ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ; 4 ಕಡೆ ವೋಟರ್ ಐಡಿ ಇರುವ ಆರೋಪ – Kannada News | Arrest warrant against actor Prakash Raj for having 4 voter ID card

ಬಹುಭಾಷ ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. 4 ಬೇರೆ ಬೇರೆ ಕಡೆಗಳಲ್ಲಿ ವೋಟರ್ ಐಡಿ ಹೊಂದಿರುವ ಆರೋಪದ ಮೇಲೆ ಅವರ ವಿರುದ್ಧ ವಕೀಲ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರು. 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನಂತರ ಪೊಲೀಸ್ ಆಯುಕ್ತರಿಗೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಅಲ್ಲಿಯೂ ಕ್ರಮ ತೆಗೆದುಕೊಳ್ಳದ ಕಾರಣದಿಂದ ನ್ಯಾಯಾಲಯದಲ್ಲಿ ದಿಲೀಪ್ ಕುಮಾರ್ ಅವರು ನೇರವಾಗಿ ದೂರು ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 48ನೇ ಎಸಿಜಿಎಂ ಕೋರ್ಟ್​ನಿಂದ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದೇ ವೋಟರ್ ಕಾರ್ಡ್ ಇರಬೇಕು. ಪ್ರಕಾಶ್ ರಾಜ್ ಅವರು ಏಕಕಾಲಕ್ಕೆ 4 ಕಡೆಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿದ್ದಾರೆ. ಹಾಗಾಗಿ ದೂರು ನೀಡಿದ್ದೆ’ ಎಂದು ದಿಲೀಪ್ ಕುಮಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RRB Recruitment 2026: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 6,565 ತಂತ್ರಜ್ಞ ಹುದ್ದೆಗಳ ನೇಮಕಾತಿ – Kannada News | RRB Technician Recruitment 2026: 6565 Railway Vacancies, Apply Online!

ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶImage Credit source: iStock

ರೈಲ್ವೆ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೆ ಇಲಾಖೆಯ ಆಶ್ರಯದಲ್ಲಿ ದೇಶಾದ್ಯಂತ ಇರುವ ಎಲ್ಲಾ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲು ಮಂಡಳಿ ಸಿದ್ಧತೆ ನಡೆಸಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಜೂನ್ 30 ರಂದು ಬಿಡುಗಡೆ ಮಾಡಲಾಗುವುದು.

ಜೂನ್ 30 ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30 ರಿಂದಲೇ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 6,565 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ತಂತ್ರಜ್ಞ ಗ್ರೇಡ್ 1 ಸಿಗ್ನಲ್ ವಿಭಾಗದಲ್ಲಿ 323 ಹುದ್ದೆಗಳು ಲಭ್ಯವಿದ್ದು, ಉಳಿದ ಹುದ್ದೆಗಳನ್ನು ತಂತ್ರಜ್ಞ ಗ್ರೇಡ್ 3 ವಿಭಾಗದ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ವಿಭಾಗದಲ್ಲಿ ಐಟಿಐ (ITI), ಬಿಎಸ್ಸಿ (B.Sc) ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಅರ್ಹ ಅಭ್ಯರ್ಥಿಗಳು ಜುಲೈ 29 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ವಯೋಮಿತಿ ಮತ್ತು ಆಕರ್ಷಕ ವೇತನ ಶ್ರೇಣಿ:

ನೇಮಕಾತಿ ನಿಯಮಾವಳಿಗಳ ಪ್ರಕಾರ, ತಂತ್ರಜ್ಞ ಗ್ರೇಡ್ 1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 33 ವರ್ಷಗಳ ನಡುವೆ ಇರಬೇಕು. ಅದೇ ರೀತಿ ತಂತ್ರಜ್ಞ ಗ್ರೇಡ್ 3 ಹುದ್ದೆಗಳಿಗೆ 18 ರಿಂದ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನವಾಗಿ ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆಗಳಿಗೆ ತಿಂಗಳಿಗೆ ರೂ. 29,200 ರಿಂದ ಮತ್ತು ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳಿಗೆ ತಿಂಗಳಿಗೆ ರೂ. 19,900 ರಿಂದ ಸಂಬಳ ಪ್ರಾರಂಭವಾಗುತ್ತದೆ.

