ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತನಿಗೆ ವಂಚನೆ: ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ ಮಾಯ! – Kannada News | Haveri: Byadagi Chilli Farmer Cheated, Produce Worth 50 Lakh Sold from Cold Storage

ಬ್ಯಾಡಗಿ ಮೆಣಸಿನಕಾಯಿImage Credit source: tv9 kannada

ಹಾವೇರಿ, ಮೇ 06: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ (Byadagi Chilli) ಮಾರುಕಟ್ಟೆಯಲ್ಲಿ ರೈತನೊಬ್ಬನಿಗೆ (Farmer) ದಲ್ಲಾಳಿಯೊಬ್ಬ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರೈತ ಮಹಾದೇವಪ್ಪ ಎಂಬುವವರ ಮೋಸಕ್ಕೊಳಗಾದವರು. ಬೆಳೆದ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ, ದಲ್ಲಾಳಿ ನಾಗಪ್ಪ ಹಡಗಲಿ ಎಂಬಾತನ ಸಹಾಯದಿಂದ 2023ರಲ್ಲಿ ತಮ್ಮ 363 ಚೀಲ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಮಾರಾಟ ಮಾಡಲು ಬಂದ ರೈತನಿಗೆ, ಅತ್ತ ಮೆಣಸಿನಕಾಯಿಯೂ ಇಲ್ಲ, ಹಣವೂ ಇಲ್ಲದಂತಾಗಿದೆ. ದಲ್ಲಾಳಿ ನಮ್ಮ ಗಮನಕ್ಕೆ ಬಾರದೆ ಮೆಣಸಿನಕಾಯಿಯನ್ನು ಮಾರಾಟ ಮಾಡಿದ್ದಾನೆ ಎಂದು ರೈತ ಕುಟುಂಬ ಆರೋಪಿಸಿದೆ.

ಮುಖ್ಯಾಂಶಗಳು

  • 2023ರಲ್ಲಿ ದಾಸ್ತಾನು ಮಾಡಿದ್ದ 363 ಚೀಲ ಮೆಣಸಿನಕಾಯಿ ನಾಪತ್ತೆ
  • ಅಂದಾಜು 50 ಲಕ್ಷ ರೂ ಮೌಲ್ಯದ ಮೆಣಸಿನಕಾಯಿ ಮಾರಾಟ ಮಾಡಿ ವಂಚನೆ ಆರೋಪ
  • ಸಂತ್ರಸ್ತ ರೈತನಿಂದ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನಡೆದಿದ್ದೇನು?

ರೈತ ಮಹಾದೇವಪ್ಪ ಅವರು 2023ರಲ್ಲಿ ದರ ಕಡಿಮೆ ಇದ್ದಿದ್ದರಿಂದ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟು ಹೋಗಿದ್ದರು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದ್ದರಿಂದ, ಅದನ್ನು ಮಾರಾಟ ಮಾಡಲು ಬಂದಾಗ ಮೆಣಸಿನಕಾಯಿ ಚೀಲಗಳು ನಾಪತ್ತೆಯಾಗಿರುವುದು ಕಂಡು ಶಾಕ್​​ ಆಗಿದ್ದಾರೆ.

ಇದನ್ನೂ ಓದಿ: ಬ್ಯಾಡಗಿ ಮೆಣಸಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ತಿಪ್ಪೇಸ್ವಾಮಿ ಮೆಣಸಿನಕಾಯಿ ಏಜೆನ್ಸಿಯವರು ರೈತನಿಗೆ ಆರಂಭದಲ್ಲಿ ಕೂಲಿ ಕಾರ್ಮಿಕರಿಗೆ ನೀಡುವ ನೆಪದಲ್ಲಿ ಸ್ವಲ್ಪ ಹಣ ನೀಡಿದ್ದರೂ, ನಂತರದ ದಿನಗಳಲ್ಲಿ ರೈತನ ಹೆಸರಿನಲ್ಲಿರುವ ಸುಮಾರು 50 ಲಕ್ಷ ರೂ ಮೌಲ್ಯದ ಮೆಣಸಿನಕಾಯಿಯನ್ನು ರೈತನ ಅನುಮತಿಯಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಮೂಲ ದಾಖಲೆಗಳನ್ನ ತೆಗೆದುಕೊಂಡು ನಮಗೆ ಮೋಸ ಮಾಡಿದ್ದಾರೆ. ನ್ಯಾಯ ಬೇಕು ಅಂತಾ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ರೈತ ಮಹಾದೇವಪ್ಪ ಪ್ರಕರಣ ದಾಖಲಿಸಿದ್ದಾರೆ.

ಹಾವೇರಿ ಎಸ್​​​ಪಿ ಯಶೋಧಾ ವಂಟಗೋಡಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್​​​ಪಿ ಯಶೋಧಾ ವಂಟಗೋಡಿ, ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ರೈತ ನೀಡಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣವು ತನಿಖಾ ಹಂತದಲ್ಲಿದ್ದು, ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ರೈತನಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:33 pm, Wed, 6 May 26

Source link

ಬಿಜೆಪಿ ಸರ್ಕಾರ ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಸಹಿಸುವುದಿಲ್ಲ; ಸುವೇಂದು ಅಧಿಕಾರಿ – Kannada News | Suvendu Adhikari says every TMC goon will be held accountable under BJP government for their atrocities

