾರಿ ಮೆಟಲ್ ಅಂಶಗಳು ಪತ್ತೆಯಾಗಿವೆ. ದೇಶದಲ್ಲಿ ಟ್ಯಾಟೂಗೆ ಯಾವುದೇ ನಿರ್ದಿಷ್ಟ ನಿಯಂತ್ರಣ ಕಾನೂನುಗಳಿರಲಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಟ್ಯಾಟೂ ತಯಾರಕರಿಗೆ ಹಾಗೂ ಹಾಕುವವರಿಗೂ ಸೂಕ್ತ ಮಾನದಂಡಗಳು ಅತಿ ಅಗತ್ಯವಿದೆ.” ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್: ಶಿರಾಡಿಘಾಟ್ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ಸಂಚಾರ – Kannada News | Bengaluru Mangaluru Vande Bharat Trial Run Successful via Sakleshpur

ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್

ಹಾಸನ, ಆಗಸ್ಟ್ 12: ಜಿಲ್ಲೆಯ ಜನರ ಬಹುದಿನಗಳ ಕನಸು ಕೊನೆಗೂ ನನಸಾಗುವತ್ತ ಹೆಜ್ಜೆ ಇಟ್ಟಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವು (ಟ್ರಯಲ್ ರನ್) ಹಾಸನ ಜಿಲ್ಲೆಯ ಸಕಲೇಶಪುರ ನಿಲ್ದಾಣದಿಂದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಯಶಸ್ವಿಯಾಗಿ ಆರಂಭಗೊಂಡಿದೆ. ಅತ್ಯಂತ ಕಠಿಣ ಹಾಗೂ ತಿರುವುಗಳಿಂದ ಕೂಡಿದ ಶಿರಾಡಿಘಾಟ್ ಮಾರ್ಗದಲ್ಲಿ ಈ ರೈಲು ಸಂಚರಿಸುವ ಮೂಲಕ ಇತಿಹಾಸ ಬರೆದಿದೆ.

ಟ್ರಯಲ್ ರನ್ ಪ್ರಕ್ರಿಯೆ ಚಾಲನೆಯಲ್ಲಿ

ಸಕಲೇಶಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲಿಗೆ ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಅವರು ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಶಾಸಕರು ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ನಿರಂತರವಾಗಿ ಮನವಿ ಸಲ್ಲಿಸಿದ್ದರು. ಅದಕ್ಕೆ ಪೂರಕವಾಗಿ ಸಕಲೇಶಪುರ ಮಾರ್ಗದವರೆಗಿನ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಈಗ ಟ್ರಯಲ್ ರನ್ ಪ್ರಕ್ರಿಯೆ ಚಾಲನೆಯಲ್ಲಿದೆ.

ಈ ವಿಶೇಷ ವಂದೇ ಭಾರತ್ ರೈಲು 20 ಬೋಗಿಗಳನ್ನು ಹೊಂದಿದ್ದು, ಏಕಕಾಲಕ್ಕೆ 1,080 ಪ್ರಯಾಣಿಕರು ಅತ್ಯಂತ ಸುಖಕರವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಘಾಟ್ ಪ್ರದೇಶದ ಕಡಿದಾದ ಇಳಿಜಾರಿನಲ್ಲಿ ಸುರಕ್ಷಿತವಾಗಿ ಚಲಿಸಲು ಈ ರೈಲಿನಲ್ಲಿ ಅತ್ಯಾಧುನಿಕ ‘ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಐಷಾರಾಮಿ ಸಾರಿಗೆ ವ್ಯವಸ್ಥೆ

ಬೆಂಗಳೂರು ಹಾಗೂ ಕರಾವಳಿ ಭಾಗದ ಪ್ರಯಾಣಿಕರಿಗೆ ಇನ್ನು ಮುಂದೆ ಅತ್ಯಂತ ವೇಗದ ಮತ್ತು ಐಷಾರಾಮಿ ಸಾರಿಗೆ ವ್ಯವಸ್ಥೆ ಸಿಗಲಿದೆ. ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬೆನ್ನಲ್ಲೇ, ಶೀಘ್ರದಲ್ಲೇ ಈ ರೈಲು ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ನಿಯಮಿತವಾಗಿ ಸಂಚಾರ ಆರಂಭಿಸಲಿ ಎಂಬುದು ಹಾಸನ ಹಾಗೂ ಕರಾವಳಿ ಜಿಲ್ಲೆಗಳ ಪ್ರಯಾಣಿಕರ ತೀವ್ರ ಆಶಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ – Kannada News | Husband moved to tears by the surprise gift his wife gave for their wedding anniversary.

