ಸುರ್ಜೇವಾಲ ಸಂಧಾನ ಸಕ್ಸಸ್​​: 13 ದಿನಗಳ ನಂತರ ಖಾತೆ ವಹಿಸಿಕೊಂಡ ಕೃಷ್ಣ ಭೈರೇಗೌಡ – Kannada News | Minister Krishna Byre Gowda Takes Charge of Bengaluru Urban Development, Chairs GBA Meeting.

ಬೆಂಗಳೂರು, ಜೂನ್​​ 16: 13 ದಿನಗಳ ಅಸಮಾಧಾನದ ನಂತರ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು. ಆದರೆ ಸಚಿವರ ಮುನಿಸನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿಯಾಗಿರುವ ಸುರ್ಜೇವಾಲ ತಣಿಸಿದ್ದಾರೆ. ಈ ಬೆನ್ನಲ್ಲೇ ಜಿಬಿಎ ಕೇಂದ್ರ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ಮೊದಲ ಸಭೆಯನ್ನು ಸಚಿವ ಕೃಷ್ಣ ಭೈರೇಗೌಡ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರಿನ ಐದು ಪಾಲಿಕೆಗಳ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ – Kannada News | Bengaluru Drug Bust: Rs 5.67 Crore Hydro Ganja and Cocaine Seized in Three Separate Raids; Ugandan Woman Arrested

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.77 ಕೋಟಿ ರೂ. ಮೌಲ್ಯದ ಗಾಂಜಾ ಸೀಜ್Image Credit source: tv9

ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ (Bengaluru) ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5.67 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಕೊಕೇನ್ ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ಉಗಾಂಡಾ ಮೂಲದ ಮಹಿಳಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಮಾದಕ ದ್ರವ್ಯ ಜಪ್ತಿ.
  • ಉಗಾಂಡಾ ಮಹಿಳೆ ಸೇರಿ ಮೂವರು ಪೆಡ್ಲರ್‌ಗಳ ಸೆರೆ.
  • ಬ್ಯಾಂಕಾಕ್ ಮತ್ತು ನಾಸಿಕ್‌ನಿಂದ ಸರಬರಾಜಾಗುತ್ತಿದ್ದ ಡ್ರಗ್ಸ್.

ಹೆಬ್ಬಾಳದಲ್ಲಿ 2.20 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಸೀಜ್

ನಗರದ ಹೆಬ್ಬಾಳ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹೈಡ್ರೋ ಗಾಂಜಾ ಡೀಲಿಂಗ್‌ನಲ್ಲಿ ನಿರತನಾಗಿದ್ದ ಹಳೆ ಆರೋಪಿ ಇಮ್ರಾನ್ ಪಾಷಾ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 2.20 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 180 ಗ್ರಾಂ ತೂಕದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇಮ್ರಾನ್ ಈ ಮಾದಕ ವಸ್ತುವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ ಬೆಂಗಳೂರಿಗೆ ತರುತ್ತಿದ್ದ ಎನ್ನಲಾಗಿದ್ದು, ಈತನ ಮೇಲೆ ಈಗಾಗಲೇ ನಗರದ ಬೇರೆ ಬೇರೆ ಪೊಲೀಸ್ ಸ್ಟೇಷನ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.77 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕನೊಬ್ಬನ ಲಗೇಜ್ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ 2.77 ಕೋಟಿ ರೂಪಾಯಿ ಮೌಲ್ಯದ 7.92 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಧಿಕಾರಿಗಳು ಗಾಂಜಾವನ್ನು ಜಪ್ತಿ ಮಾಡಿ, ಪ್ರಯಾಣಿಕನನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಬಿ ಬಲೆಯಲ್ಲಿ ಉಗಾಂಡಾ ಮೂಲದ ಮಹಿಳಾ ಪೆಡ್ಲರ್

ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಚಿಕ್ಕಬಾಣಾವರದಲ್ಲಿ ದಾಳಿ ನಡೆಸಿ 70.50 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ಉಗಾಂಡಾ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಜನತ್ ಮತ್ತು ಡ್ರಗ್ಸ್ ರಿಸೀವರ್ ವಾಹಬ್ ಎಲ್ವಿಸ್ ಯುನಿಸ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ

ಆರೋಪಿ ವಾಹಬ್ ಯಶವಂತಪುರ ಮತ್ತು ಗೊರಗುಂಟೆಪಾಳ್ಯ ಸುತ್ತಮುತ್ತ ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದ. ಬಂಧಿತ ಮಹಿಳೆ ಜನತ್ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ಪೆಡ್ಲಿಂಗ್ ದಂಧೆ ಆರಂಭಿಸಿದ್ದಳು. ಈಕೆ ಈ ಹಿಂದೆ ದೆಹಲಿಯಲ್ಲೂ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಮಂತಾ ಹೂಡಿಕೆ ಮಾಡಿರುವ ಉದ್ಯಮಗಳ ಸಂಪೂರ್ಣ ಮಾಹಿತಿ – Kannada News | Samantha Ruth Prabhu’s investments detail and their current situation

ಸಮಂತಾ (Samantha), ಸ್ಟಾರ್ ನಟಿ ಮಾತ್ರವಲ್ಲ ಒಳ್ಳೆಯ ಉದ್ಯಮಿಯೂ ಸಹ. ಕಳೆದ ಐದಾರು ವರ್ಷಗಳಲ್ಲಿ ಅವರು ಒಂದರ ಹಿಂದೆ ಒಂದರಂತೆ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆ ಆಗುತ್ತಿದೆ. ಕೆಲ ತಿಂಗಳ ಹಿಂದೆ ಸಮಂತಾ ಪಾಲ್ಗೊಂಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಉದ್ಯಮಗಳ ಬಗ್ಗೆ ವಿವರವಾಗಿ ಮಾತನಾಡಿದ್ದರು. ಉದ್ಯಮಗಳನ್ನು ಆರಂಭಿಸಿದ್ದು ಯಾವಾಗ ಮತ್ತು ಅವು ಹೇಗೆ ನಡೆಯುತ್ತಿವೆ ಎಂಬಿತ್ಯಾದಿ ವಿವರಗಳನ್ನು ಸಮಂತಾ ಋತ್ ಪ್ರಭು ಹಂಚಿಕೊಂಡಿದ್ದರು.