ಆಯ್ಕೆ ವಿಧಾನ ಮತ್ತು ದೇಶಾದ್ಯಂತ ಇರುವ ನೇಮಕಾತಿ ವಲಯಗಳು:

ರೈಲ್ವೆ ಇಲಾಖೆಯ ಈ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಅಂತಿಮವಾಗಿ ಲಿಖಿತ ಪರೀಕ್ಷೆ (CBT) ಮತ್ತು ವೈದ್ಯಕೀಯ ಪರೀಕ್ಷೆಗಳ (Medical Examination) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳನ್ನು ಬೆಂಗಳೂರು, ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್ಪುರ್, ಚಂಡೀಗಢ, ಚೆನ್ನೈ, ಗೋರಖ್ಪುರ, ಗುವಾಹಟಿ, ಜಮ್ಮು ಮತ್ತು ಶ್ರೀನಗರ, ಕೋಲ್ಕತ್ತಾ, ಮಾಲ್ಡಾ, ಮುಂಬೈ, ಮುಜಫರ್ಪುರ್, ಪಾಟ್ನಾ, ಪ್ರಯಾಗ್ರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ ಮತ್ತು ತಿರುವನಂತಪುರಂ ಸೇರಿದಂತೆ ದೇಶದ ಪ್ರಮುಖ ರೈಲ್ವೆ ಪ್ರದೇಶಗಳಲ್ಲಿ ಭರ್ತಿ ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

14 ಸಾವಿರ ರನ್… ಸಚಿನ್ ದಾಖಲೆಯತ್ತ ದಾಪುಗಾಲಿಟ್ಟ ಜೋ ರೂಟ್! – Kannada News | Joe Root crosses 14,000 Runs Test Cricket

ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಿದಾಗ, ಈ ರನ್ ಶಿಖರವನ್ನೇರಲು ಮತ್ತೊಬ್ಬ ಬ್ಯಾಟರ್​ಗೆ ಸಾಧ್ಯವೇ ಇಲ್ಲ ಎನ್ನಲಾಗಿತ್ತು. ಆದರೀಗ ಕ್ರೀಡಾ ವಿಶ್ಲೇಷಕರ ಈ ಲೆಕ್ಕಾಚಾರವನ್ನು ಇಂಗ್ಲೆಂಡ್​ನ ಜೋ ರೂಟ್ ತಲೆಕೆಳಗಾಗಿಸಿದ್ದಾರೆ. ಅದು ಸಹ 14000+ ರನ್ ಕಲೆಹಾಕುವ ಮೂಲಕ..!

ಲಂಡನ್​ನ ಕೆನ್ನಿಂಗ್ಟನ್ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಜೋ ರೂಟ್ 75 ರನ್ ಬಾರಿಸಿದ್ದಾರೆ. ಈ ಎಪ್ಪತ್ತೈದು ರನ್​ಗಳೊಂದಿಗೆ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ 14 ಸಾವಿರ ರನ್​ಗಳ ಗಡಿದಾಟಿದ್ದಾರೆ.

ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ 14000 ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.

  • ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ 279 ಇನಿಂಗ್ಸ್‌ಗಳಲ್ಲಿ (171 ಟೆಸ್ಟ್‌ಗಳು) 14 ಸಾವಿರ ರನ್ ಕಲೆಹಾಕಿದ್ದರು. ತಲುಪುವ ಮೂಲಕ ಇಂದಿಗೂ ಅತಿ ವೇಗವಾಗಿ 14,000 ರನ್ ಗಳಿಸಿದ ದಾಖಲೆಯನ್ನು
  • ಜೋ ರೂಟ್: ಇಂಗ್ಲೆಂಡ್‌ನ ಟೆಸ್ಟ್​ ಸ್ಪೆಷಲಿಸ್ಟ್ ಜೋ ರೂಟ್ ತಮ್ಮ 302ನೇ ಇನಿಂಗ್ಸ್‌ನಲ್ಲಿ (165 ನೇ ಟೆಸ್ಟ್ ಪಂದ್ಯ) ಈ ಸಾಧನೆ ಮುಟ್ಟಿದ್ದಾರೆ.