ಗಂಡ ಹೆಂಡತಿ (husband and wife) ನಡುವೆ ಅನ್ಯೋನತೆ ಬಹಳ ಮುಖ್ಯ. ಹೌದು, ಗಂಡ ಹೆಂಡತಿಗೆ ಬೆಂಬಲವಾಗಿ ನಿಂತರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಇತ್ತ ಪತ್ನಿಯೂ ಆತನ ಸಣ್ಣ ಪುಟ್ಟ ಕನಸುಗಳನ್ನು ನೆರವೇರಿಸುತ್ತಾಳೆ. ಆತನ ಜವಾಬ್ದಾರಿಗಳಿಗೆ ತಾನು ಹೆಗಲು ಕೊಡುತ್ತಾಳೆ. ಇದೀಗ ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಯೂ ಪತಿಯ ಮೊಗದಲ್ಲಿ ನಗು ಮೂಡಿಸಿದ್ದಾಳೆ. ವಿಶೇಷ ದಿನದಂದು ಪತಿಗೆ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾಳೆ. ಶೋರೂಮ್‌ನಲ್ಲಿ ಬೈಕ್ ಖರೀದಿ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಖುಷಿಯ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದಾರೆ.

ಹಿಂದೂ ಪ್ಲಸ್‌ (Hindupluse) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮದುವೆ ವಾರ್ಷಿಕೋತ್ಸವದ ದಿನ ಪತ್ನಿಯೂ ಪತಿಗೆ ಸರ್ಪ್ರೈಸ್ ನೀಡಿರುವುದನ್ನು ಕಾಣಬಹುದು. ಪತಿಯನ್ನು ಶೋ ರೂಮ್‌ಗೆ ಕರೆದುಕೊಂಡು ಬಂದಿದ್ದಾಳೆ. ಈ ದಂಪತಿಯ ಜತೆಗೆ ಆತ್ಮೀಯರು ಕೂಡ ಬಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದೇ ವೇಳೆ ಸಿಬ್ಬಂದಿಯೊಬ್ಬರು ಈ ವ್ಯಕ್ತಿಗೆ ಬೈಕ್ ಕೀಯನ್ನು ಕೈಗೆ ನೀಡುತ್ತಿದ್ದಂತೆ ಹಿಂದೇಟು ಹಾಕಿದ್ದಾನೆ. ಕೊನೆಗೆ ಪತ್ನಿಯೇ ಬೈಕ್ ಕೀ ಹಿಡಿದುಕೊಳ್ಳುವಂತೆ ಹೇಳಿ ಸರ್ಪ್ರೈಸ್ ನೀಡಿದ್ದಾಳೆ. ಈ ಸರ್ಪ್ರೈಸ್ ಗಿಫ್ಟ್‌ ನೋಡಿ ಪತಿಯೂ ಭಾವುಕನಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ: ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು

ಈ ವಿಡಿಯೋ 22 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪತಿಯ ನೈಜ ಪ್ರೀತಿ ಆತನ ಕಣ್ಣಲ್ಲಿ ನೀರು ತರಿಸಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಪತ್ನಿ ಸಿಕ್ಕರೆ ಜೀವನದಲ್ಲಿ ಗೆದ್ದಂತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಡೌನ್ ಪೇಮೆಂಟ್ ಆಗಿದೆ, ಇಎಂಐ ಕಟ್ಟೋರು ಯಾರು ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ದಿನ ಮೊದಲೇ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾ! – Kannada News | AUS vs BAN: Australia Name Playing XI A Day Out