ಸಮಂತಾ ಅವರು ‘ಸಾಖಿ’ ಹೆಸರಿನ ಉಡುಪು ಬ್ರ್ಯಾಂಡ್​​ನಲ್ಲಿ ಕೋವಿಡ್ ಪ್ರಾರಂಭಕ್ಕೆ ಕೆಲ ತಿಂಗಳುಗಳ ಹಿಂದೆಯೇ ಹೂಡಿಕೆ ಮಾಡಿದರು. ಅವರೇ ಹೇಳಿಕೊಂಡಿರುವಂತೆ ಅದು ಅವರ ಮೊದಲ ಗಂಭೀರ ಹೂಡಿಕೆ. ಸ್ವಂತ ಹಣವನ್ನು ಆ ಉದ್ಯಮದಲ್ಲಿ ಅವರು ತೊಡಗಿಸಿದರಂತೆ. ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದರೂ ಬಳಿಕ ಅದು ಲಾಭದ ಕಡೆಗೆ ಸಾಗಿತಂತೆ. ಈಗಲೂ ಅದು ಚೆನ್ನಾಗಿ ನಡೆಯುತ್ತಿದೆ ಎಂದಿದ್ದಾರೆ ಸಮಂತಾ.

ಸಮಂತಾ ಸೆಲೆಬ್ರಿಟಿ ಆಗಿದ್ದರೂ ಅವರು ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ. ಏಕಂ ಲರ್ನಿಂಗ್ ಸೆಂಟರ್ ಹೆಸರಿನ ಟ್ರೈನಿಂಗ್ ಉದ್ಯಮದಲ್ಲಿ ಅವರು ಪಾಲುದಾರರು. ಸಮಂತಾ ಹೇಳಿರುವಂತೆ ಅವರ ತಾಯಿ ಶಿಕ್ಷಕಿ ಆಗಿದ್ದರಂತೆ ಹಾಗಾಗಿ ಶಿಕ್ಷಣದ ಮೇಲೆ ಅವರಿಗೆ ಮೊದಲಿನಿಂದಲೂ ಆಸಕ್ತಿ ಹಾಗಾಗಿ ಅವರು ಏಕಂನಲ್ಲಿ ಹೂಡಿಕೆ ಮಾಡಿದರಂತೆ.

ಇದನ್ನೂ ಓದಿ:‘ಮಾ ಇಂಟಿ ಬಂಗಾರಂ’: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಮಂತಾ

ಅರ್ಬನ್ ಕಿಸಾನ್ ಹೆಸರಿನ ಸಂಸ್ಥೆಯಲ್ಲಿ ಸಮಂತಾ ಹೂಡಿಕೆ ಮಾಡಿದ್ದಾರೆ. ಇದು ಅಪಾರ್ಟ್​​ಮೆಂಟ್​​ಗಳಲ್ಲಿ ಅಥವಾ ನಗರ ಪ್ರದೇಶದ ಕಡಿಮೆ ಸ್ಥಳದಲ್ಲಿ ತರಕಾರಿ ಇನ್ನಿತರೆ ಪದಾರ್ಥಗಳನ್ನು ಬೆಳೆಸುವ ಹಾಗೂ ಬೆಳೆಯುವುದನ್ನು ಹೇಳಿಕೊಡುವ ಸಂಸ್ಥೆಯಾಗಿದೆ. ಕೋವಿಡ್ ಸಮಯದಲ್ಲಿ ಈ ಸಂಸ್ಥೆಯಲ್ಲಿ ಸಮಂತಾ ಹೂಡಿಕೆ ಮಾಡಿದ್ದು, ಈ ಸಂಸ್ಥೆ ಇದೇ ವರ್ಷ ತನ್ನ ಐಪಿಓ ಸಹ ಬಿಡುಗಡೆ ಮಾಡಲಿದೆಯಂತೆ.

ಸೀಕ್ರೆಟ್ ಅಲ್ಕೆಮಿಸ್ಟ್ ಎಂಬ ಸಂಸ್ಥೆಯಲ್ಲಿಯೂ ಸಮಂತಾ ಹೂಡಿಕೆ ಮಾಡಿದ್ದಾರೆ. ಸಮಂತಾ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದಾಗ ಅವರು ವಿದೇಶಗಳಿಗೆ ಚಿಕಿತ್ಸೆಗೆ ಹೋದಾಗ ಅಲ್ಲೆಲ್ಲ ಅರೋಮಾ ಥೆರಪಿ ಬಳಸುತ್ತಿದ್ದಿದ್ದನ್ನು ಗಮನಿಸಿದರಂತೆ. ಭಾರತದಲ್ಲಿ ಇದರ ಬಗ್ಗೆ ಹೆಚ್ಚು ಮಾಹಿತಿ, ಜಾಗೃತಿ ಇಲ್ಲವೆಂದು ತಿಳಿದು ಆ ಸಂಸ್ಥೆಯ ಮೇಲೆ ನಟಿ ಸಮಂತಾ ಹೂಡಿಕೆ ಮಾಡಿದ್ದಾರೆ.

ಚೆನ್ನೈ ಸೂಪರ್ ಚಾಂಪ್ಸ್ ಹೆಸರಿನ ಪಿಕಲ್ ಬಾಲ್ ತಂಡವನ್ನು ಸಮಂತಾ ಖರೀದಿಸಿದ್ದಾರೆ. ಪಿಕಲ್ ಬಾಲ್​​ ಕ್ರೀಡೆಯ ಮೇಲೆ ಸಾಕಷ್ಟು ಹೂಡಿಕೆ ಮಾಡಿರುವ ಸಮಂತಾ. ಆಟವನ್ನು ಹೆಚ್ಚು ಪ್ರಮೋಟ್ ಮಾಡುತ್ತಿದ್ದಾರೆ. ಸ್ವಂತ ತಂಡವನ್ನೂ ಹೊಂದಿದ್ದಾರೆ. ಇದರ ಜೊತೆಗೆ ‘ಟೇಕ್ 20’ ಹೆಸರಿನ ಯೂಟ್ಯೂಬ್ ಚಾನೆಲ್ ಹೋಂದಿರುವ ಸಮಂತಾ, ಅಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ 20 ನಿಮಿಷಗಳ ಕಂಟೆಂಟ್ ಅಪ್​​ಲೋಡ್ ಮಾಡುತ್ತಿರುತ್ತಾರೆ.

