ಹೆಚ್ಚು ಸಮಯ ಎಸಿಯಲ್ಲಿ ಇರುವವರಿಗೆ ಉಸಿರಾಟ ಮತ್ತು ಚರ್ಮದ ಸಮಸ್ಯೆ ಕಂಡುಬರುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Staying in AC All Day? Here’s How to Protect Your Lungs and Skin

ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚು ಸಮಯ ಏರ್ ಕಂಡೀಷನರ್ (AC) ಬಳಕೆಗೆ ಒಲವು ತೋರುತ್ತಿದ್ದಾರೆ. ಮನೆ, ಕಚೇರಿ ಮತ್ತು ವಾಹನಗಳಲ್ಲಿ ನಿರಂತರವಾಗಿ ಎಸಿಯಲ್ಲಿ ಇರುವ ಅಭ್ಯಾಸ ಈಗ ಸಾಮಾನ್ಯವಾಗಿದೆ. ಆದರೆ ವೈದ್ಯರ ಪ್ರಕಾರ, ದೀರ್ಘ ಸಮಯ ಎಸಿಯಲ್ಲಿ ಇರುವವರಲ್ಲಿ ಉಸಿರಾಟ ಹಾಗೂ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಎಸಿಯಿಂದ ಬರುವ ಗಾಳಿ ಮೂಗು, ಗಂಟಲು ಮತ್ತು ಉಸಿರಾಟದ ಮಾರ್ಗಗಳಲ್ಲಿ ಒಣತನ ಉಂಟುಮಾಡಬಹುದು. ಇದರಿಂದ ಕೆಲವರಿಗೆ ಕೆಮ್ಮು, ಸೀನಾಟ, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದಂತಹ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಅಸ್ತಮಾ, ಅಲರ್ಜಿ ಅಥವಾ ಸೈನಸ್ ಸಮಸ್ಯೆ ಹೊಂದಿರುವವರಲ್ಲಿ ಈ ತೊಂದರೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು, ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೈದ್ಯರು ಹೇಳುವಂತೆ, ಎಸಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಅದರೊಳಗೆ ಧೂಳು, ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯುವ ಸಾಧ್ಯತೆ ಇರುತ್ತದೆ. ಈ ಕಣಗಳು ಗಾಳಿಯ ಮೂಲಕ ದೇಹಕ್ಕೆ ಸೇರಿ ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಆದ್ದರಿಂದ ಎಸಿ ಫಿಲ್ಟರ್‌ಗಳನ್ನು ಸಮಯಕ್ಕೆ ಸರಿಯಾಗಿ ಕ್ಲೀನ್ ಮಾಡುವುದು ಅತ್ಯಗತ್ಯ.

ಚರ್ಮದ ಮೇಲೂ ಪರಿಣಾಮ ಬೀರಬಹುದು ಎಚ್ಚರ!

ನಿರಂತರ ಎಸಿ ಗಾಳಿಯಲ್ಲಿ ಇರುವುದರಿಂದ ಚರ್ಮದ ಸಹಜ ತೇವಾಂಶ ಕಡಿಮೆಯಾಗಬಹುದು. ಇದರಿಂದ ಚರ್ಮ ಒಣಗುವುದು, ಖಜ್ಜಳಿ, ಉರಿ ಹಾಗೂ ತುಟಿಗಳು ಒಡೆಯುವಂತಹ ಸಮಸ್ಯೆಗಳು ಕಂಡುಬರುತ್ತವೆ. ಸಂವೇದನಾಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆಗಳು ಹೆಚ್ಚು ಗಂಭೀರವಾಗಬಹುದು. ಕೆಲವರಿಗೆ ಮುಖದ ಕಾಂತಿ ಕಡಿಮೆಯಾಗುವುದು ಮತ್ತು ಚರ್ಮ ಬಿರುಕು ಬಿಟ್ಟಂತೆ ಕಾಣಿಸುವುದೂ ಸಂಭವಿಸುತ್ತದೆ.

ಇದನ್ನೂ ಓದಿ: ನಿಮ್ಮ ಮಕ್ಕಳು ಕೂಡ ಎಸಿ ಕೊಠಡಿಯಲ್ಲಿ ಮಲಗುತ್ತಾರಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ತಜ್ಞರು ಸಲಹೆ ನೀಡುವಂತೆ, ಎಸಿಯಲ್ಲಿ ಇರುವವರು ಸಾಕಷ್ಟು ನೀರು ಕುಡಿಯಬೇಕು ಮತ್ತು ಚರ್ಮಕ್ಕೆ ಮಾಯಿಶ್ಚರೈಸರ್ ಬಳಸಬೇಕು. ಎಸಿಯ ತಾಪಮಾನವನ್ನು ಅತಿಯಾಗಿ ಕಡಿಮೆ ಮಾಡದೇ, ಮಧ್ಯೆ ಮಧ್ಯೆ ತಾಜಾ ಗಾಳಿಯಲ್ಲೂ ಸಮಯ ಕಳೆಯುವುದು ಉತ್ತಮ. ಜೊತೆಗೆ ಕೊಠಡಿಯಲ್ಲಿ ಗಾಳಿಯ ಹರಿವು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಉಸಿರಾಟ ಅಥವಾ ಚರ್ಮದ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs KKR: ಕೆಕೆಆರ್ ವಿರುದ್ಧ ಸೋತು ಪ್ಲೇಆಫ್ ರೇಸ್​​ನಿಂದ ಹೊರಬಿದ್ದ ಡೆಲ್ಲಿ – Kannada News | KKR Dominates DC in IPL 2026 Match 51: Delhi Capitals Out of Playoff Race

ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ, ಸತತ ನಾಲ್ಕನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142 ರನ್ ಗಳಿಸಿತು, ಕೆಕೆಆರ್‌ಗೆ 143 ರನ್‌ಗಳ ಗುರಿಯನ್ನು ನೀಡಿತು. ಕೆಕೆಆರ್ 14.2 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸುವ ಮೂಲಕ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಡೆಲ್ಲಿ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುವುದು ಖಚಿತವಾಗಿದೆ. ಏಕೆಂದರೆ ಉಳಿದಿರುವ 3 ಪಂದ್ಯಗಳನ್ನು ಗೆದ್ದರೂ ಡೆಲ್ಲಿ ಬಳಿ ಕೇವಲ 14 ಅಂಕಗಳು ಇರಲಿವೆ. ಪ್ಲೇಆಫ್​ಗೇರಲು ಇಷ್ಟು ಅಂಕಗಳು ಸಾಕಾಗುವುದಿಲ್ಲವಾಗಿರುವುದರಿಂದ ಡೆಲ್ಲಿ ಪ್ಲೇಆಫ್​ ರೇಸ್​​ನಿಂದ ಹೊರಬಿದ್ದಿದೆ.

