‘ಪೂರ್ತಿ ಶೋ ಬಂದರೆ ಏನಾಗಬಹುದು?‘; ಕಿರುತೆರೆ ಲೋಕಕ್ಕೆ ಎಂಟ್ರಿಕೊಡಲು ರೋಹಿತ್ ರೆಡಿ – Kannada News | Rohit Sharma’s Entertainment Debut: From Cricket Pitch to Sony TV Show

ಕ್ರಿಕಟ್ ಲೋಕಕ್ಕೂ ಬಣ್ಣದ ಲೋಕಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ಲೋಕದ ಅನೇಕರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಶೋನಲ್ಲಿ ಮಿಂಚಿದ್ದೂ ಇದೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸರದಿ. ಅವರು ಮೈದಾನದ ಹೊರಗೂ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಹೊಸ ಟೀಸರ್, ರೋಹಿತ್ ಶರ್ಮಾ ಅವರ (Rohit Sharma) ಮನರಂಜನಾ ಲೋಕದ ಪದಾರ್ಪಣೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಸೋನಿ ಪಿಕ್ಚರ್ಸ್ ಹಂಚಿಕೊಂಡಿರುವ ಟೀಸರ್ ಗಮನ ಸೆಳೆದಿದೆ. ರೋಹಿತ್ ಅವರನ್ನು ಫ್ಯಾನ್ಸ್ ಭೇಟಿ ಮಾಡುತ್ತಾರೆ. ಅವರು ಮಾಡಿದ ಸಾಧನೆಯನ್ನು ಹೊಗಳುತ್ತಾರೆ. ಆದರೆ, ಎಲ್ಲರಿಗೂ ಇಷ್ಟ ಆಗಿದ್ದು ಅವರ ಆಟವಲ್ಲ, ಬದಲಿಗೆ ಮೈದಾನದಲ್ಲಿ ಹೇಳಿದ್ದ ‘ಕೋಯಿ ಭಿ ಗಾರ್ಡನ್ ಮೇ ನಹೀ ಘುಮೇಗಾ’ (ಯಾರೂ ಗಾರ್ಡನ್‌ನಲ್ಲಿ ಓಡಾಡುವಂತಿಲ್ಲ) ಎಂಬ ಸಾಲುಗಳು. ಇದನ್ನು ಹೇಳುವಂತೆ ಎಲ್ಲರೂ ಒತ್ತಾಯಿಸುತ್ತಾರೆ.

ಮೈದಾನದಲ್ಲಿ ರೋಹಿತ್ ಆಡಿದ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ವೈರಲ್ ಆಗಿತ್ತು ಎಂದರೆ, ಈಗ ಅದೇ ಸಾಲುಗಳಿಂದ ಎಲ್ಲರೂ ಅವರನ್ನು ಗುರುತಿಸುವಂತಾಗಿದೆ. ಇದಕ್ಕೆ ಪ್ರತಿಕ್ರಿಯಿಸುವ ರೋಹಿತ್, ‘ಕೇವಲ ಎರಡು ಸಾಲು ಹೇಳಿದ್ದಕ್ಕೆ ಇಷ್ಟೊಂದು ವೈರಲ್ ಆಯ್ತು, ಇನ್ನು ನನ್ನ ಪೂರ್ತಿ ಶೋ ಬಂದರೆ ಏನಾಗಬಹುದು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ

ರೋಹಿತ್ ಶರ್ಮಾ ಅವರು ರಿಯಾಲಿಟಿ ಶೋ ಅಥವಾ ಟಾಕ್ ಶೋ ಮೂಲಕ ಕಿರುತೆರೆಗೆ ಬರಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಇದು ಯಾವ ರೀತಿಯ ಶೋ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಈ ಕಾರ್ಯಕ್ರಮವು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್ ಒಟಿಟಿಯಲ್ಲಿ ಶೀಘ್ರದಲ್ಲೇ ಬರಲಿದೆ ಎಂಬುದಷ್ಟೇ ಖಚಿತವಾಗಿದೆ. ವಿಶ್ವಕಪ್ ವಿಜೇತ ನಾಯಕ ಈಗ ಬ್ಯಾಟ್ ಬಿಟ್ಟು ಮೈಕ್ ಹಿಡಿದು ಪ್ರೇಕ್ಷಕರನ್ನು ಹೇಗೆ ರಂಜಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಕೆಎಲ್ ರಾಹುಲ್ – Kannada News | KL Rahul Creates New History In IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಂಡ ಬದಲಾದರೂ ರನ್ ಮಳೆ ನಿಂತಿಲ್ಲ, ದಾಖಲೆಗಳ ಬೇಟೆ ಕೂಡ ನಿಂತಿಲ್ಲ! ಪಂಜಾಬ್‌ನಲ್ಲಿ ಅಬ್ಬರಿಸಿ, ಲಕ್ನೋದಲ್ಲಿ ಮಿಂಚಿ, ಈಗ ಡೆಲ್ಲಿಯಲ್ಲೂ ಅಧಿಪತ್ಯ ಸ್ಥಾಪಿಸಿರುವ ಕೆಎಲ್ ರಾಹುಲ್ (KL Rahul), ಐಪಿಎಲ್‌ನಲ್ಲಿ ಯಾರೂ ಮಾಡದ ‘ತ್ರಿವಳಿ ಸಾವಿರ’ದ ವಿಶೇಷ ದಾಖಲೆ ಬರೆದಿದ್ದಾರೆ. (PC: IPL)