ಕೊಲ್ಕತ್ತಾ, ಮೇ 6: ಪಶ್ಚಿಮ ಬಂಗಾಳದ ಭವಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು (Mamata Banerjee) ಸೋಲಿಸಿದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟಿಎಂಸಿ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಪ್ರತಿಯೊಬ್ಬ ಟಿಎಂಸಿ ಗೂಂಡಾಗಳನ್ನು ತಮ್ಮ ದೌರ್ಜನ್ಯಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. “ಮಮತಾ ಬ್ಯಾನರ್ಜಿ ಅವರ ರಾಜೀನಾಮೆಯನ್ನು ರಾಜ್ಯಪಾಲರು ನಿರ್ಧರಿಸುತ್ತಾರೆ. ಅವರು ಬಂಗಾಳದಲ್ಲಿ ರಾಜಕೀಯ ಪ್ರಸ್ತುತತೆಯನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ಟಿಎಂಸಿ ಗೂಂಡಾಗಳನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ತಮ್ಮ ದೌರ್ಜನ್ಯಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Athletics Day 2026: ವಿಶ್ವ ಅಥ್ಲೆಟಿಕ್ಸ್‌ ದಿನವನ್ನು ಯಾವ ಕಾರಣಕ್ಕಾಗಿ ಆಚರಿಸಲಾಗುತ್ತದೆ ಗೊತ್ತಾ? – Kannada News | World Athletics Day 2026: Why is World Athletics Day celebrated on May 7? Know its purpose

ವಿಶ್ವ ಅಥ್ಲೆಟಿಕ್ಸ್ ದಿನImage Credit source: vecteezy

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಜನ ದೈಹಿಕ ಚಟುವಟಿಕೆಯಲ್ಲಿ (Physical activity) ತೊಡಗಿಕೊಳ್ಳುವುದು ಕಡಿಮೆಯಾಗಿದೆ. ಅದರಲ್ಲೂ ಯುವಕರು ಮತ್ತು ಮಕ್ಕಳು ಕ್ರೀಡೆ ಇತ್ಯಾದಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಮೊಬೈಲ್‌ ನೋಡುತ್ತಾ ಕಾಲಹರಣ ಮಾಡುತ್ತಾರೆ. ಇದು ಆರೋಗ್ಯಕ್ಕೂ ಹಾಳು. ಅದೇ ಕ್ರೀಡೆಗಳು ಜನರು ಹೆಚ್ಚು ಸಕ್ರಿಯರಾಗಲು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ಚಲನಶೀಲರನ್ನಾಗಿರುವಂತೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಇದು ವಿವಿಧ ಕಾಯಿಲೆಗಳನ್ನು ನಿವಾರಿಸಲು ಮತ್ತು ಹೆಚ್ಚು ಸದೃಢ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ನಮಗೆ ಸಹಾಯ ಮಾಡುತ್ತದೆ. ಹಾಗಾಗಿ ಯುವಕರು ಮತ್ತು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲು, ಫಿಟ್ನೆಸ್‌ ಬಗ್ಗೆ ಜಾಗೃತಿಯನ್ನು ಮೂಡಿಸಲು, ಅಥ್ಲೆಟಿಕ್ಸ್‌ ಆಟಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಮೇ 7 ರಂದು ವಿಶ್ವ ಅಥ್ಲೆಟಿಕ್ಸ್‌  ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಅಥ್ಲೆಟಿಕ್ಸ್‌ ದಿನದ ಇತಿಹಾಸವೇನು?

ಪ್ರತಿ ವರ್ಷ ಮೇ 7 ರಂದು ‘ವಿಶ್ವ ಅಥ್ಲೆಟಿಕ್ಸ್ ದಿನ’ವನ್ನು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಯುವಕರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಥ್ಲೆಟಿಕ್ಸ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಇಂಟರ್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್’ (IAAF) ಈ ದಿನದ ಆಚರಣೆಯನ್ನು ಪ್ರಾರಂಭಿಸಿತು. ಈ ದಿನವನ್ನು ಮೊದಲ ಬಾರಿಗೆ 1996 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಐಎಎಎಫ್‌ ಸಂಸ್ಥೆ ಈ ವಿಶೇಷ ದಿನವನ್ನು ಆಚರಿಸುತ್ತಾ ಬರುತ್ತಿದೆ.

ಇದನ್ನೂ ಓದಿ:  ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುವುದರ ಉದ್ದೇಶವೇನು ಗೊತ್ತಾ?

ವಿಶ್ವ ಅಥ್ಲೆಟಿಕ್ಸ್‌ ದಿನದ ಮಹತ್ವವೇನು?

  • ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದು, ಶಾಲಾ-ಕಾಲೇಜುಗಳಲ್ಲಿ ಅಥ್ಲೆಟಿಕ್ಸ್ ಅನ್ನು ಪ್ರಾಥಮಿಕ ಕ್ರೀಡೆಯಾಗಿ ಉತ್ತೇಸುವುದು, ಕ್ರೀಡೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
  • ಕ್ರೀಡೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಕ್ರೀಡೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವುದು ವಿಶ್ವ ಅಥ್ಲೆಟಿಕ್ಸ್ ದಿನದ ಉದ್ದೇಶವಾಗಿದೆ.
  • ಈ ದಿನದಂದು, ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್‌ಗಳ ಸಂಘವು ದೈಹಿಕ ಚಟುವಟಿಕೆಯ ಮಹತ್ವವನ್ನು ಉತ್ತೇಜಿಸಲು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾಗುವುದಾಗಿ ನಂಬಿಸಿ ಮೋಸ; ಮೊಹಮ್ಮದ್ ಶಮಿ ಸಹೋದರನ ಮೇಲೆ ಗಂಭೀರ ಆರೋಪ – Kannada News | Mohammed Kaif Fraud Allegations: Shami’s Brother Accused of Marriage Deceit and Betrayal