Source link

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್ – Kannada News | Big Blow To Vijay AMMK Leader Dhinakaran Supports AIADMK leader Palaniswami To Form Government In Tamil Nadu

ಚೆನ್ನೈ, ಮೇ 8: ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಇನ್ನೂ ಮುಗಿದಿಲ್ಲ. ನಟ-ರಾಜಕಾರಣಿ ವಿಜಯ್ ದಳಪತಿ (Vijay) ಒಂದೆಡೆ ನಾಳೆ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ ಅವರಿಗೆ ಸರಿಯಾಗಿ 118 ಸ್ಥಾನಗಳ ಬೆಂಬಲವಿದ್ದು, ಯಾವುದಾದರೂ ಒಂದು ಪಕ್ಷ ಹಿಂದೆ ಸರಿದರೂ ಸರ್ಕಾರ ರಚನೆ ಅತಂತ್ರವಾಗುವ ಸ್ಥಿತಿಯಿದೆ. ಇನ್ನೊಂದೆಡೆ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ನ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರಿಗೆ ಸರ್ಕಾರ ರಚಿಸಲು ಬೆಂಬಲ ನೀಡಿದ್ದಾರೆ. ಈ ಹಿಂದೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚಿಸುವ ಪ್ರಯತ್ನಕ್ಕೆ ಎಎಂಎಂಕೆ ಬೆಂಬಲ ನೀಡಬಹುದು ಎಂಬ ವರದಿಗಳಿದ್ದವು.

ಈ ಬಗ್ಗೆ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಪ್ರತಿಕ್ರಿಯೆ ನೀಡಿದ್ದು, “ನಾನು ಎಐಎಡಿಎಂಕೆಯನ್ನು ಬೆಂಬಲಿಸುತ್ತಿದ್ದೇನೆ. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸಿ ಸರ್ಕಾರ ರಚಿಸಲು ನಾನು ಪತ್ರವನ್ನು ಸಲ್ಲಿಸಿದ್ದೇನೆ. ನಮ್ಮ ಶಾಸಕ ಕಾಮರಾಜ್ ಕೂಡ ಅದಕ್ಕೆ ಸಹಿ ಹಾಕಿ ನನ್ನ ಕಾರ್ಯದರ್ಶಿ ಮೂಲಕ ಕಳುಹಿಸಿದ್ದಾರೆ. ಟಿವಿಕೆಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂಬ ವರದಿ ನೋಡಿದಾಗ ನಾನು ಆಘಾತಕ್ಕೊಳಗಾಗಿದ್ದೆ. ನಮ್ಮ ಪಕ್ಷವು ವಿಜಯ್‌ಗೆ ಬೆಂಬಲ ನೀಡಿದೆ ಎಂದು ಟಿವಿಯಲ್ಲಿ ನೋಡಿದಾಗ, ನಾನು ಆಘಾತಕ್ಕೊಳಗಾಗಿದ್ದೆ. ಹಾಗಾಗಿ, ನಾನು ರಾಜ್ಯಪಾಲರೊಂದಿಗೆ ಅಪಾಯಿಂಟ್‌ಮೆಂಟ್ ಪಡೆದುಕೊಂಡು ಪತ್ರ ಸಲ್ಲಿಸಿದ್ದೇನೆ. ಅದನ್ನು ತನಿಖೆ ಮಾಡುವಂತೆ ಕೇಳಿಕೊಂಡು ಪತ್ರವನ್ನು ಅವರಿಗೆ ಸಲ್ಲಿಸಿದ್ದೇನೆ.” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಅತಿ ಉದ್ದದ ಮೆಟ್ರೋ ಓಪನ್ ಮಾಡಲು BMRCL ಸಿದ್ದತೆ: ಟ್ರಾಫಿಕ್ ಸಮಸ್ಯೆಗೆ ಸಿಗಲಿದೆ ಮುಕ್ತಿ – Kannada News | Bengaluru’s Longest Metro Line Planned: BMRCL Proposes 73 km Route to Connect IT Hubs, Traffic Relief

ಬೆಂಗಳೂರು, ಮೇ 08: ನಗರದಲ್ಲಿ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಮುಂದಾಗಿರುವ ಬಿಎಂಆರ್​ಸಿಎಲ್ (BMRCL), ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ‘ಪಿಂಕ್ ಲೈನ್’ ಮೆಟ್ರೋ (Pink Line Metro) ಮಾರ್ಗವನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಈ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜೂನ್ ತಿಂಗಳಿನಲ್ಲಿ ಆರು ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಇದರ ಬೆನ್ನಲ್ಲೇ, ಈ ಮಾರ್ಗವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ನಗರದ ಅತಿ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆ
  • ಐಟಿಬಿಟಿ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಸುಗಮ ಸಂಪರ್ಕ
  • ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಿಎಂಆರ್​ಸಿಎಲ್​ ಮಾಸ್ಟರ್ ಪ್ಲಾನ್

ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಮಾಡಲು ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದೆ. ಈ ಹಿನ್ನೆಲೆ ಐಟಿಬಿಟಿ ಪಾರ್ಕ್​ಗಳು, ಇಂಡಸ್ಟ್ರಿಯಲ್ ಟೌನ್​ಗಳನ್ನು ಸಂಪರ್ಕಿಸುವಂತೆ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲು ಬಿಎಂಆರ್​ಸಿಎಲ್​​ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪಿಂಕ್‌ ಲೈನ್ ಮೆಟ್ರೋ ಮಾರ್ಗದಲ್ಲಿ 100ರಷ್ಟು ಕಾಮಗಾರಿ ಮುಗಿದಿದೆ. ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳನ್ನು ಜೂನ್​ನಲ್ಲಿ ಓಪನ್ ಮಾಡಲು ಪ್ಲಾನ್ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ: ಮೇ 10ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಇದೀಗ ಈ ಮಾರ್ಗವನ್ನು ಕಾಡುಗೋಡಿ ಟ್ರೀ ಪಾರ್ಕ್​​ವರೆಗೆ ವಿಸ್ತರಣೆ ಮಾಡಲು ಬಿಎಂಆರ್​​ಸಿಎಲ್​​ ಮುಂದಾಗಿದೆ. ಈ ಮಾರ್ಗ ಓಪನ್ ಆದರೆ ಬೆಂಗಳೂರಲ್ಲೇ ಅತಿ ಹೆಚ್ಚು ಉದ್ದದ ಮೆಟ್ರೋ ಮಾರ್ಗವಾಗಲಿದೆ. ಈ ಮಾರ್ಗವು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ಟ್ರೀ ಪಾರ್ಕ್, ಚನ್ನಸಂದ್ರ ಹೋಫ್ ಫಾರ್ಮ್ (73 ಕಿ.ಮೀ) ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಮೆಟ್ರೋ ಮಾರ್ಗಕ್ಕಾಗಿ ಫಿಸಿಬಲಿಟಿ ಟೆಸ್ಟ್ ಮಾಡಿದ್ದು, ಅದರ ವರದಿ ಇದೀಗ ಬಿಎಂಆರ್​​ಸಿಎಲ್​ ಕೈಸೇರಿದೆ. ಆ ವರದಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸಲಿದೆ.

ಇನ್ನು ಈ ಮಾರ್ಗದಲ್ಲಿ ಅಂದಾಜು 35 ಮೆಟ್ರೋ ಸ್ಟೇಷನ್​ಗಳನ್ನು ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಇತ್ತ ಅತ್ತಿಬೆಲೆ ಬಳಿ ಕೆಹೆಚ್​​ಬಿ 90 ಸಾವಿರ ಆಸನಗಳ ಸಾಮರ್ಥ್ಯದ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಪಿಂಕ್‌ ಲೈನ್ ವಿಸ್ತರಿಸುವುದರಿಂದ ಪ್ರೇಕ್ಷಕರು ಬಂದು ಹೋಗಲು ಸಹಾಯ ಆಗಲಿವಾಗಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೆಟ್ರೋ ಪ್ರಯಾಣಿಕರು ಈ ಭಾಗದಲ್ಲಿ ಮೆಟ್ರೋ ಓಪನ್ ಆದರೆ ರಾಜಧಾನಿಯಲ್ಲಿ ತುಂಬಾ ದೊಡ್ಡಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ಸಂಘರ್ಷ: ಬೀಳಕಹಳ್ಳಿ ಹೆಸರಿಗಾಗಿ ಸ್ಥಳೀಯರ ಪಟ್ಟು

ಒಟ್ಟಾರೆಯಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಮಹತ್ವಾಕಾಂಕ್ಷಿ ಯೋಜನೆಗೆ ಹಸಿರು ನಿಶಾನೆ ತೋರಿದರೆ, ರಾಜಧಾನಿಯ ಜನರಿಗೆ ಸಂಚಾರದ ಸಂಕಷ್ಟದಿಂದ ದೊಡ್ಡ ಮಟ್ಟದ ವಿನಾಯಿತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು – Kannada News | Sandalwood Actor Upendra talks about Vijay Victory And His Political Stand

ಬೆಂಗಳೂರು, (ಮೇ 08): ತಮಿಳುನಾಡಿನ (Tamil Nadu) ರಾಜಕೀಯದಲ್ಲಿ ದಳಪತಿ ವಿಜಯ್ (Vijay) ನೇತೃತ್ವದ ಟಿವಿಕೆ ಪಕ್ಷವು ಇತಿಹಾಸ ಸೃಷ್ಟಿಸಿದೆ. ಮೊದಲ ವಿಧಾನಸಭಾ ಚುನಾವಣೆಯಲ್ಲಿಯೇ ಟಿವಿಕೆ ಪಕ್ಷವು 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ವಿವಿಧ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ವಿಜಯ್ ಕಸರತ್ತು ನಡೆಸಿದ್ದಾರೆ. ವಿಜಯ್ ಅವರ ಈ ಐತಿಹಾಸಿಕ ಸಾಧನೆಗೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರದ ನಾಯಕರು ಶುಭಾಶಯ ಕೋರಿದ್ದಾರೆ. ಇನ್ನು ವಿಜಯ್ ಅವರ ಅಭೂತಪೂರ್ವ ಗೆಲುವಿಗೆ ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಕೊಂಡಾಡಿದ್ದಾರೆ. ಅಲ್ಲದೇ ಕರ್ನಾಟಕ ರಾಜಕಾರಣದ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ತಮ್ಮ ರಾಜಕೀಯ ನಿಲುವು ಬಗ್ಗೆಯೂ ಮಾತನಾಡಿದ್ದು ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

Source link

ಬೆಂಗಳೂರು-ಚನ್ನಪಟ್ಟಣ ನಡುವೆ BMTC ಎಸಿ ಬಸ್: ಎಲ್ಲೆಲ್ಲಿ ಸ್ಟಾಪ್? ಟಿಕೆಟ್ ದರ ಎಷ್ಟು ಗೊತ್ತಾ? – Kannada News | Bmtc launches ac bus service to channapatna from bengaluru, here Is Stops And Ticket Price Details