ಡಾರ್ವಿನ್‌ನ ಮರಾರಾ ಸ್ಟೇಡಿಯಂನಲ್ಲಿ ಆಗಸ್ಟ್ 13ರಿಂದ ಆರಂಭವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಅದರಲ್ಲೂ ಆರಂಭಿಕನಾಗಿ ಜೇಕ್ ವೆದರಾಲ್ಡ್ ಮತ್ತೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಆರಂಭಿಕ ಜೋಡಿ:

ಉಸ್ಮಾನ್ ಖ್ವಾಜಾ ನಿವೃತ್ತಿಯಿಂದ ತೆರವಾಗಿರುವ ಆರಂಭಿಕ ಸ್ಥಾನದಲ್ಲಿ ಜೇಕ್ ವೆದರಾಲ್ಡ್​ ಕಣಕ್ಕಿಳಿಯಲಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೆದರಾಲ್ಡ್ 2025ರ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಖ್ವಾಜಾ ಅವರ ಸ್ಥಾನದಲ್ಲಿ ಆರಂಭಿಕನಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಬಾಂಗ್ಲಾದೇಶ್ ವಿರುದ್ಧ ಟ್ರಾವಿಸ್ ಹೆಡ್ ಹಾಗೂ ಜೇಕ್ ವೆದರಾಲ್ಡ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಮಧ್ಯಮ ಕ್ರಮಾಂಕಕ್ಕೆ ಸ್ಟಾರ್ ಬಲ:

ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಲಿದ್ದಾರೆ. ಇವರೊಂದಿಗೆ ಕ್ಯಾಮರೋನ್ ಗ್ರೀನ್ ಮತ್ತು ಬ್ಯೂ ವೆಬ್‌ಸ್ಟರ್ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರ ಸೇರ್ಪಡೆಯಿಂದಾಗಿ ಬ್ಯಾಕಪ್ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಅಂತಿಮ 11ರಿಂದ ಹೊರಗುಳಿಯಬೇಕಾಗಿ ಬಂದಿದೆ.

ಒಂದಾದ ‘ಬಿಗ್ ಫೋರ್’:

ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತನ್ನ ಅತ್ಯಂತ ಯಶಸ್ವಿ ಮತ್ತು ಅನುಭವಿ ಬೌಲರ್‌ಗಳನ್ನು ಕಣಕ್ಕಿಳಿಸಿದೆ. ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್ ತ್ರಿವಳಿ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಹಿರಿಯ ಆಟಗಾರ ನಾಥನ್ ಲಿಯಾನ್ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೇಕ್ ವೆದರಾಲ್ಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ಯೂ ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹೇಝಲ್​ವುಡ್.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್​, ಜೋಶ್ ಹೇಝಲ್​ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್, ಜೇಕ್ ವೆದರಾಲ್ಡ್, ಬ್ಯೂ ವೆಬ್​​ಸ್ಟರ್.

Source link

ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್ – Kannada News | Radhika Pandit shared her Yash’s engagement video on Instagram

ನಟಿ ರಾಧಿಕಾ ಪಂಡಿತ್ (Radhika Pandit) ಮತ್ತು ನಟ ಯಶ್ ಅವರುಗಳು ಸ್ಯಾಂಡಲ್​​ವುಡ್​​ನ ಸ್ಟಾರ್ ಜೋಡಿ. ಇಬ್ಬರೂ ನಟರಾಗಿದ್ದವರು. ಬಳಿಕ ಪ್ರೀತಿಸಿ ಮದುವೆ ಆದರು. ಈಗ ಯಶ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ರಾಧಿಕಾ ಪಂಡಿತ್, ಪತಿಯ ಯಶಸ್ಸಿಗಾಗಿ ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ಇದೀಗ ರಾಧಿಕಾ, ತಮ್ಮ ಹಾಗೂ ಯಶ್ ಅವರ ಅಪರೂಪದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಹಾಗೂ ಯಶ್ ಅವರ ವಿವಾಹ ನಿಶ್ಚಿತಾರ್ಥ ನಡೆದು ಇಂದಿಗೆ (ಆಗಸ್ಟ್ 12) ಹತ್ತು ವರ್ಷಗಳಾಗಿದ್ದು, ಇದೇ ಖುಷಿಯಲ್ಲಿ ತಮ್ಮ ಹಾಗೂ ಯಶ್ ಅವರ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು – Kannada News | Tirumala Pavitrotsavam Aug 23 25: TTD Cancels Services, SSD Token Distribution Changes