ಅಂದರೆ ಸಚಿನ್ ತೆಂಡೂಲ್ಕರ್ ಅವರು ಆಡಿದ ಇನಿಂಗ್ಸ್​ಗಿಂತ ಹೆಚ್ಚಿನ ಇನಿಂಗ್ಸ್​ಗಳ ಮೂಲಕ ಜೋ ರೂಟ್ 14 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ರಿಕಿ ಪಾಂಟಿಂಗ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಂತಕಥೆಗಳನ್ನು ಹಿಂದಿಕ್ಕಿ ಸಾರ್ವಕಾಲಿಕ ರನ್‌ ಸರದಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

  • ಸಚಿನ್ ತೆಂಡೂಲ್ಕರ್: ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಒಟ್ಟು 15,921 ರನ್​ ಕಲೆಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
  • ಜೋ ರೂಟ್: ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಈ ದಾಖಲೆ ಮುರಿಯಲು ಜೋ ರೂಟ್ ಇನ್ನೂ 1,848 ರನ್‌ ಕಲೆಹಾಕಬೇಕಿದೆ. ಸದ್ಯ 14072* ರನ್​​ಗಳಿಸಿರುವ ರೂಟ್ ಮುಂಬರುವ ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಈ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.

ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟಾಪ್-5 ಬ್ಯಾಟರ್​ಗಳು:

ಸ್ಥಾನ ಆಟಗಾರ ಇನಿಂಗ್ಸ್ ಒಟ್ಟು ರನ್ಸ್
1 ಸಚಿನ್ ತೆಂಡೂಲ್ಕರ್ (ಭಾರತ) 329 15,921
2 ಜೋ ರೂಟ್ (ಇಂಗ್ಲೆಂಡ್)* 302 14,073
3 ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 287 13,378
4 ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ) 280 13,289
5 ರಾಹುಲ್ ದ್ರಾವಿಡ್ (ಭಾರತ) 286 13,288

ಇದನ್ನೂ ಓದಿ: ಪೊಲಾರ್ಡ್​ ಪವರ್​ಗೆ ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್!

ಸದ್ಯ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಜೋ ರೂಟ್ ಮುಂದಿನ ವರ್ಷದವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇದರ ನಡುವೆ ಅವರು 1,848  ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Source link

Weekly Horoscope: ವಾರ ಭವಿಷ್ಯ; ಜೂನ್ 22 ರಿಂದ 28 ರವರೆಗಿನ ದ್ವಾದಶ ರಾಶಿಗಳ ಫಲಾಫಲ – Kannada News | Dr. Basavaraj Gurujis Weekly Horoscope: Insights into Zodiac Effects from 22 28 June 2026

ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 22 ರಿಂದ 28 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರದಲ್ಲಿ ಆಗುವ ಆಗುಹೋಗುಗಳು, ತಿಥಿಗಳ ಮಹತ್ವ ಮತ್ತು ವಿಶೇಷ ಘಟನೆಗಳ ಕುರಿತು ಮಾಹಿತಿ ನೀಡಲಾಗಿದೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು ಮತ್ತು ಶುಕ್ಲ ಪಕ್ಷ ಈ ವಾರದಲ್ಲಿ ಇರಲಿದೆ. ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ ಮತ್ತು ಚತುರ್ದಶಿ ತಿಥಿಗಳು ಬರುತ್ತವೆ. ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತೋತ್ಸವ, ಹೊಸೂರಿನಲ್ಲಿ ರಥೋತ್ಸವ, ಹಿಂಗಳೇಶ್ವರದಲ್ಲಿ ಸಿದ್ದಲಿಂಗೇಶ್ವರ ಪುಣ್ಯಾರಾಧನೆ, ಶ್ರೀರಂಗಪಟ್ಟಣದಲ್ಲಿ ರಥೋತ್ಸವ, ಹೊಸಹೊಳಲಿನಲ್ಲಿ ಉತ್ಸವ ಈ ವಾರದಲ್ಲಿ ನಡೆಯಲಿವೆ. ಶನಿ ಪ್ರದೋಷ, ಕೆಂಪೇಗೌಡರ ಜಯಂತೋತ್ಸವ ಮತ್ತು ನಿರ್ಜಲ ಏಕಾದಶಿಯೂ ಈ ವಾರದ ವಿಶೇಷ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Source link

