Video: ರೈಲಿನ ಸೀಟುಗಳ ಹರಿದು ಯುವಕರ ಪುಂಡಾಟ – Kannada News | Vandalism on Train Caught on Camera, Sparks Calls for Strict Action

ಯುವಕರು ರೈಲಿನ ಸೀಟುಗಳನ್ನು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿದೆ. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಈ ಕಿಡಿಗೇಡಿಗಳು ತಮ್ಮ ವೈಯಕ್ತಿಕ ಮೋಜಿನ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ರೈಲಿನ ಸೀಟುಗಳನ್ನು ಹರಿದು ಹಾಕುವುದು ಮತ್ತು ಅವುಗಳನ್ನು ಕಿತ್ತು ಎಸೆಯುವ ಮೂಲಕ ವಿಕೃತ ಆನಂದ ಪಡೆಯುತ್ತಾ, ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆಯು ದೇಶದ ಜೀವನಾಡಿ ಹಾಗೂ ಸಾಮಾನ್ಯ ಜನರ ಆಸ್ತಿಯಾಗಿದೆ. ಇಂತಹ ಗೂಂಡಾವರ್ತನೆಯಿಂದ ಕೇವಲ ಆರ್ಥಿಕ ನಷ್ಟವಾಗುವುದು ಮಾತ್ರವಲ್ಲದೆ, ಪ್ರಾಮಾಣಿಕ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದರೂ, ಇಂತಹ ವ್ಯಕ್ತಿಗಳು ವ್ಯವಸ್ಥೆಯನ್ನು ಹಾಳುಮಾಡಲು ಮುಂದಾಗುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನದ ಬೆಲೆ 3 ವಾರಗಳಿಂದ 500 ರೂನಷ್ಟು ಇಳಿಕೆ – Kannada News | Gold Price Today on 3rd May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 3: ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳ ನಡುವೆಯೂ ಬಹಳಷ್ಟು ಕುಸಿದಿದೆ. ಈ ವಾರದ ಆರಂಭದಲ್ಲಿ 14,120 ರೂ ಇದ್ದ ಚಿನ್ನದ ಬೆಲೆ (Gold Rates) 13,835 ರೂಗೆ ಇಳಿದಿದೆ. ಕಳೆದ 10 ದಿನದಲ್ಲಿ ಸುಮಾರು 350 ರೂನಷ್ಟು ಬೆಲೆ ಕುಸಿತವಾಗಿದೆ. ಕಳೆದ ಮೂರು ವಾರಗಳಲ್ಲಿ 400 ರೂಗೂ ಮೇಲ್ಪಟ್ಟು ಬೆಲೆ ಇಳಿದಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿದಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,835 ರೂ
  • ಚೆನ್ನೈ: 14,000 ರೂ
  • ಮುಂಬೈ: 13,835 ರೂ
  • ದೆಹಲಿ: 13,850 ರೂ
  • ಕೋಲ್ಕತಾ: 13,835 ರೂ
  • ಕೇರಳ: 13,835 ರೂ
  • ಅಹ್ಮದಾಬಾದ್: 13,840 ರೂ
  • ಜೈಪುರ್: 13,850 ರೂ
  • ಲಕ್ನೋ: 13,850 ರೂ
  • ಭುವನೇಶ್ವರ್: 13,835 ರೂ

ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,583 ರುಪಾಯಿ)
  • ದುಬೈ: 516.25 ಡಿರಾಮ್ (13,321 ರುಪಾಯಿ)
  • ಅಮೆರಿಕ: 145 ಡಾಲರ್ (13,743 ರುಪಾಯಿ)
  • ಸಿಂಗಾಪುರ: 183.50 ಸಿಂಗಾಪುರ್ ಡಾಲರ್ (13,656 ರುಪಾಯಿ)
  • ಕತಾರ್: 514 ಕತಾರಿ ರಿಯಾಲ್ (13,365 ರೂ)
  • ಸೌದಿ ಅರೇಬಿಯಾ: 528 ಸೌದಿ ರಿಯಾಲ್ (13,344 ರುಪಾಯಿ)
  • ಓಮನ್: 55.15 ಒಮಾನಿ ರಿಯಾಲ್ (13,576 ರುಪಾಯಿ)
  • ಕುವೇತ್: 42.80 ಕುವೇತಿ ದಿನಾರ್ (13,225 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ನಿರ್ಣಾಯಕ ಹಂತಕ್ಕೂ ಮುನ್ನ ವಿದೇಶಕ್ಕೆ ಹಾರಿದ RCB ಪಡೆ! – Kannada News | IPL 2026: RCB take mid season Maldives trip