ತಿರುಮಲ ಶ್ರೀವಾರಿ ಪವಿತ್ರೋತ್ಸವImage Credit source: Getty Images

ತಿರುಮಲ: ಕಲಿಯುಗ ವೈಕುಂಠ ಎಂದೇ ಪ್ರಸಿದ್ಧವಾಗಿರುವ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಆಗಸ್ಟ್ 23ರಿಂದ 25ರವರೆಗೆ ಶ್ರೀವಾರಿ ಪವಿತ್ರೋತ್ಸವಗಳು ನಡೆಯಲಿವೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ತಿಳಿಸಿದೆ. ಆಗಸ್ಟ್ 22ರಂದು ಅಂಕುರಾರ್ಪಣ ಕಾರ್ಯಕ್ರಮದೊಂದಿಗೆ ಪವಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ವರ್ಷವಿಡೀ ದೇವಾಲಯದಲ್ಲಿ ನಡೆಯುವ ವಿವಿಧ ಅರ್ಚನೆ, ಸೇವೆ ಹಾಗೂ ಉತ್ಸವಗಳ ಸಂದರ್ಭದಲ್ಲಿ ಯಾತ್ರಿಕರು ಅಥವಾ ಸಿಬ್ಬಂದಿಯಿಂದ ಉಂಟಾಗಬಹುದಾದ ಲೋಪದೋಷಗಳಿಗೆ ಪ್ರಾಯಶ್ಚಿತ್ತವಾಗಿ, ದೇವಾಲಯದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಆಗಮ ಶಾಸ್ತ್ರದ ವಿಧಿವಿಧಾನಗಳಂತೆ ಈ ಪವಿತ್ರೋತ್ಸವವನ್ನು ನೆರವೇರಿಸಲಾಗುತ್ತದೆ.

ಪವಿತ್ರೋತ್ಸವದ ಅಂಗವಾಗಿ ಆಗಸ್ಟ್ 23ರಿಂದ 25ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 9ರಿಂದ 11ರವರೆಗೆ ದೇವಾಲಯದ ಸಂಪಂಗಿ ಪ್ರಕಾರದಲ್ಲಿ ಸ್ನಪ ತಿರುಮಂಜನಂ ನೆರವೇರಲಿದೆ. ಸಂಜೆ ಶ್ರೀದೇವಿ ಮತ್ತು ಭೂದೇವಿಯ ಸಮೇತ ಶ್ರೀ ಮಲಯಪ್ಪ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿದ ಆಭರಣಗಳೊಂದಿಗೆ ದೇವಾಲಯದ ನಾಲ್ಕು ಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗೆ ಸ್ವಾಮಿಯ ವಿಶೇಷ ದರ್ಶನದ ಅವಕಾಶ ದೊರೆಯಲಿದೆ. ಆಗಸ್ಟ್ 23ರಂದು ಪವಿತ್ರ ವಸ್ತುಗಳ ಪ್ರತಿಷ್ಠಾಪನೆ, ಆಗಸ್ಟ್ 24ರಂದು ಪವಿತ್ರ ವಸ್ತುಗಳ ಸಮರ್ಪಣೆ ಹಾಗೂ ಆಗಸ್ಟ್ 25ರಂದು ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ.

ಹಲವು ಪಾವತಿಸಿದ ಸೇವೆಗಳು ರದ್ದು:

ಪವಿತ್ರೋತ್ಸವದ ಹಿನ್ನೆಲೆಯಲ್ಲಿ ಟಿಟಿಡಿ ಹಲವು ಪಾವತಿಸಿದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಆಗಸ್ಟ್ 22ರಂದು ಸಹಸ್ರದೀಪಾಲಂಕಾರ ಸೇವೆ ನಡೆಯುವುದಿಲ್ಲ. ಆಗಸ್ಟ್ 23ರಿಂದ 25ರವರೆಗೆ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆಗಸ್ಟ್ 25ರಂದು ಅಷ್ಟದಳಪದ ಪದ್ಮಾರಾಧನೆ ಸೇವೆ ಹಾಗೂ ಆಗಸ್ಟ್ 26ರಂದು ವಿವಾಹೋತ್ಸವ ಸೇವೆಯನ್ನೂ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಇಂದು ಎಸ್‌ಎಸ್‌ಡಿ ಟೋಕನ್ ವಿತರಣೆ ಸ್ಥಗಿತ:

ಇದೇ ವೇಳೆ, ತಿರುಪತಿಯ ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್ ಕೌಂಟರ್‌ಗಳಲ್ಲಿ ಬುಧವಾರ ವಿತರಿಸಬೇಕಿದ್ದ ಸರ್ವ ದರ್ಶನ (SSD) ಟೋಕನ್‌ಗಳ ವಿತರಣೆಯನ್ನು ಟಿಟಿಡಿ ಸ್ಥಗಿತಗೊಳಿಸಿದೆ. ಬುಧವಾರ ವಿತರಿಸಬೇಕಿದ್ದ ಟೋಕನ್‌ಗಳನ್ನು ಗುರುವಾರದ ದರ್ಶನಕ್ಕೆ ನೀಡಲಾಗುವುದಿಲ್ಲ. ಟೋಕನ್ ಇಲ್ಲದೆ ಬರುವ ಭಕ್ತರು ನೇರವಾಗಿ ತಿರುಮಲ ತಲುಪಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಸರ್ವ ದರ್ಶನ ಪಡೆಯುವಂತೆ ಟಿಟಿಡಿ ಮನವಿ ಮಾಡಿದೆ. ಶುಕ್ರವಾರದ ದರ್ಶನಕ್ಕಾಗಿ ಗುರುವಾರ ಮಧ್ಯಾಹ್ನದಿಂದ ಎಂದಿನಂತೆ ಎಸ್‌ಎಸ್‌ಡಿ ಟೋಕನ್‌ಗಳ ವಿತರಣೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಎಸ್‌ಎಸ್‌ಡಿ ಟೋಕನ್ ವಿತರಣೆ ಸ್ಥಗಿತಗೊಳಿಸಿರುವುದಕ್ಕೆ ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಟೋಕನ್‌ಗಳಿಲ್ಲದೆ ತಿರುಮಲಕ್ಕೆ ಆಗಮಿಸುವ ಭಕ್ತರಿಗೂ ಸರ್ವ ದರ್ಶನದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮವನ್ನು ಸತತ ಏಳು ಬುಧವಾರಗಳ ಕಾಲ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.

ಮಂಗಳವಾರ 10 ಸಾವಿರ ಎಸ್‌ಎಸ್‌ಡಿ ಟೋಕನ್ ವಿತರಣೆ:

ಮಂಗಳವಾರ ಬೆಳಿಗ್ಗೆ 6 ಗಂಟೆಗೆ ತಿರುಮಲ ಶ್ರೀವಾರಿ ದರ್ಶನಕ್ಕಾಗಿ 10,000 ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಿಸಲಾಯಿತು. ಈ ಟೋಕನ್ ಹೊಂದಿರುವ ಭಕ್ತರಿಗೆ ಬುಧವಾರ ಮಧ್ಯಾಹ್ನ 12ರಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಶ್ರೀವಾರಿ ಮೆಟ್ಟು ಮಾರ್ಗದ ಮೂಲಕ ತಿರುಮಲಕ್ಕೆ ತೆರಳುವ ಭಕ್ತರಿಗಾಗಿ 2,000 ಟೋಕನ್‌ಗಳನ್ನು ವಿತರಿಸಲಾಗಿದೆ. ಪವಿತ್ರೋತ್ಸವದ ಹಿನ್ನೆಲೆಯಲ್ಲಿ ಸೇವೆಗಳು ಮತ್ತು ದರ್ಶನ ವ್ಯವಸ್ಥೆಯಲ್ಲಿ ಬದಲಾವಣೆಗಳಿರುವುದರಿಂದ ಭಕ್ತರು ಟಿಟಿಡಿ ಸೂಚನೆಗಳನ್ನು ಗಮನಿಸಿ ತಿರುಮಲ ಯಾತ್ರೆಯನ್ನು ಯೋಜಿಸುವಂತೆ ಮನವಿ ಮಾಡಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version