ಟ್ರಾಲಾಲಾ ಪ್ರೊಡಕ್ಷನ್ ಹೌಸ್ ಅನ್ನು ಸಹ ಸಮಂತಾ ಪ್ರಾರಂಭಿಸಿದ್ದು, ಆ ಪ್ರೊಡಕ್ಷನ್ ಹೌಸ್ ಮೂಲಕ ‘ಶುಭಂ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಅದು ಅವರ ಮೊದಲ ನಿರ್ಮಾಣದ ಸಿನಿಮಾ ಆಗಿತ್ತು. ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನೂ ಸಹ ಅದೇ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಪ್ರತ್ಯುಷಾ ಫೌಂಡೇಶನ್ ಅನ್ನು ಸಮಂತಾ ಅವರು 2012-13 ರಲ್ಲಿ ಪ್ರಾರಂಭಿಸಿದರಂತೆ. ಅನಾಥ ಮಕ್ಕಳು ಮತ್ತು ಮಹಿಳೆಯರ ಪೋಷಣೆಗಾಗಿ ಈ ಫೌಂಡೇಶನ್ ಅನ್ನು ಸಮಂತಾ ಪ್ರಾರಂಭಿಸಿದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Financial Stress: ಇಎಂಐ ಮತ್ತು ಸಾಲದ ಹೊರೆಯಿಂದ ಕಂಗಾಲಾಗಿದ್ದೀರಾ? ಮಂಗಳವಾರ ಈ ಒಂದು ಕೆಲಸ ಮಾಡಿ – Kannada News | Financial Peace: Angaraka Stotra Solution for Debt and Loan EMI Stress

ಇಂದಿನ ಆಧುನಿಕ ಜೀವನದಲ್ಲಿ ಹೋಮ್ ಲೋನ್​, ವೈಯಕ್ತಿಕ ಸಾಲ (Personal Loan), ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳ ಸುಳಿಗೆ ಸಿಲುಕದವರೇ ಇಲ್ಲ. ಈ ಸಾಲದ ಕಂತುಗಳು ಕೇವಲ ಜೇಬಿಗೆ ಕತ್ತರಿ ಹಾಕುವುದು ಮಾತ್ರವಲ್ಲದೆ, ತೀವ್ರ ಮಾನಸಿಕ ಅಶಾಂತಿ ಮತ್ತು ಕೌಟುಂಬಿಕ ಒತ್ತಡಕ್ಕೂ ಕಾರಣವಾಗುತ್ತವೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕಠಿಣ ಪರಿಶ್ರಮದ ಜೊತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಿಹಾರಗಳ ಮೊರೆ ಹೋಗುವವರಿಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ವಿಶೇಷ ಮಾರ್ಗವನ್ನು ಸೂಚಿಸಲಾಗಿದೆ. ಅದೇ ‘ಋಣ ವಿಮೋಚನ ಅಂಗಾರಕ ಸ್ತೋತ್ರ’.

ಸಾಲ ಪರಿಹಾರಕ್ಕೆ ಮಂಗಳವಾರದ ಮಹತ್ವ:

ಸನಾತನ ಸಂಪ್ರದಾಯದಲ್ಲಿ ಮಂಗಳವಾರವನ್ನು ಸಂಕಟಹರ ಹನುಮಂತ ಮತ್ತು ಮಂಗಳ ಗ್ರಹದ (ಕುಜ) ಪೂಜೆಗೆ ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಅಶುಭ ಸ್ಥಾನದಲ್ಲಿದ್ದರೆ ಅಥವಾ ದುರ್ಬಲನಾಗಿದ್ದರೆ, ಆ ವ್ಯಕ್ತಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಮತ್ತು ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ ಹನುಮಂತನನ್ನು ಹಾಗೂ ಮಂಗಳ ದೇವನನ್ನು ಆರಾಧಿಸುವುದರಿಂದ ಜಾತಕದಲ್ಲಿನ ಕುಜ ದೋಷದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ಋಣ ಮುಕ್ತಿ ಅಂಗಾರಕ ಸ್ತೋತ್ರದ ಶಕ್ತಿ:

‘ಋಣ ವಿಮೋಚನ ಅಂಗಾರಕ ಸ್ತೋತ್ರ’ ಅಥವಾ ‘ಋಣ ಮಂಗಳ ಮುಕ್ತಿ ಸ್ತೋತ್ರ’ವು ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಹನುಮಂತ ಮತ್ತು ಮಂಗಳ ಗ್ರಹಕ್ಕೆ ಸಮರ್ಪಿತವಾಗಿರುವ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಸಾಲದ ಹೊರೆ ತ್ವರಿತವಾಗಿ ಕರಗುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂಬುದು ಭಕ್ತರ ದೃಢ ವಿಶ್ವಾಸವಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಸ್ತೋತ್ರ ಪಠಿಸುವ ಸರಿಯಾದ ವಿಧಾನ:

  • ಈ ಸಾಲ ವಿಮೋಚನಾ ಸ್ತೋತ್ರವನ್ನು ಪ್ರತಿದಿನ ಅಥವಾ ಕನಿಷ್ಠ ಪ್ರತಿ ಮಂಗಳವಾರದಂದಾದರೂ ನಿಯಮಬದ್ಧವಾಗಿ ಪಠಿಸಬೇಕು.
  • ಮುಂಜಾನೆ ಸ್ನಾನ ಮಾಡಿದ ನಂತರ, ಶುಚಿಯಾದ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು.
  • ಪೂಜಾ ಕೋಣೆಯಲ್ಲಿ ಕೆಂಪು ಆಸನದ ಮೇಲೆ ಕುಳಿತು ಹನುಮಂತನಿಗೆ ಮತ್ತು ಮಂಗಳ ದೇವನಿಗೆ ದೀಪ ಬೆಳಗಿ ಆರಾಧಿಸಬೇಕು.
  • ತದನಂತರ ಪೂರ್ಣ ಶ್ರದ್ಧೆಯಿಂದ ಈ ಅಂಗಾರಕ ಸ್ತೋತ್ರವನ್ನು ಕನಿಷ್ಠ 11 ಬಾರಿ ಪಠಿಸುವುದು ಒಳ್ಳೆಯದು.
  • ಹೆಚ್ಚಿನ ಫಲಿತಾಂಶಕ್ಕಾಗಿ ಈ ನಿಯಮವನ್ನು ಸತತವಾಗಿ 21 ಅಥವಾ 40 ದಿನಗಳವರೆಗೆ ನಿರಂತರವಾಗಿ ಪಾಲಿಸಲು ಸಲಹೆ ನೀಡಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಯಲ್ಲಿ ಸದ್ದು ಮಾಡುತ್ತಿದೆ ‘ರಾಖ್’ ವೆಬ್ ಸರಣಿ; ಸರಣಿ ನೋಡಿದ್ರೆ ಮೈ ನಡುಗುತ್ತೆ – Kannada News | Raakh Web Series: Unearthing The Chilling 1978 Ranga Billa True Crime On Amazon Prime

ಸಸ್ಪೆನ್ಸ್ ಹಾಗೂ ಕ್ರೈಂ ಥ್ರಿಲ್ಲರ್ ಕಥೆಗಳನ್ನು ನೋಡುವು ಎಂದರೆ ಒಂದು ವರ್ಗದ ಜನರಿಗೆ ಸದಾ ಇಷ್ಟ ಆಗುತ್ತದೆ. ಇವುಗಳಲ್ಲಿ ಬಹುತೇಕವು ಕಾಲ್ಪನಿಕ ಕಥೆ. ಆದರೆ, ಈಗ ನೈಜ ಘಟನೆ ಆಧಾರಿತ ಸರಣಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ವೆಬ್ ಸರಣಿ ಹೆಸರು ರಾಖ್. ಬಿಡುಗಡೆಯಾದ ದಿನದಿಂದಲೇ ಈ ಸರಣಿ ತನ್ನ ವಿಭಿನ್ನ ಕಥಾಹಂದರ ಹಾಗೂ ರೋಚಕ ತಿರುವುಗಳಿಂದ ಪ್ರೇಕ್ಷಕರ ಗಮನ ಸೆಳೆದಿದೆ.