IPL 2026: ಐಪಿಎಲ್ 2026ರ ಸೀಸನ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮುಂದಿನ ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಲು ಒಂದು ಪುಟ್ಟ ವಿರಾಮ ಪಡೆದುಕೊಂಢಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ಸಿಕ್ಕ ಒಂದು ವಾರದ ಬಿಡುವನ್ನು ಬಳಸಿಕೊಂಡಿರುವ ತಂಡ, ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದೆ.

ವಿಶ್ರಾಂತಿ ಮತ್ತು ರಿಫ್ರೆಶ್:

ಟೂರ್ನಿಯ ಸತತ ಪ್ರಯಾಣ ಮತ್ತು ಒತ್ತಡದಿಂದ ಹೊರಬರಲು ಮ್ಯಾನೇಜ್‌ಮೆಂಟ್ ಈ ಪ್ರವಾಸವನ್ನು ಆಯೋಜಿಸಿದೆ. ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಲ್ಡೀವ್ಸ್ ಫೋಟೋ ಹಂಚಿಕೊಳ್ಳುವ ಮೂಲಕ ಈ ಪ್ರವಾಸವನ್ನು ಖಚಿತಪಡಿಸಿದ್ದಾರೆ. ತಂಡದ ಬಹುತೇಕ ಆಟಗಾರರು ಈ ಪ್ರವಾಸದಲ್ಲಿದ್ದರೂ, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಓಪನರ್ ಫಿಲ್ ಸಾಲ್ಟ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ಪ್ಲೇ-ಆಫ್ ಹಾದಿ ಸುಗಮ:

ಪ್ರಸ್ತುತ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡವು 9 ಪಂದ್ಯಗಳಲ್ಲಿ 6 ಜಯದೊಂದಿಗೆ 12 ಅಂಕಗಳನ್ನು ಗಳಿಸಿ ಭದ್ರವಾದ ಸ್ಥಾನದಲ್ಲಿದೆ. ಪ್ಲೇ-ಆಫ್ ಹಂತಕ್ಕೇರಲು ತಂಡಕ್ಕೆ ಇನ್ನು ಕೇವಲ ಎರಡು ಗೆಲುವುಗಳ ಅವಶ್ಯಕತೆಯಿದೆ. ಈ ವಿಶ್ರಾಂತಿಯು ಆಟಗಾರರು ಹೊಸ ಉತ್ಸಾಹದೊಂದಿಗೆ ಮೈದಾನಕ್ಕಿಳಿಯಲು ಸಹಕಾರಿಯಾಗಲಿದೆ.

ಮುಂದಿನ ಸವಾಲುಗಳು:

ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ, ಮೇ 7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್​ಸಿಬಿ ಸೆಣಸಲಿದೆ. ಆನಂತರ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ. ಈ ಪಂದ್ಯಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್​ಗೇರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್​ ನೀಡಿದ ಪಂಜಾಬ್ ಕಿಂಗ್ಸ್

ಆರ್​ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ:

  •  ಲಕ್ನೋ ಸೂಪರ್ ಜೈಂಟ್ಸ್ (LSG): ಮೇ 7, ರಾತ್ರಿ 7:30ಕ್ಕೆ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಲಕ್ನೋದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ.
  •  ಮುಂಬೈ ಇಂಡಿಯನ್ಸ್ (MI): ಮೇ 10ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆರ್​ಸಿಬಿ ತಂಡ ಮುಂಬೈ ಇಂಡಿಯನ್ಸ್​ ಸವಾಲನ್ನು ಎದುರಿಸಲಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): ಮೇ 13ರಂದು ಮತ್ತೆ ರಾಯ್‌ಪುರದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಸೆಣಸಲಿದೆ.
  •  ಪಂಜಾಬ್ ಕಿಂಗ್ಸ್ (PBKS): ಮೇ 17ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH): ಮೇ 22ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಸ್​ಆರ್​​ಹೆಚ್ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿದೆ.