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆ! ಯೆಲ್ಲೋ ಅಲರ್ಟ್​ ಘೋಷಣೆ – Kannada News | Karnataka Rain Update: Heavy Rainfall Predicted in Bengaluru and South Interior Districts; Yellow Alert Issued

ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆ!Image Credit source: MediaForge AI

ಬೆಂಗಳೂರು, ಮೇ 09: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ (Weather) ತಿಳಿಸಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಭಾರೀ ಮಳೆಯಾಗಲಿದ್ದು, 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
  • ಕೊಡಗು ಸೇರಿದಂತೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆ?

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿ ಮೈಸೂರು, ಬಳ್ಳಾರಿ, ಹಾಸನ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್​

ಇಂದು ಮತ್ತು ನಾಳೆ (ಮೇ 9, 10) ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. 64.5 ಮಿ.ಮೀ ಇಂದ 115.5 ಮಿ.ಮೀ ಮಳೆಯಾಗಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಈ ಎರಡು ದಿನ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಪ್ರಾಧಿಕಾರ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:17 am, Sat, 9 May 26

Source link

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್​ಎಸ್ ರಾಜಾ ಸುಬ್ರಮಣಿ ನೇಮಕ: ನೌಕಾಪಡೆಗೆ ಕೃಷ್ಣ ಸ್ವಾಮಿನಾಥನ್ ಮುಖ್ಯಸ್ಥ – Kannada News | Lt Gen NS Raja Subramani Appointed Next CDS; Vice Adm Krishna Swaminathan To Lead Indian Navy

ಲೆಫ್ಟಿನೆಂಟ್ ಜನರಲ್ ಎನ್​ಎಸ್ ರಾಜಾ ಸುಬ್ರಮಣಿ (ಎಡ ಚಿತ್ರ) ಹಾಗೂ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್Image Credit source: ANI

ನವದೆಹಲಿ, ಮೇ 9: ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್​ಎಸ್ ರಾಜಾ ಸುಬ್ರಮಣಿ (Lt Gen NS Raja Subramani) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಜತೆಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡಿದೆ. ದೇಶದ ಭದ್ರತಾ ದೃಷ್ಟಿಯಿಂದ ಈ ನೇಮಕಾತಿಗಳು ಅತ್ಯಂತ ಮಹತ್ವದ್ದಾಗಿವೆ.

ಮುಖ್ಯಾಂಶಗಳು

  • ಪ್ರಸ್ತುತ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರ ಅವಧಿ ಮೇ 30 ಕ್ಕೆ ಮುಕ್ತಾಯಗೊಳ್ಳಲಿದೆ.
  • ಲೆಫ್ಟಿನೆಂಟ್ ಜನರಲ್ ಸುಬ್ರಮಣಿ ಅವರು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.
  • ಸುಬ್ರಮಣಿ ಅವರು ಈ ಹಿಂದೆ ಸೇನಾಪಡೆಯ ಉಪಮುಖ್ಯಸ್ಥರಾಗಿ ಹಾಗೂ ಕೇಂದ್ರ ಕಮಾಂಡ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಅನುಭವದ ಗಣಿ, ರಾಜಾ ಸುಬ್ರಮಣಿ

ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 1 ರಂದು ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು, ಜುಲೈ 2024 ರಿಂದ ಜುಲೈ 2025 ರವರೆಗೆ ಭೂಸೇನೆಯ ಉಪಮುಖ್ಯಸ್ಥರಾಗಿ (Vice Chief of Army Staff) ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಮಾರ್ಚ್ 2023 ರಿಂದ ಜೂನ್ 2024 ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಯಾಗಿದ್ದಾರೆ.