ರಾಮನಗರ, (ಮೇ 08): ಅದು ಬೊಂಬೆನಗರಿ ಚನ್ನಪಟ್ಟಣ (Channapatna) ಜನರ ಬಹುದಿನದ ಕನಸು. ನಮ್ಮ ತಾಲೂಕಿಗೂ ಬಿಎಮ್ ಟಿಸಿ ಬಸ್ (BMTC Bus) ಸೌಲಭ್ಯ ಓದಗಿಸಿ ಎಂದು ಕೇಳುತ್ತಿದ್ದರು. ಇದೀಗ ಕೊನೆಗೂ ಸಾರ್ವಜನಿಕರ ಬಹುದಿನದ ಕನಸು ನನಸಾಗಿದೆ. ಹೌದು…ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತು ಬೊಂಬೆಗಳ ನಾಡು ಚನ್ನಪಟ್ಟಣದ ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ (BMTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಎಸಿ ಬಸ್ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇನ್ಮುಂದೆ ಜನರು ಬಿರು ಬೇಸಿಗೆಯಲ್ಲೂ ತಂಪಾಗಿ, ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

  • ಬೊಂಬೆನಗರಿ ಚನ್ನಪಟ್ಟಣ ಜನರ ಬಹುದಿನದ ಕನಸು ನನಸು
  • ಇಂದಿನಿಂದ ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬಂತೂ ವಜ್ರ ವಿಸ್ತಾರ ಹವಾನಿಯಂತ್ರಿತ ಬಸ್ ಸಂಚಾರ
  • ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಸಿ ಪಿ ಯೋಗೇಶ್ವರ್ ಹಾಗೂ ಡಿಕೆ ಸುರೇಶ್.
  • ಇಷ್ಟು ದಿನ ಕೇವಲ ರಾಮನಗರದವರೆಗೂ ಮಾತ್ರ ಬಸ್ ಗಳ ಓಡಾಟವಿತ್ತು, ಇದೀಗ ಚನ್ನಪಟ್ಟಣಕ್ಕೂ ವಿಸ್ತರಣೆ

ಕೆಲಸಕ್ಕೆಂದು ಬೆಂಗಳೂರಿಗೆ ತೆರಳುವವರಿಗೆ ಅನುಕೂಲ

ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿರೋ ಚನ್ನಪಟ್ಟಣದಿಂದ ಪ್ರತಿನಿತ್ಯ ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ಸಾವಿರಾರು ಜನರು ರಾಜಧಾನಿ ಬೆಂಗಳೂರಿಗೆ ಸಂಚಾರಿಸುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಗಳ ಸೌಲಭ್ಯವಿಲ್ಲದೇ ಸಾರ್ವಜನರಿಕರು ಪರದಾಡು ಪರಿಸ್ಥಿತಿ ‌ನಿರ್ಮಾಣವಾಗಿತ್ತು. ಹೀಗಾಗಿ ನಮಗೂ BMTC ಬಸ್ ಸೌಲಭ್ಯ ‌ಕಲ್ಪಿಸಿ ಎಂದು ಮನವಿ ಮಾಡಿದ್ದು. ಇದೀಗ ಜನರ ಮನವಿಗೆ ಸ್ಪಂದಿಸಿರೋ ಸರ್ಕಾರ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಹವಾನಿಯಂತ್ರಿತ ಬಸ್ ಸೇವೆ ಓದಗಿಸಿದೆ.

ಇದನ್ನೂ ಓದಿ: ಮಂಗಳೂರಿಗರ ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಿಕೆ: ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್

ಅಂದಹಾಗೆ ಈ ಹಿಂದೆ ಬೆಂಗಳೂರು ದಕ್ಷಿಣ ‌ಜಿಲ್ಲೆಯ ರಾಮನಗರದವರೆಗೂ ಮಾತ್ರ ಈ ಬಸ್ ಗಳ ಸೌಲಭ್ಯ ದೊರೆತಿತ್ತು. ರಾಮನಗರದಿಂದ ಕೇವಲ 12 ಕಿಲೋಮೀಟರ್ ಇರೋ ರಾಜಧಾನಿಯಿಂದ 50 ಕಿಲೋಮೀಟರ್ ದೂರದಲ್ಲಿರೋ ಚನ್ನಪಟ್ಟಣಕ್ಕೆ ವಿಸ್ತರಿಸಲು ಮನವಿ ಮಾಡಲಾಗಿತ್ತು. ಅದರಿಂದ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಬಸ್ ಸೌಲಭ್ಯ ಸಿಕ್ಕಿದೆ. ಇನ್ನು ಇವತ್ತು ಶಾಸಕ ಸಿ ಪಿ ಯೋಗೇಶ್ವರ್ ಹಾಗೂ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಬಸ್ ಗಳ ಓಡಾಟಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಪ್ರತಿನಿತ್ಯ ಎಂಟು ಬಸ್ ಗಳ ಓಡಾಟ ನಡೆಯಲಿದೆ. ಜೊತೆಗೆ ಇದರ ವಿಸ್ತರಣೆಯನ್ನ ಕನಕಪುರ ಸೇರಿ ಜಿಲ್ಲೆಯಾದ್ಯಂತ ಮಾಡಲು ಕೂಡ ಚಿಂತನೆ ಮಾಡಲಾಗಿದೆ.

ದಿನಕ್ಕೆ 44 ಟ್ರಿಪ್‌ಗಳ ಸಂಚಾರ

ಬೆಂಗಳೂರು ಮತ್ತು ಚನ್ನಪಟ್ಟಣದ ನಡುವೆ ಕೇವಲ ಎಸಿ ಬಸ್‌ಗಳ ಸಂಚಾರ ಮಾತ್ರವಲ್ಲದೆ, ದಿನಕ್ಕೆ ಒಟ್ಟು 44 ಟ್ರಿಪ್‌ಗಳನ್ನು ಈ ಬಸ್‌ಗಳು ಕೈಗೊಳ್ಳಲಿವೆ. ಒಟ್ಟು 8 ಐಷಾರಾಮಿ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ. ಇದರಿಂದಾಗಿ ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಪ್ರಯಾಣಿಕರಿಗೆ ಎಸಿ ಬಸ್ ಸೌಲಭ್ಯ ದೊರೆಯಲಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ನೂರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.