Published On – 12:50 pm, Sun, 3 May 26

Source link

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ, ಜೀವರಾಜ್‌ಗೆ ಅಭಿನಂದನೆ! – Kannada News | Shringeri Recount Results: BY Vijayendra Hails Victory of Truth; Congratulates DN Jeevaraj on Legal Triumph

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ

ಬೆಂಗಳೂರು , ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ (postal ballot recount)  ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೈಕೋರ್ಟ್ ಆದೇಶದಂತೆ ನಡೆದ ಈ ಮರು ಎಣಿಕೆ ಪ್ರಕ್ರಿಯೆಯ ನಂತರ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶೃಂಗೇರಿಯ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಅವರ ಎಕ್ಸ್ (ಟ್ವಿಟರ್) ಪೋಸ್ಟ್

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಈ ಗೆಲುವು ನಮ್ಮ ಚುನಾವಣಾ ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಸಂದ ಗೆಲುವು. ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ ಎಂದು ಹೇಳಿದ್ದಾರೆ. ಸಂವಿಧಾನಾತ್ಮಕ ಹೋರಾಟದ ಮೂಲಕ ಪ್ರತಿ ಮತಕ್ಕೂ ಗೌರವ ತಂದುಕೊಟ್ಟ ಜೀವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಅವರು, ಶೃಂಗೇರಿಯ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ, ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ಅಂಚೆ ಮತಗಳ ಮರು ಎಣಿಕೆಗೆ ಐತಿಹಾಸಿಕ ಆದೇಶ ನೀಡಿತ್ತು.

ಇದನ್ನೂ ಓದಿ ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು?

ಮರು ಎಣಿಕೆಯಲ್ಲಿ ಅತಂತ್ರ ಸ್ಥಿತಿ

ನಿನ್ನೆ (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅಂಚೆ ಮತಗಳ ಮರು ಎಣಿಕೆ ನಡೆಯಿತು. ವರದಿಗಳ ಪ್ರಕಾರ, ಮರು ಎಣಿಕೆಯ ನಂತರ ಕಾಂಗ್ರೆಸ್ ಶಾಸಕ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಬಿಜೆಪಿಯ ಜೀವರಾಜ್ ಅವರಿಗೆ ಮುನ್ನಡೆ ಸಿಕ್ಕಿದೆ ಎನ್ನಲಾಗಿದೆ. ಈ ಬೆಳವಣಿಗೆಯು ಪ್ರಜಾಪ್ರಭುತ್ವದಲ್ಲಿ ಸತ್ಯ ಯಾವತ್ತೂ ಸೋಲದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ಅನಿಲ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್ – Kannada News | Samantha Naga Chaitanya attend same wedding reception with Raj Nidimoru Sobhita Dhulipala

ಟಾಲಿವುಡ್‌ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ವಿವಾಹ ಆರತಕ್ಷತೆ ಶನಿವಾರ (ಮೇ 2) ರಾತ್ರಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ತೆಲುಗು (Tollywood) ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಮಾಜಿ ದಂಪತಿಗಳಾದ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರ ಮೇಲೆ. ಆ ಸಂದರ್ಭದ ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ವಿಶೇಷವೆಂದರೆ, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ತಮ್ಮ ಹೊಸ ಜೀವನ ಸಂಗಾತಿಗಳ ಜೊತೆಗೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಮಂತಾ ಅವರು ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡರೆ, ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ ಅವರ ಜೊತೆ ಆಗಮಿಸಿದರು.