ಬಸ್ ಹತ್ತಿ ನಿದ್ರೆಗೆ ಜಾರಿದ ಚಿನ್ನದ ವ್ಯಾಪಾರಿ, ಕಣ್ಣುಬಿಡುವಷ್ಟರಲ್ಲಿ 4 ಕೋಟಿ ರೂ. ಮೌಲ್ಯದ ಚಿನ್ನ ಮಾಯ – Kannada News | Gold Merchant Robbed of Rs 4 Crore on Bus: Hyderabad Police Probe Daring Theft

ಹೈದಾರಾಬಾದ್, ಜೂನ್ 21: ಅನಂತಪುರದಿಂದ ಹೈದರಾಬಾದ್​ಗೆ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯ ಬಳಿ ಇದ್ದ 4 ಕೋಟ ರೂ. ಮೌಲ್ಯದ ಚಿನ್ನಾಭರಣ(Jewellery) ಕಳವಾಗಿದೆ. ಅವರು ಬಸ್ ಹತ್ತಿದ ಸ್ವಲ್ಪ ಸಮಯದ ಬಳಿಕ ನಿದ್ರೆಗೆ ಜಾರಿದ್ದರು. ಅದೇ ಸಮಯವನ್ನು ಬಳಸಿಕೊಂಡ ಖದೀಮರು ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ 2.75 ಕೆಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ.

ಹೈದರಾಬಾದ್ ಮೂಲದ ಚಿನ್ನದ ವ್ಯಾಪಾರಿ ಮೋತಿಲಾಲ್ ಎಂಬುವವರು ಆಂಧ್ರಪ್ರದೇಶದ ಅನಂತಪುರ ಮತ್ತು ಧರ್ಮಾವರಂ ಪಟ್ಟಣಗಳಲ್ಲಿ ತಮ್ಮ ವ್ಯಾಪಾರ ಮುಗಿಸಿಕೊಂಡು, ಉಳಿದ ಚಿನ್ನದೊಂದಿಗೆ ತಮ್ಮ ಸಹಾಯಕನ ಜೊತೆ ಹೈದರಾಬಾದ್‌ಗೆ ಮರಳುತ್ತಿದ್ದಾಗ ಈ ಕಳ್ಳತನ ನಡೆದಿದೆ.

ಮೋತಿಲಾಲ್ ಅವರು 2.75 ಕೆಜಿ ಚಿನ್ನವಿದ್ದ ಬ್ಯಾಗ್‌ನೊಂದಿಗೆ ತಮ್ಮ ಸಹಾಯಕನ ಜೊತೆ ಅನಂತಪುರದಿಂದ ರಾತ್ರಿ 10 ಗಂಟೆಗೆ ‘ಮೀನಾ ಟ್ರಾವೆಲ್ಸ್’ ಬಸ್ ಹತ್ತಿ ಸೀಟಿನಲ್ಲಿ ನಿದ್ರೆಗೆ ಜಾರಿದ್ದಾರೆ. ನಂದ್ಯಾಲ್ ಜಿಲ್ಲೆಯ ಡಾನ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಭಾರತ್ ಢಾಬಾ’ ಬಳಿ ಬಸ್ ಊಟಕ್ಕಾಗಿ ನಿಂತಿದೆ. ಈ ವೇಳೆ ಇಬ್ಬರು ಅಪರಿಚಿತರು ಬಸ್‌ನಿಂದ ಇಳಿದಿದ್ದಾರೆ.

ಮತ್ತಷ್ಟು ಓದಿ: ಹಾವೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ: ತಿಜೋರಿ ಸಮೇತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಬಸ್ ತೆಲಂಗಾಣದ ಜಡ್ಚರ್ಲಾ ಬಳಿ ತಲುಪಿದಾಗ ಮೋತಿಲಾಲ್ ಅವರಿಗೆ ಎಚ್ಚರವಾಗಿದೆ. ತಕ್ಷಣ ಪರಿಶೀಲಿಸಿದಾಗ ಅವರ ಸೀಟಿನ ಬಳಿ ಇದ್ದ ಚಿನ್ನದ ಬ್ಯಾಗ್ ನಾಪತ್ತೆಯಾಗಿರುವುದು ಕಂಡುಬಂದಿದೆ.