ಬಸ್ ಸ್ಟಾಪ್ ಮತ್ತು ಟಿಕೆಟ್ ದರ ವಿವರ

ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಚನ್ನಪಟ್ಟಣಕ್ಕೆ ಪ್ರಯಾಣಿಸಲು ಬಿಎಂಟಿಸಿ 105 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ರೈಲು ಪ್ರಯಾಣಕ್ಕೆ ಹೋಲಿಸಿದರೆ ಸ್ವಲ್ಪ ದರ ಹೆಚ್ಚಿದ್ದರೂ, ಆರಾಮದಾಯಕ ಪ್ರಯಾಣ ಮತ್ತು ಸಮಯದ ಉಳಿತಾಯವನ್ನು ಗಮನಿಸಿದರೆ ಇದು ಸೂಕ್ತ. ಇನ್ನು ಈ ಬಸ್‌ಗಳು ಚನ್ನಪಟ್ಟಣದಿಂದ ಹೊರಟು ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ. ಇದರಿಂದ ಈ ಎರಡು ಪ್ರಮುಖ ನಗರಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಒಟ್ಟಾರೆ ಚನ್ನಪಟ್ಟಣ ಜನರ ಬಹುದಿನದ ಬೇಡಿಕೆ ಈಡೇರಿದ್ದು, ಸಾರ್ವಜನಿಕರ ಸಂಸತಕ್ಕೂ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ರಂಗಸಾಮಿ – Kannada News | Puducherry Rangasamy meets Lieutenant Governor stakes claim to form government

ಪುದುಚೇರಿ, ಮೇ 8: ಪುದುಚೇರಿಯಲ್ಲಿ ಎನ್‌ಡಿಎ ನಾಯಕರಾಗಿ ಆಯ್ಕೆಯಾದ ಎಐಎನ್‌ಆರ್‌ಸಿ ಮುಖ್ಯಸ್ಥ ಎನ್. ರಂಗಸಾಮಿ ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಸನಾಥನ್ ಅವರನ್ನು ಭೇಟಿ ಮಾಡಿ ಯುಟಿಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಿದ್ದಾರೆ. ಈ ಪತ್ರವನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗಿದೆ. ಈ ವೇಳೆ ರಂಗಸಾಮಿ ಅವರೊಂದಿಗೆ ಮೈತ್ರಿ ಪಕ್ಷಗಳ ಹೊಸದಾಗಿ ಆಯ್ಕೆಯಾದ ಶಾಸಕರು ಕೂಡ ಇದ್ದರು.

ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ಬಂದಿರುವ ಮಾಹಿತಿ ಪ್ರಕಾರ, ರಂಗಸಾಮಿ ಸಲ್ಲಿಸಿದ ಪತ್ರವನ್ನು ಅನುಮೋದನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾಗುವುದು. ಮೇ 13ರಂದು ರಂಗಸಾಮಿ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಸ್ಪರ್ಧಿಸಿದ್ದ 16 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಜಯಗಳಿಸಿತು. ಬಿಜೆಪಿ ಸ್ಪರ್ಧಿಸಿದ್ದ 10 ಸ್ಥಾನಗಳಲ್ಲಿ ನಾಲ್ಕನ್ನು ಗೆದ್ದಿತು. ಎಐಎಡಿಎಂಕೆ ಮತ್ತು ಲಾಚಿಯಾ ಜನನಾಯಕ ಕಚ್ಚಿ (ಎಲ್‌ಜೆಕೆ), ಇತರ ಎನ್‌ಡಿಎ ಘಟಕಗಳು ತಲಾ ಒಂದು ಸ್ಥಾನದಿಂದ ಜಯ ಗಳಿಸಿದವು. 30 ಸದಸ್ಯರ ವಿಧಾನಸಭೆಯಲ್ಲಿ ಈ ಒಕ್ಕೂಟವು 18 ಸ್ಥಾನಗಳನ್ನು ಹೊಂದಿದೆ. ಇದಲ್ಲದೆ, ಮೂರು ನಾಮನಿರ್ದೇಶಿತ ಸದಸ್ಯರಿರುತ್ತಾರೆ.

ಇದನ್ನೂ ಓದಿ: Vijay Swearing-In: ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

ವಿರೋಧ ಪಕ್ಷದ ಡಿಎಂಕೆ ಐದು ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ. ಹೊಸ ಪಕ್ಷ ಟಿವಿಕೆ 2 ಸ್ಥಾನಗಳನ್ನು ಗೆದ್ದಿದೆ. ನಿನ್ನೆ ಮಿತ್ರಪಕ್ಷಗಳ ಶಾಸಕರ ಜಂಟಿ ಸಭೆಯಲ್ಲಿ ರಂಗಸಾಮಿ ಅವರನ್ನು ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗುರುವಾರ ಪುದುಚೇರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ರಂಗಸಾಮಿ, ಲೋಕ ಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶ್ನಾಥನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಚನ್ನಪಟ್ಟಣ ನಡುವೆ BMTC ಎಸಿ ಬಸ್: ಎಲ್ಲೆಲ್ಲಿ ಸ್ಟಾಪ್? ಟಿಕೆಟ್ ದರ ಎಷ್ಟು ಗೊತ್ತಾ? – Kannada News | Bmtc launches ac bus service to channapatna from bengaluru here is stops and ticket price details

ರಾಮನಗರ, (ಮೇ 08): ಅದು ಬೊಂಬೆನಗರಿ ಚನ್ನಪಟ್ಟಣ (Channapatna) ಜನರ ಬಹುದಿನದ ಕನಸು. ನಮ್ಮ ತಾಲೂಕಿಗೂ ಬಿಎಮ್ ಟಿಸಿ ಬಸ್ (BMTC Bus) ಸೌಲಭ್ಯ ಓದಗಿಸಿ ಎಂದು ಕೇಳುತ್ತಿದ್ದರು. ಇದೀಗ ಕೊನೆಗೂ ಸಾರ್ವಜನಿಕರ ಬಹುದಿನದ ಕನಸು ನನಸಾಗಿದೆ. ಹೌದು…ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತು ಬೊಂಬೆಗಳ ನಾಡು ಚನ್ನಪಟ್ಟಣದ ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ (BMTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಎಸಿ ಬಸ್ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇನ್ಮುಂದೆ ಜನರು ಬಿರು ಬೇಸಿಗೆಯಲ್ಲೂ ತಂಪಾಗಿ, ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