ನೇರಳೆ ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದರು. ಪತಿ ರಾಜ್ ನಿಡಿಮೋರು ಅವರು ಸೂಟ್‌ನಲ್ಲಿ ಮಿಂಚುತ್ತಿದ್ದರು. ಸಮಂತಾ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಅದೇ ರೀತಿ, ನಾಗ ಚೈತನ್ಯ ಅವರು ನೀಲಿ ಬಣ್ಣದ ಬ್ಲೇಜರ್ ಧರಿಸಿದ್ದರೆ, ಶೋಭಿತಾ ಅವರು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ಇವರ ಜೊತೆಯಲ್ಲಿ ನಾಗಾರ್ಜುನ ಮತ್ತು ಅಮಲಾ ಕೂಡ ವೇದಿಕೆಯ ಮೇಲೆ ನವ ದಂಪತಿಗಳಿಗೆ ಶುಭ ಹಾರೈಸಿದರು.

ಒಂದೇ ಸಮಾರಂಭದಲ್ಲಿ ಇಬ್ಬರೂ ಕಾಣಿಸಿಕೊಂಡರೂ, ಸಮಂತಾ ಮತ್ತು ಚೈತನ್ಯ ಪರಸ್ಪರ ಮಾತನಾಡಿದ ಅಥವಾ ಎದುರಾದ ಯಾವುದೇ ವಿಡಿಯೋಗಳು ಲಭ್ಯವಾಗಿಲ್ಲ. ಇಬ್ಬರೂ ಬೇರೆ ಬೇರೆ ಸಮಯದಲ್ಲಿ ವೇದಿಕೆ ಏರಿ ಶುಭ ಹಾರೈಸಿದರು. ಆದರೆ, ಅಭಿಮಾನಿಗಳು ಮಾತ್ರ ಈ ದೃಶ್ಯಗಳನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಸುತ್ತಿದ್ದಾರೆ. ‘ಎಲ್ಲರೂ ಈಗ ಅವರವರ ಜೀವನದಲ್ಲಿ ಸಂತೋಷವಾಗಿದ್ದಾರೆ, ಯಾರಿಗೂ ದೃಷ್ಟಿ ತಾಕದಿರಲಿ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ‘ರುದ್ರ ಕಾಲ’ ಪೋಸ್ಟರ್ ರಿಲೀಸ್ ಮಾಡಿದ ಸಮಂತಾ: ವಿಡಿಯೋ ನೋಡಿ

ಸಮಂತಾ ಮತ್ತು ನಾಗ ಚೈತನ್ಯ 2017ರಲ್ಲಿ ಗೋವಾದಲ್ಲಿ ವಿವಾಹವಾಗಿದ್ದರು. ಆದರೆ, 2021ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆನಂತರ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವಿವಾಹವಾದರೆ, ಸಮಂತಾ ಕಳೆದ ವರ್ಷ ರಾಜ್ ನಿಡಿಮೋರು ಅವರ ಜೊತೆ ಹೊಸ ಜೀವನ ಆರಂಭಿಸಿದ್ದರು. ಒಟ್ಟಿನಲ್ಲಿ, ಹಳೆಯ ಕಹಿ ನೆನಪುಗಳನ್ನು ಮರೆತು ಇಬ್ಬರೂ ತಮ್ಮ ಹೊಸ ಜೀವನದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮರುಪರಿಶೀಲನೆ! – Kannada News | IPL 2026: BCCI plans to review Impact Player rule

ಐಪಿಎಲ್ 2026ರ ನಂತರ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ಕೊನೆ ಹಾಡಲಾಗುತ್ತದೆಯೇ? ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉತ್ತರ ನೀಡಿದ್ದಾರೆ. ಸದ್ಯದ ಕ್ರಿಕೆಟ್ ವೇಗಕ್ಕೆ ಹೊಸ ಆಯಾಮ ನೀಡಿರುವ ಈ ನಿಯಮದ ಪರ-ವಿರೋಧ ಚರ್ಚೆಗಳ ನಡುವೆ, ಮಂಡಳಿಯ ಮುಂದಿನ ನಡೆಯೇನು ಎಂಬುದು ಈಗ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಕುರಿತು ಬಿಸಿಸಿಐನಿಂದ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ…