ಈ ಸರಣಿಯು ಕೇವಲ ಕಾಲ್ಪನಿಕ ಕಥೆಯಲ್ಲ, ಬದಲಿಗೆ ಇಡೀ ಭಾರತವನ್ನೇ ನಡುಗಿಸಿದ್ದ ಅತ್ಯಂತ ಘೋರವಾದ ನೈಜ ಕ್ರಿಮಿನಲ್ ಘಟನೆಯೊಂದನ್ನು ಆಧರಿಸಿದೆ. 1978ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ರಂಗಾ-ಬಿಲ್ಲಾ’ ಅಪಹರಣ ಮತ್ತು ಕೊಲೆ ಪ್ರಕರಣದ ಕರಾಳ ಹಿನ್ನೆಲೆಯನ್ನು ಈ ಸರಣಿ ಹೊಂದಿದೆ.

1978ರ ಆಗಸ್ಟ್ 26ರಂದು ದೆಹಲಿಯಲ್ಲಿ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಕ್ಯಾಪ್ಟನ್ ಮದನ್ ಮೋಹನ್ ಚೋಪ್ರಾ ಅವರ ಮಕ್ಕಳಾದ ಗೀತಾ ಚೋಪ್ರಾ (16) ಮತ್ತು ಸಂಜಯ್ ಚೋಪ್ರಾ (14) ಎಂಬ ಇಬ್ಬರು ಅಪ್ರಾಪ್ತ ಸಹೋದರ-ಸಹೋದರಿ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆ ಬಿಟ್ಟಿದ್ದರು. ದಾರಿಯಲ್ಲಿ ಅವರಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕುಲಜೀತ್ ಸಿಂಗ್ ಅಲಿಯಾಸ್ ರಂಗಾ ಮತ್ತು ಜಸ್ಬೀರ್ ಸಿಂಗ್ ಅಲಿಯಾಸ್ ಬಿಲ್ಲಾ ಎಂಬ ಇಬ್ಬರು ಕ್ರೂರ ಅಪರಾಧಿಗಳು ಕಾರಿನಲ್ಲಿ ಅಪಹರಿಸಿದ್ದರು. ಅವರನ್ನು ಕೊಲೆ ಕೂಡ ಮಾಡಿದ್ದರು. ಈ ಘಟನೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ಭಾರಿ ಕಾರ್ಯಾಚರಣೆಯ ಮೂಲಕ ರಂಗಾ ಮತ್ತು ಬಿಲ್ಲಾನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಕಾರ್ಯಚಾರಣೆಯ ಕಥೆಯೇ ‘ರಾಖ್’.

‘ರಾಖ್’ ಎಂದರೆ ಹಿಂದಿಯಲ್ಲಿ ‘ಬೂದಿ’ ಎಂದರ್ಥ. ಹೆಸರೇ ಸೂಚಿಸುವಂತೆ ಈ ಸರಣಿಯು ಸೇಡು, ಅಪರಾಧ ಸುತ್ತ ಸುತ್ತುತ್ತದೆ. ನಿರ್ದೇಶಕ ಪ್ರೋಸಿತ್ ರಾಯ್ ಈ ಕರಾಳ ಸತ್ಯ ಘಟನೆಯನ್ನು ಆಧರಿಸಿಯೇ ಈ ಸರಣಿಯನ್ನು ರೂಪಿಸಿದ್ದು, ಕಥೆಯಲ್ಲಿ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು, ಪಟ್ಟಿ ಇಲ್ಲಿದೆ

ತಾಂತ್ರಿಕತೆ ಮತ್ತು ನಟನೆ

ಈ ಸರಣಿಗೆ ಪ್ರಮುಖ ಪ್ಲಸ್ ಪಾಯಿಂಟ್ ಎಂದರೆ ಅದರ ಸಿನೆಮಾಟೋಗ್ರಫಿ ಹಾಗೂ ಸೆಟ್. 1978ರ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಕ್ರೈಮ್ ಶೈಲಿಯ ಅದರಲ್ಲೂ ರಿಯಲ್ ಕಥೆ ಇಷ್ಟಪಡುವವರಾಗಿದ್ದರೆ, ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ರಾಖ್’ ವೆಬ್ ಸರಣಿ ನಿಮಗೆ ಖಂಡಿತ ಒಂದು ಉತ್ತಮ ಆಯ್ಕೆ. ಈ ಸರಣಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಲಿ ಫಜಲ್ ಗಮನ ಸೆಳೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆ: ಗೋವಾ ಸರ್ಕಾರಿ ನೌಕರನ ಬಂಧನ, ನಾಲ್ವರು ಪರಾರಿ – Kannada News | Kali Tiger Reserve Poaching: Goa Government Employee Arrested for Wildlife Hunting in Karnataka; 4 Absconding

ಬಂಧಿತ ಆರೋಪಿ ದಿಗಂಬರ್ ಗಾವ್ಡೆImage Credit source: The New Indian Express

ಬೆಂಗಳೂರು, ಜೂನ್ 16: ಕರ್ನಾಟಕ-ಗೋವಾ ಗಡಿಭಾಗದ ಕಾಳಿ ಹುಲಿ ಸಂರಕ್ಷಿತಾರಣ್ಯದ (Kali Tiger Reserve) ವ್ಯಾಪ್ತಿಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ನೌಕರನೊಬ್ಬನನ್ನು ಬಂಧಿಸಿದ್ದಾರೆ. ಜೊಯಿಡಾ ತಾಲೂಕಿನ ಡಿಗ್ಗಿ ಸಮೀಪದ ಬೊಂಡೇಲಿ ಗ್ರಾಮದಲ್ಲಿ ಭಾನುವಾರ ಈ ಕಾರ್ಯಾಚರಣೆ ನಡೆದಿದೆ. ಬೇಟೆಗೆ ಸಹಕರಿಸಿದ ಸ್ಥಳೀಯ ಶೂಟರ್ ಹಾಗೂ ಗೋವಾದ ಮತ್ತಿಬ್ಬರು ಭದ್ರತಾ ಏಜೆನ್ಸಿ ಸಿಬ್ಬಂದಿ ಸೇರಿದಂತೆ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಕಾಳಿ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದ ಜಾಲ ಭೇದಿಸಿದ ಅರಣ್ಯ ಇಲಾಖೆ.
  • ಗೋವಾ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ಬಂಧನ.
  • ಮರಬೆಕ್ಕು ಹಾಗೂ ಇತರ ಮಾಂಸ ವಶ.