ರಾಜಾ ಸುಬ್ರಮಣಿ ಪಡೆದ ಗೌರವ, ಪದಕಗಳು

ಭಾರತೀಯ ಸೇನೆಯಲ್ಲಿನ ಅವರ ಸುದೀರ್ಘ ಮತ್ತು ನಿಷ್ಠಾವಂತ ಸೇವೆಯನ್ನು ಪರಿಗಣಿಸಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳನ್ನು ನೀಡಲಾಗಿದೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಶೌರ್ಯ ಮತ್ತು ಸೇವಾ ಪದಕಗಳು ಅವರ ಮುಡಿಗೇರಿವೆ. ಮೇ 30 ರಂದು ಜನರಲ್ ಅನಿಲ್ ಚೌಹಾಣ್ ನಿವೃತ್ತರಾದ ಬಳಿಕ ಸುಬ್ರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಜ ಶಿವಾಜಿ’ ಚಿತ್ರದ ಲಾಭ-ನಷ್ಟದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರಿತೇಶ್ ದೇಶ್​​ಮುಖ್ – Kannada News | Raja Shivaji Box Office Budget: Ritesh Deshmukh Clarifies 100 Cr Rumors, Film Earns 55 Cr

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ರಾಜ ಶಿವಾಜಿ’ ಸಿನಿಮಾದ (Raja Shivaji) ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಚಿತ್ರದ ಭರ್ಜರಿ ಗಳಿಕೆಯ ನಡುವೆಯೇ, ಸಿನಿಮಾದ ಬಜೆಟ್ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನಿರ್ದೇಶಕ ಹಾಗೂ ನಟ ರಿತೇಶ್ ದೇಶ್‌ಮುಖ್ ಈಗ ಪೂರ್ಣವಿರಾಮ ಇಟ್ಟಿದ್ದಾರೆ. ಸಿನಿಮಾ 100 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಆಗಿದೆ ಎಂದು ಹೇಳಲಾಗಿತ್ತು. ಈ ವಿಷಯ ಪ್ರೇಕ್ಷಕನಿಗೆ ಮುಖ್ಯವಲ್ಲ ಎಂದಿದ್ದಾರೆ.

‘ರಾಜ ಶಿವಾಜಿ’ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಇದು 100 ಕೋಟಿ ರೂಪಾಯಿ ವೆಚ್ಚದ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿತೇಶ್, ‘ಸಿನಿಮಾದ ಅಸಲಿ ಬಜೆಟ್ ಕೇವಲ ನಿರ್ಮಾಪಕರಿಗೆ ಮಾತ್ರ ತಿಳಿದಿರುತ್ತದೆ. ನೀವು 100 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ ಅಥವಾ 10 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ, ಒಬ್ಬ ಪ್ರೇಕ್ಷಕ ಚಿತ್ರಮಂದಿರಕ್ಕೆ ಬಂದು ಟಿಕೆಟ್​ಗೆ ಎಷ್ಟು ಕೊಡಬೇಕೋ ಅಷ್ಟನ್ನೇ ಕೊಡುತ್ತಾನೆ. ಅವನಿಗೆ ಸಿನಿಮಾ ಇಷ್ಟವಾಗಬೇಕೇ ಹೊರತು, ಅದರ ಹಿಂದಿನ ಖರ್ಚಿನ ಲೆಕ್ಕಾಚಾರವಲ್ಲ’ ಎಂದಿದ್ದಾರೆ ರಿತೇಶ್.

ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು?

‘ನೀವು ಚಿತ್ರಮಂದಿರಕ್ಕೆ 100 ಅಥವಾ 300 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸುತ್ತೀರಿ ಅಷ್ಟೇ ನಿಮಗೆ ಮುಖ್ಯವಾಗಬೇಕು. ಸಿನಿಮಾದ ಮ್ಯಾಜಿಕ್ ಅನ್ನು ಅನುಭವಿಸಿ ಹೊರಬರಬೇಕೇ ಹೊರತು, ಅದರ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅಮಿತಾಭ್ ಬಚ್ಚನ್ ಅವರ ‘ಶೋಲೆ’ ಕಾಲದಲ್ಲಿ ಯಾರೂ ಬಜೆಟ್ ಬಗ್ಗೆ ಕೇಳುತ್ತಿರಲಿಲ್ಲ, ಕೇವಲ ಮನರಂಜನೆಯನ್ನಷ್ಟೇ ಬಯಸುತ್ತಿದ್ದರು’ ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