  • ತಕ್ಷಣದ ಬದಲಾವಣೆ ಇಲ್ಲ: ಪ್ರಸಕ್ತ ಸೀಸನ್‌ನ ಮಧ್ಯದಲ್ಲಿ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದವರೆಗೆ ಹಾಲಿ ನಿಯಮವೇ ಮುಂದುವರಿಯಲಿದೆ.
  •  ಫ್ರಾಂಚೈಸಿಗಳಿಂದ ದೂರುಗಳಿಲ್ಲ: ಮಾಧ್ಯಮಗಳಲ್ಲಿ ಮತ್ತು ಆಟಗಾರರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಯಾವುದೇ ಐಪಿಎಲ್ ತಂಡಗಳು ಈ ನಿಯಮವನ್ನು ತೆಗೆದುಹಾಕುವಂತೆ ಬಿಸಿಸಿಐಗೆ ಅಧಿಕೃತವಾಗಿ ಮನವಿ ಮಾಡಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.
  •  ಮನರಂಜನೆಯ ಅಂಶ: ಈ ನಿಯಮವು ಪಂದ್ಯಗಳಿಗೆ ಹೆಚ್ಚಿನ ವೇಗ ಮತ್ತು ಕುತೂಹಲ ನೀಡಿದೆ. ತಂಡಗಳು 260ಕ್ಕೂ ಹೆಚ್ಚು ರನ್ ಗಳಿಸಲು ಈ ನಿಯಮ ಸಹಕಾರಿಯಾಗಿದೆ, ಇದು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತಿದೆ ಎಂಬುದು ಬಿಸಿಸಿಐನ ಅಭಿಪ್ರಾಯ.
  • ಟೀಕೆಗಳು: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮಾರಕವಾಗಿದೆ ಮತ್ತು ಪಂದ್ಯವನ್ನು ’12 ವರ್ಸಸ್ 12′ ಆಟವನ್ನಾಗಿ ಮಾಡಿದೆ ಎಂಬುದು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಮುಂದಿನ ನಡೆ:

2026ರ ಸೀಸನ್ ಮುಗಿದ ನಂತರ, ಬಿಸಿಸಿಐ ಪದಾಧಿಕಾರಿಗಳು, ತಂಡದ ಮಾಲೀಕರು ಮತ್ತು ತಜ್ಞರೊಂದಿಗೆ ಸಭೆ ನಡೆಸಿ ಈ ನಿಯಮವನ್ನು ಮುಂದಿನ 2027ರ ಸೀಸನ್‌ನಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ.

ಅಂದರೆ ಈ ಬಾರಿಯ ಐಪಿಎಲ್ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಭವಿಷ್ಯ ನಿರ್ಧಾರವಾಗಲಿದೆ. ಈ ನಿಒಯಮವನ್ನು ತೆಗೆದು ಹಾಕಿದರೆ, ಆಡುವ ಬಳಗದಲ್ಲಿ 11 ಆಟಗಾರರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್​ ನೀಡಿದ ಪಂಜಾಬ್ ಕಿಂಗ್ಸ್

ಪ್ರಸ್ತುತ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿ ಒಟ್ಟು 12 ಆಟಗಾರರಿಗೆ ಅವಕಾಶ ಸಿಗುತ್ತಿದೆ. ಅಂದರೆ 11+1 ಆಟಗಾರರನ್ನು ಕಣಕ್ಕಿಳಿಸಲಾಗುತ್ತಿದೆ. ಇದೀಗ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ತಿಳಿಸಿರುವ ಕಾರಣ ಐಪಿಎಲ್​ 2027 ರಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದು ಹಾಕುವ ಸಾಧ್ಯತೆಯಿದೆ.