ಬಂಧಿತ ಆರೋಪಿಯನ್ನು ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಯೇಂದ್ರ ದಿಗಂಬರ್ ಗಾವ್ಡೆ (45) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಈತನ ಹೆಡೆಮುರಿ ಕಟ್ಟಿದ್ದಾರೆ. ಇದೇ ವೇಳೆ ಕುಂಬಾರವಾಡ ವಲಯದ ಅರಣ್ಯ ಸಿಬ್ಬಂದಿ, ಬೇಟೆಗೆ ಬಳಸಲಾದ ಬಂದೂಕಿನ ಮಾಲೀಕ ಎನ್ನಲಾದ ಸುಭಾಷ್ ಮಿರಾಶಿ ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದು, ಆತನೂ ಸೇರಿದಂತೆ ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ನಿಷೇಧಿತ ವನ್ಯಜೀವಿಗಳ ಮಾಂಸ, ಬಂದೂಕು ವಶ

ದಾಳಿಯ ವೇಳೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-II ರ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿರುವ ಮರಬೆಕ್ಕಿನ (Palm Civet) ಕಳೇಬರವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲ್ಲಲಾಗಿತ್ತು. ಇದರೊಂದಿಗೆ ಉಡ ಹಾಗೂ ಕಸ್ತೂರಿ ಜಿಂಕೆ ಎಂದು ಶಂಕಿಸಲಾದ ಮತ್ತೊಂದು ಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆಯಲಾಗಿದ್ದು, ನಿಖರ ಮಾಹಿತಿ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೇಟೆಗೆ ಬಳಸಿದ್ದ ಬಂದೂಕನ್ನು ಸಹ ಜಪ್ತಿ ಮಾಡಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಗೋವಾ ಗಡಿಗೆ ತೀರಾ ಹತ್ತಿರದಲ್ಲಿರುವ ಕೇವಲ 60 ಮನೆಗಳಿರುವ ಬೊಂಡೇಲಿ ಗ್ರಾಮವು ಅಕ್ರಮ ಬೇಟೆಗಾರರ ತಾಣವಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಮತ್ತೊಬ್ಬ ಗೋವಾ ಸರ್ಕಾರಿ ನೌಕರನೂ ಸೇರಿದ್ದಾನೆ ಎನ್ನಲಾಗಿದೆ. ಗೋವಾದ ಪ್ರಭಾವಿ ವ್ಯಕ್ತಿಗಳಿಂದ ಈ ಪ್ರಕರಣವನ್ನು ಹಳ್ಳ ಹಿಡಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದು, ಗಡಿ ದಾಟಿ ಬಂದು ಸ್ಥಳೀಯರ ಸಹಾಯದಿಂದ ಜಿಂಕೆ, ಉಡಗಳನ್ನು ಬೇಟೆಯಾಡುವ ಅಂತರರಾಜ್ಯ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Telegram Ban: ಭಾರತದಲ್ಲಿ ಟೆಲಿಗ್ರಾಮ್​ಗೆ ತಾತ್ಕಾಲಿಕ ನಿಷೇಧ: ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರದ ಕ್ರಮ – Kannada News | Government Suspends Telegram Access Ahead of NEET Re Exam to Curb Malpractice

ನವದೆಹಲಿ, ಜೂನ್ 16: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET-UG 2026) ಮರು ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ಆದ ‘ಟೆಲಿಗ್ರಾಮ್’ (Telegram) ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನೀಡಿರುವ ಅಧಿಕೃತ ನಿರ್ದೇಶನದ ಪ್ರಕಾರ, ಭಾರತದಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಜೂನ್ 21 ರಂದು ದೇಶಾದ್ಯಂತ ಬಿಗಿಯಾದ ಭದ್ರತೆಯೊಂದಿಗೆ ನೀಟ್ (UG) ಮರು ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ನೀಟ್ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಕೇಂದ್ರ ಸರ್ಕಾರದ ಈ ತ್ವರಿತ ಮತ್ತು ಕಠಿಣ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದೆ. ಈ ತಾತ್ಕಾಲಿಕ ನಿಷೇಧವು ಪರೀಕ್ಷೆಯ ನ್ಯಾಯಸಮ್ಮತತೆಯನ್ನು ಕಾಪಾಡಲು ಮತ್ತು ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ತಡೆಯಲು ನೆರವಾಗಲಿದೆ ಎಂದು ಎನ್‌ಟಿಎ ತಿಳಿಸಿದೆ.

ಮತ್ತಷ್ಟು ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವದಂತಿಗಳು ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಆಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಭಾರತದಲ್ಲಿ ಟೆಲಿಗ್ರಾಂ ಬಳಸುತ್ತಿರುವವರು ಎಷ್ಟು ಮಂದಿ?

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸರಿಸುಮಾರು 10 ಕೋಟಿಗೂ ಹೆಚ್ಚು ಮಂದಿ ಟೆಲಿಗ್ರಾಂ ಸಕ್ರಿಯ ಬಳಕೆದಾರರಿದ್ದಾರೆ. ಜಾಗತಿಕವಾಗಿ ಟೆಲಿಗ್ರಾಮ್ ಆಪ್ ಡೌನ್‌ಲೋಡ್ ಆಗುವ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 22 ರಷ್ಟು ಪಾಲು ಭಾರತದ್ದೇ ಆಗಿದೆ. ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇ. 39 ರಷ್ಟು ಜನರು ವಿವಿಧ ಅಗತ್ಯಗಳಿಗಾಗಿ ಟೆಲಿಗ್ರಾಮ್ ಅನ್ನು ಬಳಸುತ್ತಾರೆ.

ಈ ತಾತ್ಕಾಲಿಕ ನಿಷೇಧದಿಂದಾಗಿ ಸಾಮಾನ್ಯ ಬಳಕೆದಾರರಿಗೆ ಕೆಲವು ದಿನಗಳ ಕಾಲ ತೊಂದರೆಯಾಗಲಿದ್ದರೂ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷೆಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.