8 ದಿನಗಳಲ್ಲಿ 55 ಕೋಟಿ ದಾಟಿದ ಗಳಿಕೆ

ಮೇ 1 ರಂದು ಬಿಡುಗಡೆಯಾದ ‘ರಾಜ ಶಿವಾಜಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಕೇವಲ 8 ದಿನಗಳಲ್ಲಿ ಸಿನಿಮಾ 55 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಚಿತ್ರಮಂದಿರದ ಗಳಿಕೆಯಷ್ಟೇ ಅಲ್ಲದೆ, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮಾರಾಟದಿಂದಲೂ ಚಿತ್ರಕ್ಕೆ ದೊಡ್ಡ ಮೊತ್ತದ ಆದಾಯ ಬಂದಿದೆ. ರಿತೇಶ್ ಹೇಳುವಂತೆ ಬಜೆಟ್ 100 ಕೋಟಿಗಿಂತ ಕಡಿಮೆ ಇದ್ದಲ್ಲಿ, ಈಗಾಗಲೇ ಗಳಿಸಿರುವ 55 ಕೋಟಿ ಹಾಗೂ ಡಿಜಿಟಲ್ ಹಕ್ಕುಗಳ ಆದಾಯವನ್ನು ಸೇರಿಸಿದರೆ ನಿರ್ಮಾಪಕರು ಲಾಭವನ್ನು ಜೇಬಿಗಿಳಿಸುವುದು ಖಚಿತವಾಗಿದೆ. ಸಿನಿಮಾ ನಷ್ಟದಲ್ಲಿದೆ ಎಂದೆಲ್ಲ ವರದಿ ಬಂದಿತ್ತು. ಆದರೆ, ರಿತೇಶ್ ಹೇಳಿಕೆಯಿಂದ ಲಾಭ-ನಷ್ಟದ ಲೆಕ್ಕಾಚಾರ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 9, ಶನಿರವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ ತಿಥಿ, ಶ್ರವಣ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ ಈ ದಿನವು ಹಲವು ವಿಶೇಷತೆಗಳನ್ನು ಹೊಂದಿದೆ. ರಾಹುಕಾಲವು ಬೆಳಗ್ಗೆ 9:05 ರಿಂದ 10:40ರ ವರೆಗೆ ಇರಲಿದ್ದು, ಸರ್ವ ಸಿದ್ಧಿ ಹಾಗೂ ಸಂಕಲ್ಪ ಕಾಲವು ಮಧ್ಯಾಹ್ನ 1:01 ರಿಂದ 3:26ರ ವರೆಗೆ ಇರುತ್ತದೆ.

ಇದು ಸಾಕ್ಷಾತ್ ವೆಂಕಟೇಶ್ವರನ ಲಹರಿಗಳು ಮತ್ತು ಶನಿ ಭಗವಾನ್‌ರ ಪ್ರಭಾವವಿರುವ ದಿನ. ಹನುಮನ ಕೃಪೆಗೆ ಪಾತ್ರರಾಗಲು ಸೂಕ್ತವಾದ ದಿನವೂ ಹೌದು. ಇಂದು ಬ್ಯಾಂಕ್ ಹಾಲಿಡೇ (ಎರಡನೇ ಶನಿವಾರ) ಆಗಿದ್ದು, ಶ್ರೀರಾಮ ಪಟ್ಟಾಭಿಷೇಕದ ದಿನವೂ ಆಗಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

Daily Devotional: ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ? – Kannada News | Is Baldness a Sign of Good Luck? Astrological Benefits and Insights by Dr. Basavaraja Guruji

ಬೋಳು ತಲೆ ಇದ್ದವರಿಗೆ ಅದೃಷ್ಟ ಯಾವ ರೀತಿ ಇರಲಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವೈಜ್ಞಾನಿಕವಾಗಿ, ಆಹಾರ ಪದ್ಧತಿ, ವಾಸಿಸುವ ಸ್ಥಳ, ಮತ್ತು ಅನುವಂಶೀಯತೆ (ಹೆರಿಡಿಟ್ರಿ) ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳಾಗಿವೆ. ಆದರೆ ಜ್ಯೋತಿಷ್ಯದ ಪ್ರಕಾರ, ರವಿ, ಮಂಗಳ ಮತ್ತು ಕೇತು ಗ್ರಹಗಳ ಪ್ರಭಾವ ಅಥವಾ ಅವುಗಳ ನೀಚ ದೃಷ್ಟಿಯು ಬೋಳುತಲೆಗೆ ಕಾರಣವಾಗಬಹುದು. ಜಾತಕದಲ್ಲಿ ಮೊದಲನೇ ಮನೆಯಾದ ಶಿರಸ್ಸಿಗೆ ಸಂಬಂಧಿಸಿದಂತೆ ಈ ಗ್ರಹಗಳ ಸ್ಥಾನಗಳು ಮಹತ್ವಪೂರ್ಣವಾಗಿವೆ.