ಗಾಬರಿಗೊಂಡ ಮೋತಿಲಾಲ್ ತಕ್ಷಣವೇ ಡಾನ್ ಪಟ್ಟಣದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಢಾಬಾ ಹೋಟೆಲ್‌ನ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಕಳ್ಳರ ಗ್ಯಾಂಗ್, ಅನಂತಪುರದಿಂದಲೇ ಈ ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿತ್ತು. ಢಾಬಾ ಬಳಿ ಬಸ್ ನಿಲ್ಲುತ್ತಿದ್ದಂತೆ ಬಸ್‌ನೊಳಗೆ ನುಗ್ಗಿ ಚಿನ್ನದ ಬ್ಯಾಗ್ ಲಪಟಾಯಿಸಿ ಪರಾರಿಯಾಗಿದೆ.

ಸದ್ಯ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರ ವಿವರಗಳನ್ನು ಕಲೆಹಾಕುತ್ತಿದ್ದು, ಕಳ್ಳರ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಇತ್ತ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಕಳೆದುಕೊಂಡ ವ್ಯಾಪಾರಿ ಕಣ್ಣೀರು ಹಾಕುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೊಲಾರ್ಡ್​ ಪವರ್​ಗೆ ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್! – Kannada News | Kieron Pollard Breaks Chris Gayle’s T20 Most Runs Record

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಕಳೆದ ಕೆಲ ವರ್ಷಗಳಿಂದ ಈ ಪ್ರಶ್ನೆಗೆ ಸಿಗುತ್ತಿದ್ದ ಉತ್ತರ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್. ಆದರೆ ಇಂದಿನಿಂದ ಈ ಉತ್ತರ ಬದಲಾಗಿದೆ. ಇನ್ಮುಂದೆ ಈ ಪ್ರಶ್ನೆಗೆ ಉತ್ತರ ಪವರ್ ಹಿಟ್ಟರ್ ಕೀರನ್ ಪೊಲಾರ್ಡ್ (Kieron Pollard). (PC: MI)

ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕೀರನ್ ಪೊಲಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಡಲ್ಲಾಸ್​ನಲ್ಲಿ ನಡೆದ ಮೇಜರ್ ಲೀಗ್ ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ವಿರುದ್ಧ ಪೊಲಾರ್ಡ್ 56 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. (PC: MI)

ಈ ಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಕಳೆದ ಕೆಲ ವರ್ಷಗಳಿಂದ ವಿಶ್ವ ದಾಖಲೆಯ ಸರದಾರನಾಗಿ ಮೆರೆಯುತ್ತಿದ್ದ ಗೇಲ್ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ. (PC: MI)

ಟಿ20 ಕ್ರಿಕೆಟ್​ನಲ್ಲಿ 455 ಇನಿಂಗ್ಸ್​ ಆಡಿರುವ ಕ್ರಿಸ್ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆಯನ್ನು ಇದೀಗ ಪೊಲಾರ್ಡ್ ಮುರಿದ್ದಾರೆ. (PC: IPL)

ಟಿ20 ಕ್ರಿಕೆಟ್​ನಲ್ಲಿ ಈವರೆಗೆ 653 ಇನಿಂಗ್ಸ್‌ಗಳನ್ನಾಡಿರುವ ಕೀರನ್ ಪೊಲಾರ್ಡ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 14,582 ರನ್ ಗಳಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 15 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪೊಲಾರ್ಡ್ ಪಾತ್ರರಾಗಲಿದ್ದಾರೆ. (PC: MI)

Published On – 12:25 pm, Sun, 21 June 26

Source link

ಪಿಎಂ ಕಿಸಾನ್ ಯೋಜನೆ, ನೊಂದಾಯಿಸಿದ್ದರೂ 23ನೇ ಕಂತಿನ ಬಂದಿಲ್ಲವಾ? ಇವಿರಬಹುದು ಕಾರಣಗಳು – Kannada News | PM Kisan scheme, 23rd installment release, what if money not credited to account

ಕೋಲ್ಕತಾ, ಜೂನ್ 21: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Scheme) 23ನೇ ಕಂತಿನ ಹಣವನ್ನು ಜೂನ್ 20, ಶನಿವಾರದಂದು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್​ನಲ್ಲಿ ಹೊಸ ಕಂತು ರಿಲೀಸ್ ಮಾಡಿದ್ದಾರೆ. 9.44 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂಗಳಂತೆ ಒಟ್ಟು 18,800 ಕೋಟಿ ರೂ ಹಣವನ್ನು ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗಿದೆ. 2018ರ ಡಿಸೆಂಬರ್​ನಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ಮಾಡಿರುವ ವೆಚ್ಚ 4.28 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ.