ಎಡಿಟಿಂಗ್ ವೈಶಿಷ್ಟ್ಯದ ಮೇಲೂ ನಿರ್ಬಂಧ: ಟೆಲಿಗ್ರಾಮ್ ಆಪ್ ಮೇಲಿನ ನಿಷೇಧ ಜೂನ್ 22ಕ್ಕೆ ಮುಗಿದರೂ, ಜೂನ್ 30ರವರೆಗೆ ಭಾರತದಲ್ಲಿ ಈ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ (Disable) ಟೆಲಿಗ್ರಾಮ್ ಸಂಸ್ಥೆಗೆ ಸರ್ಕಾರ ಆದೇಶಿಸಿದೆ.

ಟೆಲಿಗ್ರಾಮ್‌ನಲ್ಲಿ ಹಳೆಯ ಸಂದೇಶಗಳ ಸಮಯವನ್ನು (Timestamp) ಬದಲಾಯಿಸದೆ, ಅವುಗಳ ಒಳಗಿನ ಪಠ್ಯವನ್ನು ಎಡಿಟ್ ಮಾಡಬಹುದು. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ತಮಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ವದಂತಿಗಳನ್ನು ಹರಡಲು ಈ ವೈಶಿಷ್ಟ್ಯವನ್ನು ಬಳಸಲಾಗುತ್ತಿತ್ತು. ಇದನ್ನು ತಡೆಯಲು ಸರ್ಕಾರ ಈ ನಿರ್ಧಾರ ಮಾಡಿದೆ.

ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ತಾವೇ ಮೊದಲು ನೀಡುವುದಾಗಿ ಹೇಳಿ ಕೆಲವು ವಂಚಕರ ಜಾಲಗಳು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಅಭ್ಯರ್ಥಿಗಳು ಹಾಗೂ ಅವರ ಪೋಷಕರಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದವು. ಇಂತಹ ವಂಚನೆಗಳನ್ನು ತಡೆಯಲು ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:06 am, Tue, 16 June 26

Source link

ಪಾಕಿಸ್ತಾನ್ ತಂಡದ ‘ಆಯ್ಕೆ ಮತ್ತು ವೇತನ’ ವ್ಯವಸ್ಥೆಯೇ ಬದಲು..! – Kannada News | PCB’s New Format Based Contract System

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಆಟಗಾರರ ಆಯ್ಕೆ ಮತ್ತು ಸೆಂಟ್ರಲ್ ಕಾಂಟ್ರಾಕ್ಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇದುವರೆಗೆ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ‘A ಇಂದ D ಗ್ರೇಡ್’ ಶ್ರೇಣೀಕೃತ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಅದರ ಜಾಗದಲ್ಲಿ ಆಟಗಾರರು ಆಡುವ ಕ್ರಿಕೆಟ್ ಸ್ವರೂಪಗಳನ್ನು ಆಧರಿಸಿದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ರಿಕೆಟ್‌ನಲ್ಲಿ ಹೆಚ್ಚುತ್ತಿರುವ ಟಿ20 ಫ್ರಾಂಚೈಸಿ ಲೀಗ್‌ಗಳ ಹಾವಳಿ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಉಂಟಾಗುತ್ತಿರುವ ಹಿನ್ನಡೆಯನ್ನು ತಡೆಯಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

 ನಾಲ್ಕು ‘ಒಪ್ಪಂದ’:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಹೊಸ ನಿಯಮದ ಪ್ರಕಾರ, ಆಟಗಾರರನ್ನು ಯಾವುದೇ ಸಾಮಾನ್ಯ ಗ್ರೇಡ್‌ಗಳಲ್ಲಿ ಗುರುತಿಸದೆ, ಅವರು ಆಡುವ ಕ್ರಿಕೆಟ್ ಮಾದರಿಯ ಆಧಾರದ ಮೇಲೆ ನಾಲ್ಕು ಪ್ರತ್ಯೇಕ ಟ್ರ್ಯಾಕ್‌ಗಳಾಗಿ ವಿಂಗಡಿಸಲಾಗಿದೆ.

  • ಟ್ರ್ಯಾಕ್ A (ಟೆಸ್ಟ್): ಇದು ಕೇವಲ ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗಾಗಿ ಮೀಸಲಾದ ಟ್ರ್ಯಾಕ್. ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲು ಈ ಆಟಗಾರರಿಗೆ ಗರಿಷ್ಠ ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆದರೆ, ಇವರು ಜಾಗತಿಕ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲು ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.
  • ಟ್ರ್ಯಾಕ್ AB (ದ್ವಿ ಸ್ವರೂಪ): ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಯ ಕ್ರಿಕೆಟ್ ಆಡುವ ಆಟಗಾರರು ಈ ಟ್ರ್ಯಾಕ್‌ಗೆ ಒಳಪಡುತ್ತಾರೆ.
  • ಟ್ರ್ಯಾಕ್ BC (ಸೀಮಿತ ಓವರ್‌ಗಳ ಸ್ವರೂಪ): ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಮೇಲೆ ಮಾತ್ರ ಗಮನ ಹರಿಸುವ ಆಟಗಾರರನ್ನು ಈ ಗುಂಪಿಗೆ ಸೇರಿಸಲಾಗುತ್ತದೆ.
  • ಟ್ರ್ಯಾಕ್ D (ಟಿ20): ಕೇವಲ ಟಿ20 ಸ್ವರೂಪಗಳಲ್ಲಿ ಆಡುವ ಆಟಗಾರರು ಈ ಒಪ್ಪಂದದಲ್ಲಿ ಒಳಪಡಲಿದ್ದಾರೆ.  ಇವರಿಗೆ ಮಂಡಳಿಯಿಂದ ಸಿಗುವ ವಾರ್ಷಿಕ ಸಂಭಾವನೆ ಕಡಿಮೆಯಿದ್ದರೂ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‌ಗಳಲ್ಲಿ ಆಡಲು ಇವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗುತ್ತದೆ.

ಆಯ್ಕೆ ವ್ಯವಸ್ಥೆಯಲ್ಲೂ ಬದಲಾವಣೆ:

ಈ ಹೊಸ ಒಪ್ಪಂದ ವ್ಯವಸ್ಥೆಯು ಕೇವಲ ಹಣಕಾಸಿನ ಬದಲಾವಣೆಯಷ್ಟೇ ಅಲ್ಲದೆ, ಪಾಕಿಸ್ತಾನ ಕ್ರಿಕೆಟ್‌ನ ಆಡಳಿತ ಶೈಲಿಯನ್ನೇ ಬದಲಿಸುವ ನಿಟ್ಟಿನಲ್ಲಿ ಕೆಲವು ಕಠಿಣ ನಿಯಮಗಳನ್ನು ಒಳಗೊಂಡಿದೆ.