ಆಧ್ಯಾತ್ಮಿಕವಾಗಿ, ಬೋಳುತಲೆಯನ್ನು ಸೂರ್ಯ ಗ್ರಹದ (ರವಿ ಗ್ರಹ) ಪ್ರಭಾವ ಹೆಚ್ಚಾದ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯಲ್ಲಿ ಅಪಾರ ಜ್ಞಾನ, ಬುದ್ಧಿಶಕ್ತಿ, ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಬೋಳುತಲೆ ಹೊಂದಿದವರು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವುದನ್ನು ಇತಿಹಾಸದಲ್ಲಿ ಕಾಣಬಹುದು. ಕೃತಕ ವಿಧಾನಗಳಿಂದ ಬೋಳುತಲೆಯನ್ನು ಮರೆಮಾಚುವುದು ಈ ಶುಭ ಅದೃಷ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಬೋಳುತಲೆ ಹೊಂದಿದ ವ್ಯಕ್ತಿಗಳಲ್ಲಿ ವಾಕ್ ಶಕ್ತಿ, ಆಲೋಚನಾ ಶಕ್ತಿ ಮತ್ತು ಪ್ರಬುದ್ಧತೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

ಬಂಗಾಳದಲ್ಲಿ ಹೊಸ ಇತಿಹಾಸ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಇಂದು ಪ್ರಮಾಣ ವಚನ – Kannada News | Suvendu Adhikari To Be Sworn In As First BJP CM Of West Bengal; Amit Shah Attends Ceremony On Tagore Jayanti

ಅಮಿತ್ ಶಾ ಹಾಗೂ ಸುವೇಂದು ಅಧಿಕಾರಿImage Credit source: TV9 Network

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ (BJP), ಮೊದಲ ಬಾರಿಗೆ ಬಂಗಾಳದ ಗದ್ದುಗೆ ಏರುತ್ತಿದೆ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ (Suvendu Adhikari) ಇಂದು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನಂದಿಗ್ರಾಮದ ಹೋರಾಟದಿಂದ ಹಿಡಿದು ವಿಧಾನಸಭೆಯ ಅಂಗಳದವರೆಗೆ ಸುವೇಂದು ಅಧಿಕಾರಿ ನಡೆದು ಬಂದ ಹಾದಿ ಅತ್ಯಂತ ರೋಚಕವಾಗಿದೆ.

ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ 293 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.
  • ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನದಂದೇ ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸ್ವೀಕಾರ ನಡೆಯುತ್ತಿದೆ.
  • 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ನಂದಿಗ್ರಾಮದಲ್ಲಿ ಸೋಲಿಸಿದ್ದ ಸುವೇಂದು ಅಧಿಕಾರಿ, ಈಗ ರಾಜ್ಯದ ಸಿಎಂ ಆಗುತ್ತಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ

ಕೋಲ್ಕತ್ತಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಸುವೇಂದು ಅಧಿಕಾರಿಯನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಮಿತ್ ಶಾ ಅವರು ಅಧಿಕಾರಿ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸುವೇಂದು ಅವರು ಸಂಘರ್ಷದ ಹಾದಿಯಲ್ಲಿ ಬಂದವರು. ಅವರಿಗೆ ಆಡಳಿತದ ಅನುಭವವಿದೆ. ಬಂಗಾಳದ ಜನತೆಯ ಆಸೆಗಳನ್ನು ಪೂರ್ಣಗೊಳಿಸಲು ಅವರು ಸಮರ್ಥರಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಠಾಗೋರ್ ಜಯಂತಿಯಂದೇ ಪ್ರಮಾಣ ವಚನ

ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಅವರು ಈಗಾಗಲೇ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇಂದು (ಮೇ 9) ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನವಾಗಿದ್ದು, ಬಂಗಾಳಿಗರ ಭಾವನೆಗಳಿಗೆ ಗೌರವ ನೀಡುವ ದೃಷ್ಟಿಯಿಂದ ಇದೇ ದಿನವನ್ನು ಅಧಿಕಾರ ಸ್ವೀಕಾರಕ್ಕೆ ನಿಗದಿಪಡಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಸುವೇಂದು ಅಧಿಕಾರಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುವೇಂದು ಅಧಿಕಾರಿ ರಾಜಕೀಯ ಹಾದಿ