ನಿಮಗೆ ಪಿಎಂ ಕಿಸಾನ್ 23ನೇ ಕಂತಿನ ಹಣ ಸಿಕ್ಕಿದೆಯಾ?

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಿದ್ದರೆ ಇಷ್ಟರಲ್ಲಿ ಹಣ ವರ್ಗಾವಣೆ ಆಗಿರುತ್ತದೆ, ಅಥವಾ ಸೋಮವಾರ ಕ್ರೆಡಿಟ್ ಆಗಬಹುದು. ಬ್ಯಾಂಕ್ ಅಕೌಂಟ್ ಅನ್ನು ಒಮ್ಮೆ ಪರಿಶೀಲಿಸಿ ನೋಡಿ. ಅಥವಾ ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ಗೆ ಹೋದರೆ ಅಲ್ಲಿ ‘ನೋ ಯುವರ್ ಸ್ಟೇಟಸ್’  (Know Your Status) ಟ್ಯಾಬ್ ಕಾಣುತ್ತದೆ. ಅದರಿಂದಲೂ ಹಣ ಟ್ರಾನ್ಸ್​ಫರ್ ಆಗಿದೆಯಾ ಇಲ್ಲವಾ ಎಂದು ತಿಳಿಯಬಹುದು.

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ನೋ ಯುವರ್ ಸ್ಟೇಟಸ್ ಕ್ಲಿಕ್ ಮಾಡಿದಾಗ ನಿಮ್ಮ ನೊಂದಾಯಿತ ಸಂಖ್ಯೆ ಕೇಳುತ್ತದೆ. ಅದನ್ನು ನಮೂದಿಸಿದರೆ ಮಾಹಿತಿ ಸಿಗುತ್ತದೆ.

ಬೆನಿಫಿಶಿಯರಿ ಲಿಸ್ಟ್ ನೋಡಿ

ಪಿಎಂ ಕಿಸಾನ್ ವೆಬ್​ಸೈಟ್​ನಲ್ಲೇ ನೀವು ಫಲಾನುಭವಿಗಳ ಪಟ್ಟಿಯಲ್ಲಿದ್ದೀರೋ ಇಲ್ಲವೋ ಎಂಬುದನ್ನು ತಿಳಿಯಬಹುದು. ವೆಬ್​ಸೈಟ್​ನಲ್ಲಿರುವ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ, ಆ ಬಳಿಕ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ದುಕೊಂಡರೆ, ಆ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ನೋಡಬಹುದು. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಪಿಎಂ ಕಿಸಾನ್ ಹಣ ಬಂದಿಲ್ಲವೆಂದರೆ ಇವಿರಬಹುದು ಕಾರಣಗಳು

ಪಿಎಂ ಕಿಸಾನ್ ಯೋಜನೆಯಲ್ಲಿ ನೀವು ನೊಂದಾಯಿಸಿಕೊಂಡಿದ್ದೂ, ಬೆನಿಫಿಶಿಯರಿ ಲಿಸ್ಟ್​ನಲ್ಲಿ ಹೆಸರಿದ್ದೂ ಹಣ ಬಂದಿಲ್ಲದಿರುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ.