  • ಶೇ. 85 ರಷ್ಟು ಡೇಟಾ ಆಧಾರಿತ ಆಯ್ಕೆ: ಆಟಗಾರರ ಆಯ್ಕೆ ಮತ್ತು ಒಪ್ಪಂದ ಪ್ರಕ್ರಿಯೆಯಲ್ಲಿ ಪಕ್ಷಪಾತವನ್ನು ತಪ್ಪಿಸಲು ಶೇ. 85 ರಷ್ಟು ನಿರ್ಧಾರಗಳನ್ನು ಸಂಪೂರ್ಣವಾಗಿ ಕಂಪ್ಯೂಟರೈಸ್ಡ್ ತಂತ್ರಜ್ಞಾನ ಮತ್ತು ಆಟಗಾರರ ಅಂಕಿ-ಅಂಶಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಉಳಿದ ಶೇ. 15 ರಷ್ಟು ಮಾತ್ರ ರಾಷ್ಟ್ರೀಯ ಆಯ್ಕೆಗಾರರ ಶಿಫಾರಸಿಗೆ ಬಿಡಲಾಗುತ್ತದೆ.
  • ದೇಶಿ ಕ್ರಿಕೆಟ್ ಕಡ್ಡಾಯ: ಕೇಂದ್ರ ಒಪ್ಪಂದವನ್ನು ಪಡೆಯಲು ಆಟಗಾರರು ಪಾಕಿಸ್ತಾನದ ಸ್ಥಳೀಯ ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ದೇಶಿ ಪಂದ್ಯಗಳಿಂದ ದೂರ ಉಳಿಯುವ ಆಟಗಾರರ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.
  •  ಸಂಪೂರ್ಣ ಗೌಪ್ಯತೆ: ಯಾವ ಆಟಗಾರ ಯಾವ ಟ್ರ್ಯಾಕ್‌ನಲ್ಲಿದ್ದಾರೆ ಮತ್ತು ಅವರಿಗೆ ಸಿಗುವ ಒಟ್ಟು ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಗೌಪ್ಯವಾಗಿಡಲು ಪಿಸಿಬಿ ತೀರ್ಮಾನಿಸಿದೆ. ಇದರಿಂದ ಆಟಗಾರರ ಮೇಲಿನ ಅನಗತ್ಯ ಸಾಮಾಜಿಕ ಮಾಧ್ಯಮಗಳ ಒತ್ತಡ ಕಡಿಮೆಯಾಗಲಿದೆ ಎಂಬುದು ಮಂಡಳಿಯ ಆಶಯ.
  •  ಮಂಡಳಿಯದ್ದೇ ಅಂತಿಮ ನಿರ್ಧಾರ: ಆಟಗಾರರು ತಮಗೆ ಇಷ್ಟ ಬಂದ ಟ್ರ್ಯಾಕ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿಲ್ಲ. ತಂಡದ ಅಗತ್ಯಕ್ಕೆ ತಕ್ಕಂತೆ ಮಂಡಳಿಯೇ ಆಟಗಾರರನ್ನು ಆಯಾ ಟ್ರ್ಯಾಕ್‌ಗಳಿಗೆ ನಿಯೋಜಿಸುತ್ತದೆ.

ಇದನ್ನೂ ಓದಿ: ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

ಒಟ್ಟಿನಲ್ಲಿ ಟಿ20 ಲೀಗ್‌ಗಳ ಆಕರ್ಷಣೆಯಿಂದಾಗಿ ಆಟಗಾರರು ದೇಶಿ ಕ್ರಿಕೆಟ್ ಮತ್ತು ಟೆಸ್ಟ್ ಮಾದರಿಯನ್ನು ನಿರ್ಲಕ್ಷಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಸ ಹೆಜ್ಜೆಯನ್ನಿಟ್ಟಿದೆ. ಈ ಮೂಲಕ ಹಣಕಾಸಿನ ಭದ್ರತೆಯೊಂದಿಗೆ ಪ್ರತಿಭೆ ಮತ್ತು ಯೋಗ್ಯತೆಗೆ ತಕ್ಕಂತೆ ಆಟಗಾರರನ್ನು ಗೌರವಿಸುವ ಈ ‘ಮಾದರಿ ಆಧಾರಿತ ವ್ಯವಸ್ಥೆ’ ಪರಿಚಯಿಸಲು ಮುಂದಾಗಿದೆ.

Source link

RSS ನೋಂದಣಿ ಬಗ್ಗೆ ಪ್ರಶ್ನಿಸಿದ್ದ ಪ್ರಿಯಾಂಕ್​​ ಖರ್ಗೆಗೆ ಬಹಿರಂಗ ಪತ್ರ ಬರೆದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ – Kannada News | RSS Registration Row: BJP MP Narayansa Bhandage Pens Open Letter To Priyank Kharge, Slams Appeasement Politics

ಪ್ರಿಯಾಂಕ್ ಖರ್ಗೆಗೆ ನಾರಾಯಣಸಾ ಭಾಂಡಗೆ ಬಹಿರಂಗ ಪತ್ರImage Credit source: PTI and Narayanasa Bhandage X Account

ಬೆಂಗಳೂರು, ಜೂನ್​​ 16: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿರುವ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಈ ಸಂಬಂಧ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರೋದು ಚರ್ಚೆಗೆ ಗ್ರಾಸವಾಗಿತ್ತು. ಸಂಘಟನೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಕೇಳಿದ್ದ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದ ಭಾಗವತ್​​, ಹಿಂದೂ ಧರ್ಮ ರಿಜಿಸ್ಟರ್ ಆಗಿದೆಯೇ? ಎಂದು ಪ್ರಶ್ನಿಸಿದ್ದರು. ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದೆ ಎಂದಿದ್ದರು. ಆ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕೂಡ ಬಹಿರಂಗ ಪತ್ರ ಬರೆಯುವ ಮೂಲಕ ಪ್ರಿಯಾಂಕ್​​ಗೆ ತಿರುಗೇಟು ನೀಡಿದ್ದಾರೆ.

ನಾರಾಯಣಸಾ ಭಾಂಡಗೆ ಪತ್ರದಲ್ಲೇನಿದೆ?

ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಒಂದು ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಪಕ್ಷವು ಏಕೆ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸುತ್ತದೆ ಎಂಬ ಅನುಮಾನ ಮೂಡಿದೆ. ಕರ್ನಾಟಕದಲ್ಲಿ ನಡೆದ ಹುಬ್ಬಳ್ಳಿ ಪೊಲೀಸ್ ಠಾಣೆ ಹಿಂಸಾಚಾರ, ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗಳು, ಹಿಂಸಾತ್ಮಕ ಗುಂಪುಗಳಿಂದ ಸಾರ್ವಜನಿಕ ಆಸ್ತಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳು ರಾಜ್ಯದ ಜನತೆಯ ನೆನಪಿನಲ್ಲಿ ಇನ್ನೂ ಜೀವಂತವಾಗಿವೆ. ಹಿಂಸೆಗೆ ಒಳಗಾದವರಲ್ಲಿ OBC ಕಾಂಗ್ರೆಸ್ ಶಾಸಕರ ಮನೆಯೂ ಸೇರಿದೆ. ಇಂತಹ ಘಟನೆಗಳ ಕುರಿತು ಇದೇ ರೀತಿಯ ಬಹಿರಂಗ ಪತ್ರಗಳು, ಇದೇ ಮಟ್ಟದ ಆಕ್ರೋಶ ಮತ್ತು ಇದೇ ರೀತಿಯ ನೈತಿಕ ಪ್ರಶ್ನೆಗಳು ಏಕೆ ಉದ್ಭವಿಸಲಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಎಂದು ನಾರಾಯಣಸಾ ಭಾಂಡಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ

‘ಕಾಂಗ್ರೆಸ್​​ಗೆ ಆತ್ಮಾವಲೋಕನದ ಸಮಯ’

ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ನಿಮ್ಮ ಕಾಳಜಿ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಅದೇ ಮಾನದಂಡವನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಹಿನ್ನೆಲೆಯ ಎಲ್ಲ ಸಂಘಟನೆಗಳಿಗೂ ಅನ್ವಯಿಸಬೇಕು. ರಾಜಕೀಯ ಪ್ರತೀಕಾರದ ಭಾವನೆಯಿಂದ ಒಂದು ನಿರ್ದಿಷ್ಟ ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗುವುದಿಲ್ಲ. ಕಾಂಗ್ರೆಸ್​​ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವುದು ಮತ್ತು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಪದೇಪದೇ ನೋಯಿಸುವ ರಾಜಕೀಯ ತಂತ್ರವು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು. ಭಾರತದ ಸಂವಿಧಾನವು ಓಲೈಕೆ ರಾಜಕಾರಣವನ್ನೂ ಬಯಸುವುದಿಲ್ಲ . ಪೂರ್ವಾಗ್ರಹವನ್ನೂ ಒಪ್ಪುವುದಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಸಂಸ್ಥೆಗಳ ಕೊಡುಗೆಯನ್ನು ಗೌರವಿಸುತ್ತಾ, ಯಾವುದೇ ರೀತಿಯ ಅತಿರೇಕ, ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದೇ ನಿಜವಾದ ಸಂವಿಧಾನಾತ್ಮಕ ಕರ್ತವ್ಯ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ? – Kannada News | India Hikes Diesel, ATF Export Duty: No Impact on Domestic Fuel Prices

ನವದೆಹಲಿ, ಜೂನ್ 16: ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತುಗಳ ಮೇಲಿನ ಸುಂಕವನ್ನು (Export Duty) ಹೆಚ್ಚಿಸಿದೆ. ಆದರೆ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡೀಸೆಲ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) 50 ಪೈಸೆ ಏರಿಸಲಾಗಿದೆ. ಪ್ರತಿ ಲೀಟರ್‌ಗೆ 13.5 ರೂನಿಂದ 14 ರೂಗೆ ಹೆಚ್ಚಿಸಲಾಗಿದೆ . ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 3 ರೂ ಹೆಚ್ಚಿಸಲಾಗಿದೆ. 9.5 ರೂನಿಂ 12.5 ರೂಗೆ ಗಣನೀಯವಾಗಿ ಏರಿಸಲಾಗಿದೆ. ಆದರೆ, ಪೆಟ್ರೋಲ್ ರಫ್ತು ಮೇಲಿನ ಸುಂಕದಲ್ಲಿ ಬದಲಾವಣೆ ಮಾಡಲಾಗಿಲ್ಲ. ಅದರ ಪ್ರತಿ ಲೀಟರ್‌ಗೆ ಅದರ ಸುಂಕ 1.5 ರೂನಲ್ಲೇ ಮುಂದುವರಿಯಲಿದೆ.

ಸಾಮಾನ್ಯ ಗ್ರಾಹಕರ ಮೇಲೆ ಏನು ಪರಿಣಾಮ?

ಈ ತೆರಿಗೆ ಬದಲಾವಣೆಗಳು ಕೇವಲ ವಿದೇಶಗಳಿಗೆ ರಫ್ತು ಮಾಡುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ (ಭಾರತದ ಒಳಗಡೆ) ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಈ ಕಾರಣಕ್ಕೆ ಏರಿಕೆಯಾಗುವುದಿಲ್ಲ, ಇಳಿಕೆಯೂ ಆಗುವುದಿಲ್ಲ.

ಇದನ್ನೂ ಓದಿ: ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಪಶ್ಚಿಮ ಏಷ್ಯಾ (West Asia) ಭಾಗದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು (ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದವು) ದೇಶದ ಒಳಗಡೆ ಇಂಧನ ಮಾರಾಟ ಮಾಡುವ ಬದಲು, ವಿದೇಶಗಳಲ್ಲಿ ಹೆಚ್ಚಿನ ಬೆಲೆಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ದೇಶದ ಒಳಗಡೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ದೇಶೀಯ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೇರೇಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಪರಿಷ್ಕೃತ ದರಗಳು ಇವತ್ತು (ಜೂನ್ 16) ಮಂಗಳವಾರದಿದಲೇ ಜಾರಿಗೆ ಬಂದಿದ್ದು, ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ಈ ತೆರಿಗೆಯನ್ನು ಬದಲಾಯಿಸುತ್ತಿರುತ್ತದೆ. ಸದ್ಯ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್​ಗೆ 80 ಡಾಲರ್​ಗೆ ಇಳಿದಿವೆ. ಈ ದರ ಇನ್ನೂ ಇಳಿಕೆಯಾದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರಗಳೂ ಇಳಿಕೆಯಾಗಬಹುದು. ಅಥವಾ ಸರ್ಕಾರವು ಅಬಕಾರಿ ಸುಂಕ ಏರಿಸಿ, ಪೆಟ್ರೋಲ್, ಡೀಸಲ್ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version