Source link

ಜಬಲ್ಪುರ ದೋಣಿ ದುರಂತ, 13ಕ್ಕೇರಿದ ಸಾವಿನ ಸಂಖ್ಯೆ, ಚಿಕ್ಕಪ್ಪ-ಮಗುವಿನ ಶವ ಪತ್ತೆ – Kannada News | Final Body Recovered in Jabalpur Boat Incident, Toll Reaches 13

ಜಬಲ್ಪುರ, ಮೇ 03: ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸಂಭವಿಸಿದ ಕ್ರೂಸ್ ದೋಣಿ ದುರಂತದ ಕರಾಳತೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ. ಬಾರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಎರಡು ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಮೃತರನ್ನು ಖಮರಿಯಾದ ಆರ್ಡನೆನ್ಸ್ ಫ್ಯಾಕ್ಟರಿಯ ಉದ್ಯೋಗಿಯ ಮಗ ಮಯೂರಾಮ್ ಮತ್ತು ಆತನ ಚಿಕ್ಕಪ್ಪ 50 ವರ್ಷದ ಕಾಮರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಇವರಿಗಾಗಿ ಕುಟುಂಬಸ್ಥರು ಹಾಗೂ ರಕ್ಷಣಾ ಪಡೆಗಳು ಹುಡುಕಾಡುತ್ತಿದ್ದವು, ಆದರೆ ಇಂದು ಬೆಳಗ್ಗೆ ಅಣೆಕಟ್ಟಿನಿಂದ ಹೊರತೆಗೆಯಲಾದ ಅವರ ಪಾರ್ಥಿವ ಶರೀರಗಳು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿವೆ.

ಗುರುವಾರ ಸಂಜೆ ಪ್ರವಾಸಿಗರು ಕ್ರೂಸ್ ದೋಣಿಯಲ್ಲಿ ನರ್ಮದಾ ನದಿಯ ಸೌಂದರ್ಯ ಸವಿಯುತ್ತಿದ್ದಾಗ ಏಕಾಏಕಿ ಹವಾಮಾನ ವೈಪರೀತ್ಯ ಉಂಟಾಗಿತ್ತು. ಬಲವಾದ ಬಿರುಗಾಳಿ ಬೀಸಿದ್ದರಿಂದ ದೋಣಿ ಅಸಮತೋಲನಗೊಂಡು ನೀರಿನಲ್ಲಿ ಮುಳುಗಿತ್ತು. ಆ ಕ್ಷಣದಲ್ಲೇ ಅನೇಕರು ಜಲಸಮಾಧಿಯಾದರೆ, ಇನ್ನು ಕೆಲವರು ನಾಪತ್ತೆಯಾಗಿದ್ದರು. ದುರಂತದ ತೀವ್ರತೆಯನ್ನು ಅರಿತ ಸರ್ಕಾರವು ಕೂಡಲೇ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಈ ಕೆಳಗಿನ ತಂಡಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು:

ಅಧಿಕಾರಿಗಳ ಪ್ರಕಾರ, ನದಿಯ ಆಳ ಮತ್ತು ಹೂಳಿನ ಕಾರಣದಿಂದಾಗಿ ಶೋಧ ಕಾರ್ಯ ಸವಾಲಿನಿಂದ ಕೂಡಿದ್ದರೂ, ನಿರಂತರ ಪ್ರಯತ್ನದ ಫಲವಾಗಿ ನಾಪತ್ತೆಯಾದವರ ದೇಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಪ್ರವಾಸಿಗರ ಸುಂದರ ಪಯಣವೊಂದು ಹೀಗೆ ಸ್ಮಶಾನ ಮೌನದಲ್ಲಿ ಅಂತ್ಯಗೊಂಡಿರುವುದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Gajalakshmi Rajayoga: ಗಜಲಕ್ಷ್ಮಿ ರಾಜಯೋಗ; ಗುರು-ಶುಕ್ರರ ಅಪರೂಪದ ಸಂಯೋಗ, ಈ 5 ರಾಶಿಯವರ ಬದುಕು ಬಂಗಾರ! – Kannada News | June 10th Gajalakshmi Rajayoga: Jupiter and Venus Conjunction Brings Wealth