  • ನೀವು ಇಕೆವೈಸಿ ಅಪ್​ಡೇಟ್ ಮಾಡಿಲ್ಲದಿದ್ದರೆ ಹಣ ಬರುವುದಿಲ್ಲ.
  • ಬ್ಯಾಂಕ್ ಅಕೌಂಟ್ ನಂಬರ್, ಐಎಫ್​ಎಸ್​ಸಿ ಕೋಡ್ ತಪ್ಪಾಗಿ ನಮೂದಾಗಿದ್ದರೆ ಹಣ ಬರುವುದಿಲ್ಲ.
  • ಬ್ಯಾಂಕ್ ಅಕೌಂಟ್​ಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೂ ಹಣ ಕ್ರೆಡಿಟ್ ಆಗುವುದಿಲ್ಲ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ಹೆಚ್ಚಿನ ಮಾಹಿತಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ವಾರಾಂತ್ಯದಲ್ಲಿ ಗ್ರಾಮ್​ಗೆ 20 ರೂಗಳ ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ – Kannada News | Gold Price Today on 21st June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 21: ಮೊನ್ನೆ ಗ್ರಾಮ್​ಗೆ 355 ರೂನಷ್ಟು ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಈ ವಾರಾಂತ್ಯದಲ್ಲಿ ಅಲ್ಪ ಹೆಚ್ಚಳ ಪಡೆದಿದೆ. ಅಪರಂಜಿ ಚಿನ್ನದ ಬೆಲೆ 14,600 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಇಳಿಕೆಗೊಂಡಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದರ ಬೆಲೆ ಗ್ರಾಮ್​ಗೆ 250-260 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,608 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,390 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,956 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,608 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,390 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,390 ರೂ
  • ಚೆನ್ನೈ: 13,600 ರೂ
  • ಮುಂಬೈ: 13,390 ರೂ
  • ದೆಹಲಿ: 13,405 ರೂ
  • ಕೋಲ್ಕತಾ: 13,390 ರೂ
  • ಕೇರಳ: 13,390 ರೂ
  • ಅಹ್ಮದಾಬಾದ್: 13,395 ರೂ
  • ಜೈಪುರ್: 13,405 ರೂ
  • ಲಕ್ನೋ: 13,405 ರೂ
  • ಭುವನೇಶ್ವರ್: 13,390 ರೂ

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,996 ರುಪಾಯಿ)
  • ದುಬೈ: 500 ಡಿರಾಮ್ (12,846 ರುಪಾಯಿ)
  • ಅಮೆರಿಕ: 137 ಡಾಲರ್ (12,928 ರುಪಾಯಿ)
  • ಸಿಂಗಾಪುರ: 183.20 ಸಿಂಗಾಪುರ್ ಡಾಲರ್ (13,389 ರುಪಾಯಿ)
  • ಕತಾರ್: 501.50 ಕತಾರಿ ರಿಯಾಲ್ (12,981 ರೂ)
  • ಸೌದಿ ಅರೇಬಿಯಾ: 517 ಸೌದಿ ರಿಯಾಲ್ (12,997 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,905 ರುಪಾಯಿ)
  • ಕುವೇತ್: 41.82 ಕುವೇತಿ ದಿನಾರ್ (12,842 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾವಿಗೆ ಬೆಂಬಲ ಬೆಲೆಗೆ ಬೆಳೆಗಾರರ ಪಟ್ಟು: ಸೋಮವಾರ ಸ್ತಬ್ಧವಾಗುತ್ತಾ ಕೋಲಾರ? – Kannada News | Mango Price Crash: Farmers Threaten Kolar District Bandh on Monday Demanding Minimum Support Price

ಕೋಲಾರ, ಜೂನ್ ​​21: ಹಣ್ಣುಗಳ ರಾಜ ಮಾವಿಗೆ ಮಾರುಕಟ್ಟೆಯಲ್ಲಿ ದಿನೇ ದಿನೆ ಬೇಡಿಕೆ ಹಾಗೂ ಬೆಲೆ ಕುಸಿತದ ಪರಿಣಾಮ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಬೇಡಿಕೆಗ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಜೂನ್​​ 22ರ ಸೋಮವಾರ ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾ ಬಂದ್​​ಗೆ ಕರೆ ನೀಡುವ ಬಗ್ಗೆ ಮಾವು ಬೆಳೆಗಾರರು ಎಚ್ಚರಿಸಿದ್ದಾರೆ. ಮಂಡಿ ಮಾಲೀಕರು, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕೂಡ ಬಂದ್​​ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದಾರೆ.