1995ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ ಸುವೇಂದು, ನಂತರ ತೃಣಮೂಲ ಕಾಂಗ್ರೆಸ್ ಸೇರಿದ್ದರು. ನಂದಿಗ್ರಾಮ ಮತ್ತು ಸಿಂಗೂರಿನ ಭೂಸ್ವಾಧೀನ ವಿರೋಧಿ ಚಳವಳಿಗಳ ಮೂಲಕ ಜನನಾಯಕನಾಗಿ ಬೆಳೆದರು. 2009 ಮತ್ತು 2014ರಲ್ಲಿ ಸಂಸದರಾಗಿದ್ದ ಅವರು, ಈ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು.

ಇದನ್ನೂ ಓದಿ: ಬಂಗಾಳದ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ

ಆದರೆ, ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಉಂಟಾದ ಭಿನ್ನಮತದಿಂದಾಗಿ 2020ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು 1,956 ಮತಗಳಿಂದ ಸೋಲಿಸುವ ಮೂಲಕ ಇತಿಹಾಸ ಬರೆದಿದ್ದ ಅವರು, ರಾಜ್ಯದ ಪ್ರಬಲ ವಿರೋಧ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಈ ರಾಶಿಯವರು ಕೆಲಸದಲ್ಲಿ ಯಶಸ್ಸು ಕಾಣುವರು; ಆರ್ಥಿಕ ಸ್ಥಿತಿ ಸುಧಾರಣೆ – Kannada News | Horoscope Today, May 9, 2026: These Zodiac Signs Will See Career Success and Financial Growth

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶುಕ್ಲ, ಕರಣ : ಬಾಲವ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:11 – 10:46, ಯಮಗಂಡ ಕಾಲ 13:56 – 15:31, ಗುಳಿಕ ಕಾಲ 06:00 – 07:35.

ಮೇಷ ರಾಶಿ: ಆಸ್ತಿ ವಿವಾದವು ನಿಮಗೆ ಅನುಕೂಲಕರವಾಗಿ ಬಗೆಹರಿಯುತ್ತದೆ. ಪಾಲುದಾರರ ಬಗ್ಗೆ ಕಿವಿಕಚ್ಚುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರವು ತುಂಬಾ ಅನುಕೂಲಕರವಾಗಿ ಮುಂದುವರಿಯುತ್ತದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.

ವೃಷಭ ರಾಶಿ: ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನು ಮಾಡಲು ನೀವು ಒಂದು ಉತ್ತಮ ಮಾರ್ಗವನ್ನು ಕಂಡುಕೊಳ್ಳುವಿರಿ. ಅಂತಶ್ಶತ್ರುವಿನ ಬಗ್ಗೆ ಗಮನ ಕೊಡದೇ ನಿಮಗೆ ಸೋಲಾಗಬಹುದು. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕೆಲವು ವಿಶೇಷ ಕೆಲಸಗಳಿಗಾಗಿ ನೀವು ಮಾಡುತ್ತಿರುವ ಪ್ರಯತ್ನಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ನಿಮ್ಮ ಮಿತಿಯಲ್ಲಿ ಉಳಿತಾಯ ಮಾಡುವಿರಿ. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು.

ಮಿಥುನ ರಾಶಿ: ವ್ಯವಹಾರದಲ್ಲಿ ಇಂದು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸುತ್ತೀರಿ. ತಾರ್ಕಿಕ‌ ಅಂತ್ಯವನ್ನು ಸಂಬಂಧದಲ್ಲಿ ಮಾಡಿಕೊಳ್ಳುವಿರಿ. ಭಾವನೆಗಳನ್ನು ಬಂಧದಿಂದ ಬಿಡುಗಡೆ. ನಿಮಗೆ ಬೇಕಾಗಿರುವ ಹಣವು ಸಿಗಲು ಪ್ರಾರಂಭವಾಗುತ್ತದೆ. ಪ್ರಮುಖ ಕೆಲಸಗಳು ಪರಿಶ್ರಮದಿಂದ ಪೂರ್ಣಗೊಳ್ಳುತ್ತವೆ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ನಿಮ್ಮ ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು.