  • ಬೊಂಬೆನಗರಿ ಚನ್ನಪಟ್ಟಣ ಜನರ ಬಹುದಿನದ ಕನಸು ನನಸು
  • ಇಂದಿನಿಂದ ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬಂತೂ ವಜ್ರ ವಿಸ್ತಾರ ಹವಾನಿಯಂತ್ರಿತ ಬಸ್ ಸಂಚಾರ
  • ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಸಿ ಪಿ ಯೋಗೇಶ್ವರ್ ಹಾಗೂ ಡಿಕೆ ಸುರೇಶ್.
  • ಇಷ್ಟು ದಿನ ಕೇವಲ ರಾಮನಗರದವರೆಗೂ ಮಾತ್ರ ಬಸ್ ಗಳ ಓಡಾಟವಿತ್ತು, ಇದೀಗ ಚನ್ನಪಟ್ಟಣಕ್ಕೂ ವಿಸ್ತರಣೆ

ಕೆಲಸಕ್ಕೆಂದು ಬೆಂಗಳೂರಿಗೆ ತೆರಳುವವರಿಗೆ ಅನುಕೂಲ

ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿರೋ ಚನ್ನಪಟ್ಟಣದಿಂದ ಪ್ರತಿನಿತ್ಯ ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ಸಾವಿರಾರು ಜನರು ರಾಜಧಾನಿ ಬೆಂಗಳೂರಿಗೆ ಸಂಚಾರಿಸುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಗಳ ಸೌಲಭ್ಯವಿಲ್ಲದೇ ಸಾರ್ವಜನರಿಕರು ಪರದಾಡು ಪರಿಸ್ಥಿತಿ ‌ನಿರ್ಮಾಣವಾಗಿತ್ತು. ಹೀಗಾಗಿ ನಮಗೂ BMTC ಬಸ್ ಸೌಲಭ್ಯ ‌ಕಲ್ಪಿಸಿ ಎಂದು ಮನವಿ ಮಾಡಿದ್ದು. ಇದೀಗ ಜನರ ಮನವಿಗೆ ಸ್ಪಂದಿಸಿರೋ ಸರ್ಕಾರ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಹವಾನಿಯಂತ್ರಿತ ಬಸ್ ಸೇವೆ ಓದಗಿಸಿದೆ.

ಇದನ್ನೂ ಓದಿ: ಮಂಗಳೂರಿಗರ ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಿಕೆ: ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್

ಅಂದಹಾಗೆ ಈ ಹಿಂದೆ ಬೆಂಗಳೂರು ದಕ್ಷಿಣ ‌ಜಿಲ್ಲೆಯ ರಾಮನಗರದವರೆಗೂ ಮಾತ್ರ ಈ ಬಸ್ ಗಳ ಸೌಲಭ್ಯ ದೊರೆತಿತ್ತು. ರಾಮನಗರದಿಂದ ಕೇವಲ 12 ಕಿಲೋಮೀಟರ್ ಇರೋ ರಾಜಧಾನಿಯಿಂದ 50 ಕಿಲೋಮೀಟರ್ ದೂರದಲ್ಲಿರೋ ಚನ್ನಪಟ್ಟಣಕ್ಕೆ ವಿಸ್ತರಿಸಲು ಮನವಿ ಮಾಡಲಾಗಿತ್ತು. ಅದರಿಂದ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಬಸ್ ಸೌಲಭ್ಯ ಸಿಕ್ಕಿದೆ. ಇನ್ನು ಇವತ್ತು ಶಾಸಕ ಸಿ ಪಿ ಯೋಗೇಶ್ವರ್ ಹಾಗೂ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಬಸ್ ಗಳ ಓಡಾಟಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಪ್ರತಿನಿತ್ಯ ಎಂಟು ಬಸ್ ಗಳ ಓಡಾಟ ನಡೆಯಲಿದೆ. ಜೊತೆಗೆ ಇದರ ವಿಸ್ತರಣೆಯನ್ನ ಕನಕಪುರ ಸೇರಿ ಜಿಲ್ಲೆಯಾದ್ಯಂತ ಮಾಡಲು ಕೂಡ ಚಿಂತನೆ ಮಾಡಲಾಗಿದೆ.

ದಿನಕ್ಕೆ 44 ಟ್ರಿಪ್‌ಗಳ ಸಂಚಾರ

ಬೆಂಗಳೂರು ಮತ್ತು ಚನ್ನಪಟ್ಟಣದ ನಡುವೆ ಕೇವಲ ಎಸಿ ಬಸ್‌ಗಳ ಸಂಚಾರ ಮಾತ್ರವಲ್ಲದೆ, ದಿನಕ್ಕೆ ಒಟ್ಟು 44 ಟ್ರಿಪ್‌ಗಳನ್ನು ಈ ಬಸ್‌ಗಳು ಕೈಗೊಳ್ಳಲಿವೆ. ಒಟ್ಟು 8 ಐಷಾರಾಮಿ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ. ಇದರಿಂದಾಗಿ ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಪ್ರಯಾಣಿಕರಿಗೆ ಎಸಿ ಬಸ್ ಸೌಲಭ್ಯ ದೊರೆಯಲಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ನೂರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.