ಪಾತಾಳಕ್ಕೆ ಕುಸಿದ ದರ

ಸತತವಾಗಿ 4 ವಾರಗಳಿಂದ ಮಾವು ಬೆಲೆ ಪಾತಾಳಕ್ಕೆ ಕುಸಿದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಒಂದು ಟನ್ ಮಾವು 3ರಿಂದ 4 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಟನ್​​ಗೆ ಕನಿಷ್ಠ 8 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವೆ ನಷ್ಟ ಪರಿಹಾರ ಘೋಷಿಸಬೇಕು ಎಂಬುದು ಮಾವು ಬೆಳೆಗಾರರ ಪ್ರಮುಖ ಆಗ್ರಹವಾಗಿದೆ. ಜಿಲ್ಲೆಯ 45,565 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 5,50,190 ಟನ್​ ಮಾವು ಬೆಳೆಯಲಾಗುತ್ತೆ. ಶ್ರೀನಿವಾಸಪುರ ತೋತಾಪುರಿ, ರಾಜಗಿರ, ಮಲ್ಲಿಕಾ, ಬಾದಾಮಿ, ಬೇನಿಶಾ, ರಸಪುರಿ, ನೀಲಂ, ದಶೇರಿ, ನೀಲಂ, ಸಕ್ಕರೆ ಗುತ್ತಿ ಸೇರಿ ಹಲವು ತಳಿ ಇವುಗಳಲ್ಲಿ ವಿಶೇಷವಾದುವು.

ಇದನ್ನೂ ಓದಿ: ಕೆಂಪು ಸುಂದರಿಗೆ ಮತ್ತೆ ಡಿಮ್ಯಾಂಡ್! ಟೊಮೆಟೊ ಬೆಳೆದ ರೈತರಿಗೆ ಜಾಕ್‌ಪಾಟ್

ಆಂಧ್ರದಲ್ಲಿ ಮಾವಿನ ಬೆಲೆ ಕುಸಿದಿರುವ ಬಗ್ಗೆ ಗಮನಹರಿಸಿರುವ ಅಲ್ಲಿನ ಸರ್ಕಾರವು ರೈತರಿಗೆ ಪ್ರತಿ ಕೆಜಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಕರ್ನಾಟಕದಲ್ಲೂ ಮಾವಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೆಂಕುಬುದು ಬೆಳೆಗಾರರ ಒತ್ತಾಯವಾಗಿದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆಯೂ ಸಲ್ಲಿಕೆಯಾಗಿದ್ದು, ಒಂದು ವೇಳೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡದೆ ಹೋದಲ್ಲಿ ಸೋಮವಾರ ಕೋಲಾರ ಜಿಲ್ಲಾ ಬಂದ್ ಮಾಡುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ: ಕ್ಯಾಂಪಸ್​ಗೆ ಜೊಮ್ಯಾಟೊ, ಸ್ವಿಗ್ಗಿ ಪ್ರವೇಶ ಬಂದ್! – Kannada News | Bengaluru Schools Ban Food Delivery Apps: No More Swiggy or Zomato on School Campuses Over Health and Safety Concerns

ಬೆಂಗಳೂರು, ಜೂನ್ 21: ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ (Zomato) ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಪ್ರಕಟಿಸಿದ್ದು, ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಈ ಹಾದಿ ಹಿಡಿದಿವೆ.

ಮುಖ್ಯಾಂಶಗಳು

  • ಬೆಂಗಳೂರಿನ ಪ್ರಮುಖ ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳ ಬಳಕೆಗೆ ನಿಷೇಧ.
  • ಜಂಕ್ ಫುಡ್ ತಡೆಯಲು ಮತ್ತು ಮಕ್ಕಳಲ್ಲಿ ಸಮಾನತೆ ಕಾಪಾಡಲು ನಿರ್ಧಾರ.
  • ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಸಿಬ್ಬಂದಿಗೂ ಆನ್‌ಲೈನ್ ಆರ್ಡರ್ ಬಂದ್.

ನಿಷೇಧಕ್ಕೆ ಕಾರಣಗಳೇನು?

ಶಾಲಾ ಆಡಳಿತ ಮಂಡಳಿಗಳುಯ ಹೇಳುವಂತೆ ಹೊರಗಿನಿಂದ ಆರ್ಡರ್ ಮಾಡುವ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಯೊಂದರ ಪ್ರಾಂಶುಪಾಲರು ಹೇಳುವಂತೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಮತ್ತು ತಾರತಮ್ಯ ಮೂಡಿಸುತ್ತದೆ. ಇದು ಪೋಷಕರ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಅಪರಿಚಿತ ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಬರುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ. ಪ್ರತಿದಿನ 4-5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ಅಡ್ಡಿಪಡಿಸುತ್ತದೆ.

ಮನೆಯ ಊಟಕ್ಕೆ ಆದ್ಯತೆ

ಪೋಷಕರು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version