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ( Mohammed Shami) ಅವರ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನವೂ ಹಳಿತಪ್ಪಿದೆ. ಶಮಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಇತ್ತ ಶಮಿ ಅವರ ವೈವಾಹಿಕ ಜೀವನವೂ ಮುರಿದುಬಿದ್ದಿದೆ. 2014 ರಲ್ಲಿ ಶಮಿ, ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಆದರೆ 2018 ರಲ್ಲಿ ಹಸಿನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಘಟನೆಯು ಶಮಿ ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತ್ತು. ಇದೀಗ ಶಮಿ ಅವರ ಸಹೋದರ ಮೊಹಮ್ಮದ್ ಕೈಫ್ ವಿರುದ್ಧವೂ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮೋಸ

ವಾಸ್ತವವಾಗಿ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಮತ್ತು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿರುವ ಮಹ್ವಿಶ್ ಎಂಬ ಮಹಿಳೆ, ‘ಆರಂಭದಲ್ಲಿ ನಮ್ಮಿಬ್ಬರ ನಡುವೆ ಸ್ನೇಹವಿತ್ತು, ಅದು ಕ್ರಮೇಣ ಪ್ರೀತಿಯಾಗಿ ಬದಲಾಯಿತು. ಆದರೆ ಮದುವೆಯ ವಿಷಯ ಬಂದಾಗ, ಕೈಫ್ ನಾನಾ ನೆಪಗಳನ್ನು ಹೇಳಲು ಪ್ರಾರಂಭಿಸಿದರು. ಕಾಮನ್ ಗೆಳೆಯನಿಂದ ನಾವಿಬ್ಬರು ಪರಸ್ಪರ ಪರಿಚಿತರಾದೆವು.

ಆ ನಂತರ ನಾವಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದೆವು. ನಮ್ಮಿಬ್ಬರ ಸ್ನೇಹ ಸಂಬಂಧವಾಗಿ ಅರಳಿತು. ಹೀಗಾಗಿ ನಾನು ಕೈಫ್ ಅವರನ್ನು ಮದುವೆಯಾಗಲು ಬಯಸಿದ್ದೆ. ಆದರೆ ಕೈಫ್ ಬಳಿ ನಾನು ಈ ಬಗ್ಗೆ ಹೇಳಿದಕ್ಕೆ ಅವರು ನಾನಾ ಕಾರಣಗಳನ್ನು ನೀಡಲಾರಂಭಿಸಿದರು. ಈ ವಿಚಾರವನ್ನು ನಾನು ಕೈಫ್ ಅವರ ಅಣ್ಣ ಮೊಹಮ್ಮದ್ ಶಮಿ ಅವರೊಂದಿಗೂ ಮಾತನಾಡಿದ್ದೇನೆ. ಆದರೆ ಶಮಿ ಕೂಡ ಆ ನಂತರ ನನ್ನ ಫೋನ್‌ಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ ಎಂಬ ಆರೋಪಗಳನ್ನು ಹೊರಿಸಿದ್ದಾರೆ.

SIR ವಿಚಾರಣೆಗೆ ಹಾಜರಾಗಲು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಸಮನ್ಸ್

ಮೊಹಮ್ಮದ್ ಕೈಫ್ ಯಾರು?

ಮೊಹಮ್ಮದ್ ಕೈಫ್ ಡಿಸೆಂಬರ್ 10, 1996 ರಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಜನಿಸಿದರು. ಬಂಗಾಳ ತಂಡದ ಪರ ದೇಶೀಯ ಕ್ರಿಕೆಟ್ ಆಡುವ ಕೈಫ್ ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಇದುವರೆಗೆ ಅವರು 14 ಪ್ರಥಮ ದರ್ಜೆ ಪಂದ್ಯಗಳು, 9 ಲಿಸ್ಟ್ ಎ ಪಂದ್ಯಗಳು ಮತ್ತು 1 ಟಿ20 ಪಂದ್ಯವನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 43 ವಿಕೆಟ್‌ಗಳನ್ನು ಮತ್ತು ಲಿಸ್ಟ್ ಎ ಪಂದ್ಯದಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ, ಅವರು ಇನ್ನೂ ಐಪಿಎಲ್‌ನಲ್ಲಿ ಆಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್ – Kannada News | Only fair conditions will be accepted Iran on US proposal to ending war

ವಾಷಿಂಗ್ಟನ್, ಮೇ 5: ಅಮೆರಿಕದ ಅಧ್ಯಕ್ಷ ಟ್ರಂಪ್ (Donald Trump) ಇರಾನ್ ಅನ್ನು ಮಂಡಿಯೂರುವಂತೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಅವರು ಒಪ್ಪಂದಕ್ಕಾಗಿ ಇರಾನ್‌ಗೆ ಹೊಸ ಪ್ರಸ್ತಾಪಗಳನ್ನು ಕಳುಹಿಸುತ್ತಿದ್ದಾರೆ. ಅಮೆರಿಕ ಇರಾನ್‌ಗೆ ಮತ್ತೊಂದು ಪ್ರಸ್ತಾಪವನ್ನು ಕಳುಹಿಸಿದೆ. ಇದರಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಷರತ್ತುಗಳು ಸೇರಿವೆ. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಅಮೆರಿಕ ಇರಾನ್‌ಗೆ 48 ಗಂಟೆಗಳ ಕಾಲಾವಕಾಶ ನೀಡಿದೆ.