ಬಸ್ ಸ್ಟಾಪ್ ಮತ್ತು ಟಿಕೆಟ್ ದರ ವಿವರ

ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಚನ್ನಪಟ್ಟಣಕ್ಕೆ ಪ್ರಯಾಣಿಸಲು ಬಿಎಂಟಿಸಿ 105 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ರೈಲು ಪ್ರಯಾಣಕ್ಕೆ ಹೋಲಿಸಿದರೆ ಸ್ವಲ್ಪ ದರ ಹೆಚ್ಚಿದ್ದರೂ, ಆರಾಮದಾಯಕ ಪ್ರಯಾಣ ಮತ್ತು ಸಮಯದ ಉಳಿತಾಯವನ್ನು ಗಮನಿಸಿದರೆ ಇದು ಸೂಕ್ತ. ಇನ್ನು ಈ ಬಸ್‌ಗಳು ಚನ್ನಪಟ್ಟಣದಿಂದ ಹೊರಟು ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ. ಇದರಿಂದ ಈ ಎರಡು ಪ್ರಮುಖ ನಗರಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಒಟ್ಟಾರೆ ಚನ್ನಪಟ್ಟಣ ಜನರ ಬಹುದಿನದ ಬೇಡಿಕೆ ಈಡೇರಿದ್ದು, ಸಾರ್ವಜನಿಕರ ಸಂಸತಕ್ಕೂ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

DC vs KKR: 51 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ – Kannada News | IPL 2026: KKR Dominates DC in Match 51; Delhi Collapses to 142 with 51 Dot Balls

ಐಪಿಎಲ್ 2026 (IPL 2026) ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಕೇವಲ 142 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಡೆಲ್ಲಿ ತಂಡದ ಇನ್ನಿಂಗ್ಸ್ ಆರಂಭಿಕರು ಔಟಾದ ಬಳಿಕ ಹಳಿ ತಪ್ಪಿತು. ಇತ್ತ ಡೆಲ್ಲಿ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಕೆಕೆಆರ್ ಬೌಲಿಂಗ್ ವಿಭಾಗ ಪ್ರತಿ ರನ್‌ಗೂ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು. ಇದರ ಪರಿಣಾಮವಾಗಿ ಡೆಲ್ಲಿ ಬರೋಬ್ಬರಿ 51 ಡಾಟ್ ಬಾಲ್‌ಗಳನ್ನು ಆಡಿತು. ಅಂದರೆ ಈ 51 ಎಸೆತಗಳಲ್ಲಿ ಡೆಲ್ಲಿಗೆ ಯಾವುದೇ ರನ್ ಬರಲಿಲ್ಲ.

ಡೆಲ್ಲಿ ತಂಡದ ಬ್ಯಾಟಿಂಗ್‌ ವೈಫಲ್ಯ

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಪಾಥುಮ್ ನಿಸ್ಸಂಕ ಮತ್ತು ಕೆಎಲ್ ರಾಹುಲ್ ಐದು ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 49 ರನ್ ಸೇರಿಸಿದರು. ಪಾಥುಮ್ ನಿಸ್ಸಂಕ 30 ಎಸೆತಗಳಲ್ಲಿ 50 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಕೆಎಲ್ ರಾಹುಲ್ 14 ಎಸೆತಗಳಲ್ಲಿ 23 ರನ್ ಬಾರಿಸಿದರು. ಆದಾಗ್ಯೂ, ಕೆಕೆಆರ್ ತಂಡದ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಮಧ್ಯಮ ಓವರ್‌ಗಳಲ್ಲಿ (7 ರಿಂದ 15 ಓವರ್‌ಗಳು) ಕೆಕೆಆರ್ ಬೌಲರ್​ಗಳು ಪಾರುಪತ್ಯ ಮೆರೆದರು. ಹೀಗಾಗಿ ಡೆಲ್ಲಿ ಕೇವಲ 43 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತು.

ಆದಾಗ್ಯೂ, ಅಂತಿಮ ಓವರ್‌ಗಳಲ್ಲಿ, ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 39 ರನ್ ಗಳಿಸಿ ತಂಡವನ್ನು ಈ ಮೊತ್ತಕ್ಕೆ ಕೊಂಡೊಯ್ದರು. ಆದಾಗ್ಯೂ, ಇತರ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು. ನಿತೀಶ್ ರಾಣಾ 10 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದರೆ, ಸಮೀರ್ ರಿಜ್ವಿ 7 ಎಸೆತಗಳಲ್ಲಿ 3 ರನ್, ಟ್ರಿಸ್ಟಾನ್ ಸ್ಟಬ್ಸ್ ಕೂಡ 4 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ನಾಯಕ ಅಕ್ಷರ್ ಪಟೇಲ್ 22 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದರು. ಆಶ್ಚರ್ಯಕರವಾಗಿ, ಡೆಲ್ಲಿ ಈ ಇನ್ನಿಂಗ್ಸ್‌ನಲ್ಲಿ ಒಟ್ಟು 51 ಡಾಟ್ ಬಾಲ್‌ಗಳನ್ನು ಎದುರಿಸಿತು, ಇದು ಈ ಕಡಿಮೆ ಸ್ಕೋರ್‌ಗೆ ಪ್ರಮುಖ ಕಾರಣವಾಗಿತ್ತು. ಇದಲ್ಲದೆ, ಡೆಲ್ಲಿ ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ 6 ಸಿಕ್ಸರ್‌ಗಳನ್ನು ಮಾತ್ರ ಬಾರಿಸಿತು. ಇದರಲ್ಲಿ ಪಾಥುಮ್ ನಿಸ್ಸಂಕಾ ಮತ್ತು ಅಶುತೋಷ್ ಶರ್ಮಾ ತಲಾ 3 ಸಿಕ್ಸರ್‌ಗಳನ್ನು ಬಾರಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳಿಂದ ಒಂದೇ ಒಂದು ಸಿಕ್ಸರ್ ಸಿಡಿಯಲಿಲ್ಲ.