ಜೂನ್ 10 ರಂದು ಒಂದು ಅದ್ಭುತ ವಿದ್ಯಮಾನ ಘಟಿಸಲಿದೆ. ದೃಕ್ ಪಂಚಾಂಗದ ಪ್ರಕಾರ, ಅಂದು ಜ್ಞಾನದ ಕಾರಕ ಗುರು ಮತ್ತು ಐಶ್ವರ್ಯದ ಕಾರಕ ಶುಕ್ರ ಒಂದೇ ಮಟ್ಟದಲ್ಲಿ ಸಂಧಿಸಲಿದ್ದಾರೆ. ಈ ಇಬ್ಬರು ಶುಭ ಗ್ರಹಗಳ ನಿಕಟ ಸಂಯೋಗದಿಂದಾಗಿ ಅತ್ಯಂತ ಶಕ್ತಿಶಾಲಿ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ವಿಸ್ತರಣೆ ಮತ್ತು ಜ್ಞಾನವನ್ನು ಪ್ರತಿನಿಧಿಸಿದರೆ, ಶುಕ್ರನು ಸುಖ-ಸಂತೋಷ ಮತ್ತು ಆಕರ್ಷಣೆಯನ್ನು ನೀಡುತ್ತಾನೆ. ಈ ಇಬ್ಬರ ಮಿಲನವು ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ.

ಯಾವ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ?

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಯೋಗವು ಆರ್ಥಿಕವಾಗಿ ಭರ್ಜರಿ ಲಾಭ ತರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದ್ದು, ಪ್ರೀತಿಪಾತ್ರರ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ಕರ್ಕಾಟಕ ರಾಶಿ:

ವೃತ್ತಿ ರಂಗದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುವುದರ ಜೊತೆಗೆ ಆರ್ಥಿಕ ಸ್ಥಿರತೆ ಲಭಿಸಲಿದೆ. ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಮೂಡಲಿದ್ದು, ನೆಮ್ಮದಿಯ ವಾತಾವರಣವಿರುತ್ತದೆ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಇದು ಸುವರ್ಣ ಕಾಲ. ಸ್ಥಗಿತಗೊಂಡಿದ್ದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಗೌರವ-ಮನ್ನಣೆ ಹೆಚ್ಚಾಗಲಿದ್ದು, ದೂರದ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಅನುಭವಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಮೆರುಗುಗೊಳಿಸಲಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತುಲಾ ರಾಶಿ:

ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಈ ರಾಜಯೋಗವು ಅತ್ಯುತ್ತಮ ಫಲ ನೀಡಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ. ವೈಯಕ್ತಿಕ ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಲಿದ್ದು, ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.

ಧನು ರಾಶಿ:

ಧನು ರಾಶಿಯವರಿಗೆ ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದ್ದು, ಮಕ್ಕಳ ಕಡೆಯಿಂದ ಉತ್ತಮ ಸುದ್ದಿಯನ್ನು ನಿರೀಕ್ಷಿಸಬಹುದು.

ಹೂಡಿಕೆ ಮತ್ತು ನಿರ್ಧಾರಗಳಿಗೆ ಶುಭ ಸಮಯ:

ಗುರು ಮತ್ತು ಶುಕ್ರರ ಈ ಯುಗಲಬಂದಿಯು ಸಮತೋಲಿತ ಜೀವನಕ್ಕೆ ನಾಂದಿ ಹಾಡಲಿದೆ. ನೀವು ಹೊಸ ಉದ್ಯಮ ಆರಂಭಿಸಲು ಅಥವಾ ದೊಡ್ಡ ಮಟ್ಟದ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ ಎಂದು ಜ್ಯೋತಿಷ್ಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀಗ ಹಾಕಿದ ಮನೆಯೊಳಗೆ ನಾಲ್ವರು ಮಕ್ಕಳ ಭೀಕರ ಹತ್ಯೆ, ತಾಯಿ ನಾಪತ್ತೆ – Kannada News | Four Children Found Dead Inside Locked Home in Uttar Pradesh, Probe Underway