ಶಾಂತಿ ಮಾತುಕತೆ ಆರಂಭವಾದಾಗಿನಿಂದ ಇರಾನ್ ತನ್ನ ಷರತ್ತುಗಳಿಂದ ಹಿಂದೆ ಸರಿದಿಲ್ಲ. ಇರಾನ್ ಅಮೆರಿಕದ ಹಿಂದಿನ ಪ್ರಸ್ತಾಪಗಳನ್ನು ಸ್ವೀಕರಿಸಲು ನಿರಾಕರಿಸಿರುವುದರಿಂದ ಎಲ್ಲರ ಕಣ್ಣುಗಳು ಈ ಪ್ರಸ್ತಾವನೆಯ ಮೇಲಿವೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ, ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ (ಯುಎಸ್) 14 ಅಂಶಗಳ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಇರಾನ್ ಹೇಳಿದೆ. ಇರಾನ್ ‘ನ್ಯಾಯಯುತ’ವಾದ ಷರತ್ತುಗಳನ್ನು ಮಾತ್ರ ಸ್ವೀಕರಿಸಲಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಇರಾನ್ ಸಮರ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆ, ಸಂಸತ್ತಿನ ಹಸ್ತಕ್ಷೇಪಕ್ಕೆ ಬೀಳಲಿದೆಯೇ ಬ್ರೇಕ್?

ಮುಂದಿನ ಎರಡು ದಿನಗಳಲ್ಲಿ ಇರಾನ್ ಕುರಿತು ಪ್ರತಿಕ್ರಿಯಿಸುತ್ತದೆ ಎಂದು ಅಮೆರಿಕ ನಿರೀಕ್ಷಿಸುತ್ತಿದ್ದರೂ, ಎರಡೂ ಕಡೆಯವರ ನಡುವೆ ಇನ್ನೂ ಅಂತಿಮ ಒಪ್ಪಂದಕ್ಕೆ ಬರಲಾಗಿಲ್ಲ. ಆಕ್ಸಿಯಾಮ್ ಪ್ರಕಾರ, ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ನಂತರ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಇದೀಗ ಒಂದು ಹಂತಕ್ಕೆ ಬರುವಂತೆ ಕಾಣುತ್ತಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮೋದಿಗೆ ಟ್ರಂಪ್ ಅಭಿನಂದನೆ

ಇದರ ನಡುವೆ ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಹೆಚ್ಚಿನ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಟ್ರೂತ್ ಸೋಶಿಯಲ್ ಮೂಲಕ ಪೋಸ್ಟ್ ಮಾಡಿರುವ ಅವರು, ಇರಾನ್ ಒಪ್ಪಂದವನ್ನು ಒಪ್ಪಿಕೊಳ್ಳುವುದನ್ನು ಅವಲಂಬಿಸಿ ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಲಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ ಎಂದು ಬರೆದಿದ್ದಾರೆ. “ಅವರು ಒಪ್ಪದಿದ್ದರೆ ಬಾಂಬ್ ದಾಳಿ ಪ್ರಾರಂಭವಾಗುತ್ತದೆ” ಎಂದು ಟ್ರಂಪ್ ಬರೆದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ – Kannada News | Tooth Decay Explained: Early Cavity Symptoms You Shouldn’t Ignore

ಪ್ರತಿದಿನ ಹಲ್ಲುಗಳನ್ನು ಬ್ರಷ್ (Brushing) ಮಾಡುತ್ತಿದ್ದರೂ ಕ್ಯಾವಿಟಿ ಸಮಸ್ಯೆ (Cavity) ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ. ದಂತ ಆರೋಗ್ಯದ ಬಗ್ಗೆ ಜಾಗೃತಿ ಇದ್ದರೂ ಈ ಸಮಸ್ಯೆ ಉಂಟಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ದಂತ ವೈದ್ಯರ ಪ್ರಕಾರ, ಕ್ಯಾವಿಟಿ ಎಂದರೆ ದಂತದ ಮೇಲ್ಭಾಗದಲ್ಲಿ ಹಾನಿ ಉಂಟಾಗುವುದು. ಇದು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಉಂಟಾಗಿ, ನಿಧಾನವಾಗಿ ದಂತದಲ್ಲಿ ಕುಳಿ ಉಂಟುಮಾಡುತ್ತದೆ. ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ ರೀತಿ ಹಲ್ಲುಜ್ಜಬೇಕು, ಕ್ಯಾವಿಟಿಯ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ಇದರಿಂದ ಮುಕ್ತಿ ಪಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಹಲ್ಲುಜ್ಜುವುದನ್ನು ಒಂದು ಕೆಲಸದ ರೀತಿ ಭಾವಿಸುತ್ತಾರೆ. ಹಾಗಾಗಿ ಆದಷ್ಟು ಬೇಗ ಅದನ್ನು ಮುಗಿಸಲು ಕಾಯುತ್ತಿರುತ್ತಾರೆ. ಆದರೆ ದಂತ ಅಥವಾ ಹಲ್ಲುಗಳ ಮೇಲೆ ಸರಿಯಾದ ಕೋನದಲ್ಲಿ ಬ್ರಷ್ ಮಾಡದೆ, ಬೇಗ ಬೇಗ ಮಾಡಿ ಮುಗಿಸುವುದರಿಂದ ದಂತಗಳ ನಡುವೆ ಇರುವ ಅಶುದ್ಧಿ ಸಂಪೂರ್ಣವಾಗಿ ಹೋಗುವುದಿಲ್ಲ. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ ಎರಡು ಬಾರಿ, ಎರಡು ನಿಮಿಷಗಳ ಕಾಲ ಸರಿಯಾದ ರೀತಿಯಲ್ಲಿ ಬ್ರಷ್ ಮಾಡಬೇಕು. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಕ್ಯಾವಿಟಿಗೆ ಪ್ರಮುಖ ಕಾರಣವಾಗಿದೆ. ಸಿಹಿ ತಿಂದ ನಂತರ ಬಾಯಿ ತೊಳೆಯದೇ ಇದ್ದರೆ, ಆ ಆಹಾರದ ಕಣಗಳು ದಂತಗಳ ಮೇಲೆ ಉಳಿದು ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತವೆ. ಇದರಿಂದ ಆಮ್ಲ ಉತ್ಪತ್ತಿಯಾಗಿ ದಂತ ಹಾನಿಯಾಗುತ್ತದೆ.