DC vs KKR IPL 2026 Live Score: ಕೆಕೆಆರ್​​ 2ನೇ ವಿಕೆಟ್ ಪತನ

ಅನುಕುಲ್, ಕಾರ್ತಿಕ್ ಮಾರಕ ದಾಳಿ

ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಅನುಕುಲ್ ರಾಯ್ ಮತ್ತು ಕಾರ್ತಿಕ್ ತ್ಯಾಗಿ ಮಾರಕ ದಾಳಿ ಸಂಘಟಿಸಿದರು. ಇಬ್ಬರೂ ಬೌಲರ್‌ಗಳು ಅತ್ಯಂತ ಕಡಿಮೆ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟು ತಲಾ ಎರಡು ವಿಕೆಟ್ ಪಡೆದರು. ವೈಭವ್ ಅರೋರಾ, ಸುನಿಲ್ ನರೈನ್ ಮತ್ತು ಕ್ಯಾಮರೂನ್ ಗ್ರೀನ್ ಕೂಡ ತಲಾ ಒಂದು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ವಿಕೆಟ್ ಪಡೆಯದಿದ್ದರೂ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 28 ರನ್ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:59 pm, Fri, 8 May 26

Source link

ಶೃಂಗೇರಿ ಕ್ಷೇತ್ರದ ಅಂಚೆ ಮತ ವಿವಾದ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್​​​ನ ರಾಜೇಗೌಡ – Kannada News | Congress TD Rajegowda moves Supreme Court challenging his ouster as Sringeri MLA after vote recount

ನವದೆಹಲಿ.ಚಿಕ್ಕಮಗಳೂರು, (ಮೇ 08): ಶೃಂಗೇರಿ ವಿಧಾನಸಭೆ (sringeri assembly constituency) ಕ್ಷೇತ್ರದ ಅಂಚೆ ಮತಗಳ ವಿವಾದಕ್ಕೆ ಸಂಬಂಧಿಸಿದಂತೆ ಮರು ಎಣಿಕೆಯಲ್ಲಿ ಸೋತ ಕಾಂಗ್ರೆಸ್ ಟಿಡಿ ರಾಜೇಗೌಡ ( TD Rajegowda) ಅವರು ಸುಪ್ರೀಂಕೋರ್ಟ್​ (supreme court)  ಮೆಟ್ಟಿಕೇರಿದ್ದಾರೆ. 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದ್ರೆ, ಅಂಚೆ ಮತಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಜೀವರಾಜ್ ಅವರು ಕಾನೂನೂ ಹೋರಾಟ ಮಾಡಿದ್ದು, ಅಂತಿಮವಾಗಿ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ವೇಳೆ ಜೀವರಾಜ್ ಗೆಲುವು ಸಾಧಿಸಿದ್ದಾರೆ. ಇದೀಗ ರಾಜೇಗೌಡ ಸಹ ಮರು ಎಣಿಕೆಗೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ತ್ವರಿತ ವಿಚಾರಣೆಗೆ ಕೋರಿಕೆಯನ್ನು ಪರಿಗಣಿಸುವುದಾಗಿ ಹೇಳಿದೆ.

  • ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ವಿವಾದ
  • ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕ ಟಿ.ಡಿ ರಾಜೇಗೌಡ
  • ಮರು ಎಣಿಕೆಗೆ ಆದೇಶ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ
  • ಮೇ 11 ರಂದು ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ವಕೀಲ ದೇವದತ್ ಕಾಮತ್ ಮೂಲಕ ಅರ್ಜಿ

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತ ಎಣಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಬಿಜೆಪಿಯ ಡಿಎನ್‌ ಜೀವರಾಜ್ ಅವರು ಹೈಕೋರ್ಟ್​​ ಮೆಟ್ಟಿಲೇರಿದ್ದು, ಸುಮಾರು ಎರಡುವರೆ ವರ್ಷಗಳ ಸತತ ವಿಚಾರಣೆ ಬಳಿಕ ಅಂತಿಮವಾಗಿ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಬಳಿಕ ಕೋರ್ಟ್ ಆದೇಶದಂತೆ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಅಂಚೆ ಮತಗಳ ಮರು ಎಣಿಕೆ ಮಾಡಲಾಗಿದ್ದು, ಇದರಲ್ಲಿ ಬಿಜೆಪಿಯ ಜೀವರಾಜ್ ಅವರು ಗೆಲುವು ಸಾಧಿಸಿದ್ದು, ನಿನ್ನೆ (ಮೇ 07) ಪ್ರಮಾಣ ವಚನ ಸ್ವೀಕರಿಸಿದರು.  ಇದರ ಬೆನ್ನಲ್ಲೇ ಇದೀಗ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್​​​ನ ರಾಜೇಗೌಡ ಸಹ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ‌ ಮತ ಎಣಿಕೆ ವಿವಾದ: ಜೋರಾದ ಅಣೆ ಪ್ರಮಾಣ ರಾಜಕೀಯ

ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಮರುಎಣಿಕೆ ಪ್ರಕ್ರಿಯೆಯನ್ನು ಆದೇಶಿಸುವಲ್ಲಿ ಹೈಕೋರ್ಟ್ ತಪ್ಪು ಮಾಡಿದೆ ಎಂದು ರಾಜೇಗೌಡ ಪರ ವಕೀಲ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದಾರೆ. ಈ ವಾದ ಆಲಿಸಿದ ಸುಪ್ರೀಂಕೋರ್ಟ್, ನಾವು ಇಂತಹ ವಿಷಯಗಳಲ್ಲಿ ತಡೆಯಾಜ್ಞೆ ನೀಡುತ್ತೇವೆ. ಆದರೆ ನಿಮ್ಮ ವಿಷಯವನ್ನು ನಾವು ಪರಿಶೀಲಿಸುತ್ತೇವೆ ಎಂದು ತಿಳಿಸಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್​​​ನ ಟಿಡಿ ರಾಜೇಗೌಡ ಅವರು ಬಿಜೆಪಿಯ ಜೀವರಾಜ್ ಅವರನ್ನು 201 ಮತಗಳ ಅಲ್ಪ ಅಂತರದಿಂದ ಸೋಲಿಸಿದ್ದರು. ಆದ್ರೆ, ಕಾನೂನು ಹೋರಾಟ ನಡೆಸಿ ಮರು ಮತ ಎಣಿಕೆಯಲ್ಲಿ ಬಿಜೆಪಿ ಜೀವರಾಜ್ ಗೆಲುವು ಸಾಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version