ಕರ್ಕಾಟಕ ರಾಶಿ: ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು. ಪ್ರಮುಖ ವಿಷಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಕ್ಕೆ ಆಸಕ್ತಿ ಇರಲಿದ್ದು ತೊಡಕು ನಿವಾರಣೆ ಮಾಡದೇ ಸಾಧ್ಯವಾಗದು. ವಾಹನ ಖರೀದಯ ಪ್ರಯತ್ನ ಕೈಗೂಡಲಿವೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ.

ಸಿಂಹ ರಾಶಿ: ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಕುಟುಂಬದಿಂದ ಅನರಿಕ್ಷಿತ ಸುದ್ದಿ, ಬೇಸರವಾಗಲಿದೆ. ವ್ಯವಹಾರದಲ್ಲಿನ ಚಟುವಟಿಕೆಗಳು ಬಹಳವಾಗಿ ಬೆಳೆಯುತ್ತವೆ. ಕುಟುಂಬ ಜೀವನವು ಶಾಂತಿಯುತವಾಗಿ ಮುಂದುವರಿಯುತ್ತದೆ. ಮಕ್ಕಳ ಜೊತೆ ಎಲ್ಲಿಗಾದರೂ ಸುತ್ತಾಡಲು ಹೋಗುವಿರಿ. ವ್ಯವಹಾರಗಳು ಲಾಭದಾಯಕವಾಗುತ್ತವೆ. ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಆರ್ಥಿಕ ವ್ಯವಹಾರವನ್ನು ಉತ್ತಮ‌ ರೀತಿಯಲ್ಲಿ ನಿರ್ವಹಿಸುವಿರಿ. ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು. ಕೆಲವು ಸಂಬಂಧಿಕರಿಂದಾಗಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಮಕ್ಕಳ ಖರ್ಚಿಗಾಗಿಯೇ ಒಂದಿಷ್ಟು ಹಣವನ್ನು ಪ್ರೀತಿಯಿಂದ ಕೊಡುವಿರಿ. ಮನೆಯ ಸ್ಥಳವನ್ನು ಬದಲಾಯಿಸಬೇಕಾಗಬಹುದು.

ತುಲಾ ರಾಶಿ: ಪರರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡು ಕಳೆಯುವಿರಿ. ವ್ಯವಹಾರದಲ್ಲಿನ ಹಳೆಯ ನಷ್ಟಗಳಿಂದ ಚೇತರಿಸಿಕೊಳ್ಳುವ ಕೆಲಸ ಪ್ರಾರಂಭವಾಗಬಹುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ದೈವಭಕ್ತಿಯಿಂದ ಮನಸ್ಸಿನ ಗೊಂದಲವನ್ನು ಪರಿಹರಿಸಿಕೊಂಡು ಸ್ಥೈರ್ಯವನ್ನು ತಂದುಕೊಳ್ಳುಬಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ.

ವೃಶ್ಚಿಕ ರಾಶಿ: ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗಿಬರಬಹುದು. ಸ್ವಂತವಾಗಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಉದ್ಯಮದಲ್ಲಿ ಸ್ವಲ್ಪಮಟ್ಟಿನ ಒತ್ತಡ ಕಾಣಿಸುವುದು. ನಿರ್ಮಾಣದ ಬಗ್ಗೆ ಯೋಗ್ಯ ವ್ಯಕ್ತಿಗಳ ಜೊತೆ ಸಂವಹನ‌ ನಡೆಸಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಇಚ್ಛೆ ಇರಲಿದೆ.

ಧನು ರಾಶಿ: ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸುವಂತೆ ಮಾಡಿದರೂ ನೀವು ಅದನ್ನು ಬಿಡಲಾರಿರಿ. ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ನಿಮ್ಮ ಖರ್ಚುಗಳನ್ನು ಸಹ ನಿಯಂತ್ರಣದಲ್ಲಿಡಿ. ಮಹಿಳೆಯರ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಆದಾಯವು ಉತ್ತಮವಾಗಿ ಉಳಿಯುತ್ತದೆ. ಎಲ್ಲರಿಂದ ಪ್ರೀತಿ ಕಡಿಮೆಯಾದಂತೆ ತೋರುವುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಯುಕ್ತಿಯಿಂದ ಕೆಲಸ ಮಾಡುವುದು ಒಳಿತು.

ಮಕರ ರಾಶಿ: ಯಾರಿಂದಲೂ ಪ್ರಶ‌ಂಸೆಯನ್ನು ನಿರೀಕ್ಷಿಸಲಾರಿರಿ. ಸ್ವಚ್ಛತೆ ಸರಿಯಾಗಿ ಆಗಿಲ್ಲ ಎಂದು ಅನ್ನಿಸಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ, ಶಾಂತ ಮನಸ್ಸಿನಿಂದ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ನಿಮ್ಮ ಸರಿಯಾದ ಕೆಲಸವನ್ನು ಮಾಡಿ. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ.