ಇದನ್ನೂ ಓದಿ: ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ

ಕ್ಯಾವಿಟಿಯ ಆರಂಭಿಕ ಲಕ್ಷಣಗಳು:

ಕ್ಯಾವಿಟಿ ಆರಂಭದಲ್ಲಿ ಸಣ್ಣ ಲಕ್ಷಣಗಳಿಂದಲೇ ಕಾಣಿಸಿಕೊಳ್ಳುತ್ತದೆ. ದಂತದಲ್ಲಿ ತಂಪು ಅಥವಾ ಬಿಸಿ ತಟ್ಟುವುದು, ಸಣ್ಣ ನೋವು, ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ನೀರು ಕುಡಿಯುವಾಗ ಅಥವಾ ಆಹಾರ ತಿನ್ನುವಾಗ ನೋವು ಉಂಟಾಗುವುದು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು.

ಕ್ಯಾವಿಟಿ ತಡೆಯಲು ಸಲಹೆಗಳು:

ಸಾಮಾನ್ಯವಾಗಿ ಕ್ಯಾವಿಟಿ ತಡೆಗಟ್ಟಲು ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಫ್ಲಾಸ್ ಬಳಕೆ, ಸಿಹಿ ಹಾಗೂ ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಯಾವುದೇ ತೊಂದರೆ ಕಂಡುಬಂದರೆ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಒಟ್ಟಾರೆ, ದಂತ ಆರೈಕೆಯಲ್ಲಿ ಸರಿಯಾದ ಪದ್ಧತಿ ಮತ್ತು ಆಹಾರ ಕ್ರಮ ಪಾಲಿಸಿದರೆ ಕ್ಯಾವಿಟಿ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ? – Kannada News | PM Narendra Modi to Visit Bengaluru on May 10, Says R Ashok

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಅಧಿಕಾರ ಹಾಗೂ ಕೇರಳ ರಾಜ್ಯದ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ HAL ಏರ್​ಪೋರ್ಟ್ ಪ್ರವೇಶದ್ವಾರ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಮೋದಿ ಅವರು HAL ಏರ್‌ಪೋರ್ಟ್‌ಗೆ ಆಗಮಿಸಲಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇದೊಂದು ಸಂಪೂರ್ಣ ಬಿಜೆಪಿ ಕಾರ್ಯಕ್ರಮವಾಗಿದ್ದು, ನಂತರ ಅವರು ರವಿಶಂಕರ್ ಗುರೂಜಿ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್​​. ಅಶೋಕ್ ಮಾಹಿತಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ‘ನಿರಾಶೆಯಾಗಿದೆ’.. ಕೈತಪ್ಪಿದ ಫೈನಲ್ ಆತಿಥ್ಯ; ಹೇಳಿಕೆ ಬಿಡುಗಡೆ ಮಾಡಿದ ಕೆಎಸ್​ಸಿಎ – Kannada News | BCCI Shifts IPL 2026 Playoffs/Final from Bengaluru; KSCA Expresses Disappointment

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಐಪಿಎಲ್ 2026 (IPL 2026) ರ ಪ್ಲೇಆಫ್‌ ಹಾಗೂ ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಬಿಸಿಸಿಐ (BCCI) ಕೂಡ ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ನಡೆಸಲು ನಿರ್ಧರಿಸಿತ್ತು. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಐಪಿಎಲ್ ಫೈನಲ್​ಗೆ ಸಕಲ ತಯಾರಿ ಮಾಡಿಕೊಂಡಿತ್ತು. ಆದರೆ ಲೀಗ್ ಪಂದ್ಯಗಳು ಮುಗಿಯುವುದಕ್ಕೂ ಮುನ್ನ ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಪ್ಲೇಆಫ್‌ ಹಾಗೂ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ಬಗ್ಗೆ ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಇದೀಗ ಫೈನಲ್ ಕೈತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಎಸ್​​ಸಿಎ ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ನಿರಾಶೆಯಾಗಿದೆ; ಕೆಎಸ್​ಸಿಎ

ಬೆಂಗಳೂರುದಲ್ಲಿ ಐಪಿಎಲ್ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸ್ಪಷ್ಟೀಕರಣ ನೀಡುತ್ತಿದ್ದು, ಮೊದಲಿಗೆ, ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದಕ್ಕೆ ಕೆಎಸ್​ಸಿಎ ನಿರಾಶೆ ವ್ಯಕ್ತಪಡಿಸುತ್ತದೆ. ಕೆಎಸ್​ಸಿಎ ಅಧ್ಯಕ್ಷರು ಹಾಗೂ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ವಿಷಯವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCAಯ ಸಿದ್ಧತೆ, ಆಸಕ್ತಿ ಹಾಗೂ ಇಚ್ಛೆಯನ್ನು ಅಧಿಕೃತವಾಗಿ ತಿಳಿಸಿದ್ದರು.