ಲಕ್ನೋ, ಮೇ 03: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಹಂತಕರು, ನಾಲ್ವರು ಅಪ್ರಾಪ್ತ ಒಡಹುಟ್ಟಿದವರನ್ನು ಇಟ್ಟಿಗೆಯಿಂದ ಜಜ್ಜಿ,ಚೂಪಾದ ಆಯುಧಗಳಿಂದ ಇರಿದು ಹತ್ಯೆ(Murder) ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗಿನ ರಣರಂಗದಂತಹ ದೃಶ್ಯ ಕಂಡು ತನಿಖಾಧಿಕಾರಿಗಳೇ ದಿಗ್ಭ್ರಮೆಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಟ್ಟಿಗೆಗಳಿಂದ ತಲೆಗೆ ಹೊಡೆದು ಮತ್ತು ಚೂಪಾದ ಆಯುಧಗಳಿಂದ ಇರಿದು ಈ ಕೃತ್ಯ ಎಸಗಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಮಕ್ಕಳ ತಾಯಿ ಸ್ಥಳದಿಂದ ನಾಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. ಆ ಮನೆ ಆಕೆಯ ಹೆಸರಿನಲ್ಲೇ ನೋಂದಣಿಯಾಗಿದ್ದು, ಪ್ರಸ್ತುತ ಆಕೆಯೇ ಈ ತನಿಖೆಯ ಕೇಂದ್ರಬಿಂದುವಾಗಿದ್ದಾರೆ. ಪೊಲೀಸರು ಆಕೆಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ಪೊಲೀಸ್ ಮೂಲಗಳ ಪ್ರಕಾರ, ಮಕ್ಕಳ ತಂದೆ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ತಂದೆಯ ಗೈರುಹಾಜರಿಯಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ ಪ್ರಾಚಿ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ನಾಪತ್ತೆಯಾಗಿರುವ ಮಹಿಳೆಗೆ ಸೇರಿದ್ದರಿಂದ, ಆಸ್ತಿ ಹಂಚಿಕೆಯ ವಿವಾದವೇನಾದರೂ ಇತ್ತೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಅಪರಾಧದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ (Forensic) ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಹತ್ಯೆಯ ನಿಖರವಾದ ವಿಧಾನ ಮತ್ತು ಸಮಯವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಆ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿದ್ದು, ತಲೆಮರೆಸಿಕೊಂಡಿರುವ ತಾಯಿ ಸಿಕ್ಕಿಬಿದ್ದರೆ ಮಾತ್ರ ಈ ನಿಗೂಢ ಹತ್ಯಾಕಾಂಡದ ಹಿಂದಿನ ಅಸಲಿ ರಹಸ್ಯ ಬಯಲಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:06 pm, Sun, 3 May 26

Source link

ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದಾಂಡೇಲಿ, ಮೇ.3: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಇಲ್ಲದ ಕಾರಣ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ರಸ್ತೆಯಲ್ಲಿ ನಡೆದಿದೆ. ಕುಳಗಿ ನಿವಾಸಿ ಆನಂದ ಮಣ್ಣವಡ್ಡರ (42) ಎಂಬುವವರೇ ಮೊಸಳೆ ದಾಳಿಗೆ ಒಳಗಾದ ದುರ್ದೈವಿ. ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಆನಂದ ಅವರು ಶೌಚಕ್ಕೆಂದು ಕುಳಿತಿದ್ದಾಗ ಏಕಾಏಕಿ ನದಿಯಿಂದ ಬಂದ ಮೊಸಳೆ ಅವರ ಮೇಲೆರಗಿದೆ. ದಾಳಿಯಿಂದ ಕಂಗಾಲಾದ ಆನಂದ ಅವರು ಜೋರಾಗಿ ಕೂಗಾಡಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳೀಯರು ಕೂಡಲೇ ಧಾವಿಸಿ ಬಂದು ಮೊಸಳೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆನಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ದಾಂಡೇಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿ ನಿರ್ವಹಣೆ ಆಗದ ಕಾರಣ ಅನಿವಾರ್ಯವಾಗಿ ಜನರು ನದಿ ತೀರಕ್ಕೆ ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version