ಕುಂಭ ರಾಶಿ: ಸುತ್ತಲಿನ ಪರಿಸ್ಥಿತಿಯನ್ನು ಗಮನಿಸಿಕೊಂಡು ವ್ಯವಹರಿಸಿ. ಕೆಲವು ಸಮಯದಿಂದ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಸಂತೋಷ, ತೃಪ್ತಿ ವಾತಾವರಣ ಇರುತ್ತದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸ್ಥಾನ ಅಥವಾ ಯಶಸ್ಸನ್ನು ಈಗ ಸಾಧಿಸಬಹುದು. ಬಡ್ತಿ ಅಥವಾ ಅಪೇಕ್ಷಿತ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ.

ಮೀನ ರಾಶಿ: ಪರರಿಂದ ತೊಂದರೆಯ ಆಗಿರುವ ಭೀತಿ ಕಾಡಲಿದೆ. ಸ್ವಂತ ಉದ್ಯಮಿಗಳು ಹೆಚ್ಚಿನ ಲಾಭವನ್ನೂ ಪಡೆಯುವರು. ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ಗಳಿಕೆಯ ಮಾರ್ಗಗಳು ಹೆಚ್ಚಾಗುತ್ತವೆ. ಶಾಂತವಾಗಿ ಕೆಲಸ ಮಾಡುವುದರಿಂದ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಕಳೆದುಕೊಂಡ ವಸ್ತುವನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಇಷ್ಟವಾಗದು.

ಲೋಹಿತ ಹೆಬ್ಬಾರ್ – 8762924271 (what’s app only)

Source link

DC vs KKR: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ; ವಿಡಿಯೋ – Kannada News | IPL 2026: KKR vs DC Match 51 Highlights – Rahane, Raghuvanshi’s Unlucky Dismissals Explained

ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಕೇವಲ 142 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಿಚೆಲ್ ಸ್ಟಾರ್ಕ್​ ಎಸೆದ 3ನೇ ಓವರ್ ಕೆಕೆಆರ್ ತಂಡಕ್ಕೆ ಆಘಾತ ನೀಡಿತು.

ಸ್ಟಾರ್ಕ್​ ಎಸೆದ ಈ ಓವರ್​ನ ಕೊನೆಯ ಎಸೆತವನ್ನು ಅಲೆನ್ ಸ್ಟ್ರೈಟ್ ಹಿಟ್ ಮಾಡಿದರು. ಹೀಗಾಗಿ ಬೌಲರ್ ಸ್ಟಾರ್ಕ್​ ಅದನ್ನು ಕ್ಯಾಚ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಚೆಂಡು ಸ್ಟಾರ್ಕ್ ಅವರ ಕೈಗೆ ತಾಗಿ ನೇರವಾಗಿ ವಿಕೆಟ್​ಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್​ನಲ್ಲಿದ್ದ ರಹಾನೆ ರನ್​ಗಾಗಿ ಓಡಲು ವಿಕೆಟ್ ಬಿಟ್ಟಿದ್ದರು. ಹೀಗಾಗಿ ರಹಾನೆ ರನೌಟ್ ಆಗಬೇಕಾಯಿತು.

ಈ ಓವರ್ ಮುಗಿದ ಮುಂದಿನ ಓವರ್​ನಲ್ಲೇ ಅಂದರೆ 4ನೇ ಓವರ್​ನಲ್ಲಿ ಅಂಗ್ಕ್ರೀಶ್ ರಘುವಂಶಿ ಸ್ಟ್ರೈಕ್​ಗೆ ಬಂದರು. ಅಕ್ಷರ್ ಪಟೇಲ್ ಬೌಲ್ ಮಾಡಿದ ಈ ಓವರ್​ನ 4ನೇ ಎಸೆತವನ್ನು ರಘುವಂಶಿ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಸಫಲರಾಗಲಿಲ್ಲ. ಹೀಗಾಗಿ ಚೆಂಡು ರಘುವಂಶಿ ಅವರ ಪ್ಯಾಡ್​ಗೆ ತಗುಲಿ ನೆಲದಿಂದ ಪುಟಿದು ಸೀದ ವಿಕೆಟ್​​ಗೆ ಬಡಿಯಿತು. ಹೀಗಾಗಿ ರಹಾನೆ ಹಾಗೂ ರಘುವಂಶಿ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version