ಪ್ರಸ್ತುತ ಸೀಸನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಗಳು ಸುಗಮ ನಿರ್ವಹಣೆ, ಜನಸ್ತೋಮ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಹಾಗೂ ಪ್ರೇಕ್ಷಕರ ಅನುಭವದ ದೃಷ್ಟಿಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಇಂತಹ ಮಹತ್ವದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವ ಸಾಮರ್ಥ್ಯವನ್ನು KSCA ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸಂಬಂಧ KSCA, ಬೆಂಗಳೂರಿನಲ್ಲಿ ಪ್ರಸ್ತುತ ಐಪಿಎಲ್ ಸೀಸನ್ ಅನ್ನು ಯಾವ ರೀತಿಯ ಕಾರ್ಯಾಚರಣಾ ವ್ಯವಸ್ಥೆಯಡಿ ನಡೆಸಲಾಯಿತು ಎಂಬುದನ್ನು ವಿವರಿಸುವ ಸಮಗ್ರ ಪತ್ರವನ್ನು BCCIಗೆ ಕಳುಹಿಸಿತ್ತು. ಈ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್‌ಗಳು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೇ ಅನುಸರಿಸಲಾಗುತ್ತಿದ್ದು, ಈ ಸೀಸನ್‌ನಲ್ಲಿಯೂ ಹಾಗೂ ಹಿಂದಿನ ಪ್ಲೇಆಫ್ ಪಂದ್ಯಗಳ ಆಯೋಜನೆಯಲ್ಲಿಯೂ ಸಮಾನವಾಗಿ ಜಾರಿಗೊಳಿಸಲಾಗಿತ್ತು.

ಬಿಸಿಸಿಐ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ

KSCA ಕಳುಹಿಸಿದ್ದ ಪತ್ರ ಸಂಪೂರ್ಣವಾಗಿ ವಾಸ್ತವಾಧಾರಿತ, ಕಾರ್ಯಾಚರಣಾತ್ಮಕ ಹಾಗೂ ಸ್ಪಷ್ಟೀಕರಣಾತ್ಮಕ ಸ್ವರೂಪದ್ದಾಗಿದ್ದು, ಇಂತಹ ಮಹತ್ವದ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಮತ್ತು ಹಿತಾಸಕ್ತಿದಾರರ ಅಗತ್ಯಗಳ ಕುರಿತು ಪಾರದರ್ಶಕತೆ ಒದಗಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCA ಸಂಪೂರ್ಣ ಸಿದ್ಧತೆಯಲ್ಲಿದ್ದರೂ, BCCI ಈ ಪಂದ್ಯಗಳನ್ನು ಬೇರೆಡೆ ನಡೆಸಲು ನಿರ್ಧಾರ ಕೈಗೊಂಡಿರುವುದನ್ನು ನಾವು ಅರಿತುಕೊಂಡಿದ್ದೇವೆ. ಈ ನಿರ್ಧಾರದ ನಿರ್ದಿಷ್ಟ ಕಾರಣಗಳನ್ನು KSCAಗೆ ಅಧಿಕೃತವಾಗಿ ತಿಳಿಸದಿದ್ದರೂ, BCCIಯ ನಿರ್ಧಾರಾಧಿಕಾರ ಮತ್ತು ಪ್ರಾಧಿಕಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್

KSCA ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಪಂದ್ಯಗಳನ್ನು ಆಯೋಜಿಸಲು ಸದಾ ಸಿದ್ಧವಾಗಿದ್ದು, ಭಾರತದಲ್ಲಿ ಕ್ರಿಕೆಟ್ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗೆ BCCI, ಫ್ರಾಂಚೈಸಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಎಲ್ಲಾ ಹಿತಾಸಕ್ತಿದಾರರಿಗೆ ತನ್ನ ಸಂಪೂರ್ಣ ಸಹಕಾರವನ್ನು ಮುಂದುವರಿಸಲಿದೆ. ಮಾಧ್ಯಮ ವಲಯ ಹಾಗೂ ಕ್ರಿಕೆಟ್ ಅಭಿಮಾನಿಗಳ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗುರು’ವಿಗೆ ವಿದಾಯ ಹೇಳಿದ ವಿಜಯ್, ಗೆಳೆಯನ ನೋವಿಗೆ ಜೊತೆ – Kannada News | Thalapathy Vijay pay his last respects to producer RB Choudary Express condolences to family

ದಳಪತಿ ವಿಜಯ್ (Thalapathy Vijay) ಇತಿಹಾಸ ಬರೆದಿದ್ದಾರೆ. ತಮ್ಮ ಅಭೂತಪೂರ್ವ ಸ್ಟಾರ್​​ಡಮ್, ಅಭಿಮಾನಿ ಬಳಗವನ್ನು ಬಳಸಿಕೊಂಡು ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆ ಗೆದ್ದಿದ್ದು, ಸಿಎಂ ಆಗಲಿದ್ದಾರೆ. ಆದರೆ ಇಂಥಹಾ ಖುಷಿಯ ಸಮಯದಲ್ಲಿಯೇ ವಿಜಯ್ ಅವರ ಚಿತ್ರರಂಗದ ಗುರುಗಳಲ್ಲಿ ಒಬ್ಬರಾದ ಆರ್​​ಬಿ ಚೌಧರಿ ಅವರು ನಿಧನ ಹೊಂದಿದ್ದಾರೆ. ಖ್ಯಾತ ನಿರ್ಮಾಪಕ ಆರ್​​ಬಿ ಚೌಧರಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಜಯ್, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಅವರ ಅಂತಿಮ ದರ್ಶನ ಪಡೆದಿರುವುದಲ್ಲದೆ, ಗೆಳೆಯನಿಗೆ ಸಾಂತ್ವನ ಸಹ ಹೇಳಿದ್ದಾರೆ.

ಆರ್​​ಬಿ ಚೌಧರಿ ಅವರು ವಿಜಯ್​​ಗೆ ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರ ಸ್ಟಾರ್​​ಡಮ್​​ಗೆ ಕಾರಣವಾದ ನಿರ್ಮಾಪಕ. ಅದು ಮಾತ್ರವೇ ಅಲ್ಲದೆ, ವಿಜಯ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ನಟ ಜೀವ ಅವರ ತಂದೆಯೂ ಹೌದು. ಆರ್​​ಬಿ ಚೌಧರಿ ಅವರು ರಾಜಸ್ಥಾನದ ಹಳ್ಳಿಯೊಂದರ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ವಿಜಯ್ ಅವರು ಇಂದು (ಮೇ 6) ಸಂಜೆ ಪಡೆದಿದ್ದಾರೆ.

ವಿಜಯ್ ಅವರು ಆರ್​​ಬಿ ಚೌಧರಿ ಅವರ ಅಂತಿಮ ದರ್ಶನ ಪಡೆದು, ಗೆಳೆಯ ಜೀವ ಅವರನ್ನು ಆಲಂಗಿಸಿಕೊಂಡು ಅವರಿಗೆ ಸಾಂತ್ವನ ಹೇಳಿದ್ದಾರೆ. ಜೀವ ಮತ್ತು ವಿಜಯ್ ಒಟ್ಟಿಗೆ ‘ನನ್ಬ’ ಸಿನಿಮಾನಲ್ಲಿ ನಟಿಸಿದ್ದರು. ‘ನನ್ಬ’ ಎಂದರೆ ತಮಿಳಿನಲ್ಲಿ ಗೆಳೆಯ ಎಂದರ್ಥ. ಇಬ್ಬರೂ ಬಹಳ ಆತ್ಮೀಯ ಗೆಳೆಯರಾಗಿದ್ದರು. ಅದಕ್ಕಿಂತಲೂ ಮುಖ್ಯವಾಗಿ, ವಿಜಯ್ ಅವರು ಸ್ಟಾರ್ ಆಗಿ ಚಿತ್ರರಂಗದಲ್ಲಿ ಬೆಳೆಯಲು ಆರ್​​ಬಿ ಚೌಧರಿ ಅವರು ಬಹು ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು.

ಇದನ್ನೂ ಓದಿ:ದಳಪತಿ ವಿಜಯ್ ಗೆದ್ದಿದ್ದಕ್ಕೆ ದುನಿಯಾ ವಿಜಿ ಹೇಳಿದ್ದೇನು?

ತೀರ ಸಾಧಾರಣ ಯಶಸ್ಸನ್ನಷ್ಟೆ ಕಂಡು, ದೊಡ್ಡ ಹಿಟ್ ಗಾಗಿ ವಿಜಯ್ ಕಾತರರಾಗಿದ್ದಾಗ 1996 ರಲ್ಲಿ ಚೌಧರಿ ಅವರು ವಿಜಯ್ ಅವರಿಗಾಗಿ ‘ಪೂವೇ ಉನಕ್ಕಾಗ’ ಸಿನಿಮಾ ನಿರ್ಮಿಸಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ 1999ರಲ್ಲಿ ಮತ್ತೊಂದು ಸಿನಿಮಾ ನಿರ್ಮಿಸಿದರು. ಅದೂ ಸಹ ಬ್ಲಾಕ್ ಬಸ್ಟರ್. ಫ್ಯಾಮಿಲಿ ಆಡಿಯೆನ್ಸ್ ನಟ ಎನಿಸಿಕೊಂಡಿದ್ದ ವಿಜಯ್ ಅವರಿಗೆ ಮಾಸ್ ಹೀರೋ ಇಮೇಜು ಕೊಟ್ಟ ‘ತಿರುಪಾಚ್ಚಿ’ ಸಿನಿಮಾವನ್ನು ಸಹ ಚೌಧರಿ ಅವರೇ ನಿರ್ಮಿಸಿದ್ದು. ಬಳಿಕ 2014 ರಲ್ಲಿ ಬಂದ ಮತ್ತೊಂದು ಬ್ಲಾಕ್ ಬಸ್ಟರ್ ‘ಜಿಲ್ಲಾ’ ಸಿನಿಮಾವನ್ನೂ ಸಹ ಸೂಪರ್ ಗುಡ್ ಫಿಲಮ್ಸ್​ನ ಚೌಧರಿ ಅವರೇ ನಿರ್ಮಿಸಿದ್ದು.

ಚೌಧರಿ ಅವರು ಈ ವರೆಗೆ 99 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 100ನೇ ಸಿನಿಮಾವನ್ನು ವಿಜಯ್ ಜೊತೆಗೇ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ ವಿಜಯ್ ಹಠಾತ್ತನೆ ಸಿನಿಮಾದಿಂದ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುಂಚೆಯೇ ಚೌಧರಿ ನಿಧನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀವು ಮಾಡುವ ಈ ತಪ್ಪುಗಳು ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು – Kannada News | These mistakes you make can cause your pressure cooker to explode‌

ಈಗಂತೂ ಪ್ರತಿ ಮನೆಯಲ್ಲೂ ಕುಕ್ಕರ್‌ (pressure cooker) ಬಳಕೆ ಮಾಡಲಾಗುತ್ತದೆ. ಅನ್ನ ಬೇಯಿಸುವುದರಿಂದ ಹಿಡಿದು ಸಾರು, ಸಾಂಬಾರ್‌ ಮಾಡುವವರೆಗೆ ಪ್ರತಿಯೊಂದು ಅಡುಗೆಯನ್ನೂ ಹೆಚ್ಚಿನವರು ಕುಕ್ಕರ್‌ನಲ್ಲಿಯೇ ಮಾಡುತ್ತಾರೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ ಗ್ಯಾಸ್‌ ಕೂಡ ಉಳಿತಾಯವಾಗುತ್ತದೆ. ವಿಷಯ ಏನೆಪ್ಪಾ ಅಂದ್ರೆ ಅನೇಕರಿಗೆ  ಕುಕ್ಕರ್‌ ಹೇಗೆ ಬಳಸಬೇಕು ಎಂಬ ಅರಿವಿಲ್ಲ. ಈ ಸಣ್ಣ ನಿರ್ಲಕ್ಷ್ಯ, ಅಜಾಗರೂಕತೆ ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯ.

ನಿಮ್ಮ ಈ ತಪ್ಪುಗಳಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು:

ಗ್ಯಾಸ್ಕೆಟ್ ರಬ್ಬರ್‌ನ ನಿರ್ಲಕ್ಯ: ಪ್ರೆಶರ್ ಕುಕ್ಕರ್‌ನಲ್ಲಿ ರಬ್ಬರ್ ಗ್ಯಾಸ್ಕೆಟ್ ಮತ್ತು ಸೀಟಿ ಅತ್ಯಗತ್ಯ. ಒಟ್ಟಾಗಿ, ಅವೆರಡು ಆಂತರಿಕ ಒತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಹೆಚ್ಚುವರಿ ಉಗಿಯನ್ನು ಬಿಡುಗಡೆ ಮಾಡುತ್ತವೆ. ಆದರೆ ಅನೇಕ ಮಂದಿ ಗ್ಯಾಸ್ಕೆಟ್‌ ರಬ್ಬರ್‌ ಸಡಿಲವಾದರೂ, ಅವು ಸವೆದು ಹೋದರು ಅದನ್ನು ಚೇಂಜ್‌ ಮಾಡುವುದುದಿಲ್ಲ. ಇದು ಪ್ರೆಶರ್ ಕುಕ್ಕರ್‌ನೊಳಗಿನ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಇದು ಕುಕ್ಕರ್‌ ಬ್ಲಾಸ್ಟ್‌ ಆಗಲು ಕಾರಣವಾಗುತ್ತದೆ. ಆದ್ದರಿಂದ ಸೀಟಿ ಮತ್ತು ಗ್ಯಾಸ್ಕೆಟ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಿ.

ಕುಕ್ಕರ್ ಅನ್ನು ಅತಿಯಾಗಿ ತುಂಬಿಸುವುದು: ಅನೇಕರು ಕುಕ್ಕರ್‌ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಆಹಾರ ತುಂಬಿಸುತ್ತಾರೆ. ಹೀಗೆ ಕುಕ್ಕರ್‌ ಸಂಪೂರ್ಣವಾಗಿ ತುಂಬುವವರೆಗೆ ಅದರಲ್ಲಿ ಅನ್ನ, ತರಕಾರಿ ಬೇಯಿಸಬಾರದು. ಇದರಿಂದ ಕುಕ್ಕರ್‌ ಒಳಗೆ ಉತ್ಪತ್ತಿಯಾಗುವ ಉಗಿ ಹೊರಗೆ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ. ಇದರಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಕಕ್ಕರ್‌ನ ಸಾಮರ್ಥ್ಯದ  2/3 ರಷ್ಟು ಮಾತ್ರ ಆಹಾರವನ್ನು ತುಂಬಿಸಬೇಕು.

ಸೀಟಿಯನ್ನು ಸ್ವಚ್ಛಗೊಳಿಸದಿರುವುದು: ಸೀಟಿ ಒತ್ತಡ ಬಿಡುಗಡೆಗೆ  ಕುಕ್ಕರ್‌ನ ಪ್ರಮುಖ ಭಾಗವಾಗಿದೆ. ಅದರಲ್ಲಿ ಕೊಳೆ ಅಥವಾ ಆಹಾರ ಕಣಗಳು ಸಿಲುಕಿಕೊಂಡರೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಉಗಿ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕುಕ್ಕರ್ ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿ ಬಳಕೆಯ ನಂತರ ಸೀಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ವೆಂಟ್ ಪೈಪ್‌ನಲ್ಲಿ ಯಾವುದೇ ಅಡಚಣೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯ ಬಗ್ಗೆ ಇರಲಿ ತುಸು ಹೆಚ್ಚು ಕಾಳಜಿ

ಕಡಿಮೆ ನೀರು ಸೇರಿಸುವುದು: ಕೆಲವರು ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ನೀರನ್ನು ಸೇರಿಸುತ್ತಾರೆ. ಇದು ಆಹಾರವನ್ನು ಸುಡುವುದಲ್ಲದೆ, ಒಳಗೆ ಅತಿಯಾದ ಶಾಖವನ್ನು ಉತ್ಪಾದಿಸುತ್ತದೆ. ಇದು ಕುಕ್ಕರ್ ಅತಿಯಾಗಿ ಬಿಸಿಯಾಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಆಹಾರ ಬೇಯಿಸುವಾಗ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ.

ಹಳೆಯ ಪ್ರೆಶರ್ ಕುಕ್ಕರ್‌ ಬಳಕೆ: ಕೆಲವರು ಹಲವು ವರ್ಷಗಳ ಹಳೆಯ ಕುಕ್ಕರ್‌ಗಳನ್ನೇ ಬಳಕೆ ಮಾಡುತ್ತಾರೆ. ಕಾಲ ಕಳೆದಂತೆ ಕುಕ್ಕರ್‌ನ ಮುಚ್ಚಳ ಮತ್ತು ಲಾಕ್ ವ್ಯವಸ್ಥೆಯು ದುರ್ಬಲಗೊಳ್ಳುವ ಕಾರಣ ಹಳೆಯ ಪ್ರೆಶರ್‌ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ತುಂಬಾನೇ ಡೇಂಜರ್.‌ ಏಕೆಂದರೆ ಇದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಕ್ಕರ್‌ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ, ಮತ್ತು ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version